Saturday, August 9, 2025

Latest Posts

ನಿಮ್ಮ ಮಕ್ಕಳಿಗೂ ಮೊಬೈಲ್ ಚಟ ಬಿಡಿಸಬೇಕೇ..? ನೀವೂ ಈ ಟೀಚರ್ ಮಾಡಿದ ಹಾಗೇ ಮಾಡಿ..

- Advertisement -

Uttar Pradesh: ಇಂದಿನ ಪುಟ್ಟ ಪುಟ್ಟ ಮಕ್ಕಳಿಗೆ ಟಿವಿ ಜೊತೆ ಮೊಬೈಲ್ ನೋಡುವ ಚಟ ಜೋರಾಗಿದೆ. ಕೆಲ ತಂದೆ ತಾಯಿಗಳಿಗೆ ಮೊಬೈಲ್ ಮಕ್ಕಳ ಆರೋಗ್ಯಕ್ಕೆ ಎಷ್ಟು ಹಾನಿಕಾರಕ ಅಂತಾ ಗೊತ್ತಿದ್ದರೂ ಕೂಡ, ತಾವು ಫ್ರೀ ಆಗಿರಬೇಕು ಎಂದು ಮಕ್ಕಳಿಗೆ ಮೊಬೈಲ್ ಕೊಟ್ಟು ಕೂರಿಸುತ್ತಾರೆ.

ಈ ರೀತಿ ಮೊಬೈಲ್ ಚಟ ಹತ್ತಿರುವ ಮಕ್ಕಳ ಮೊಬೈಲ್ ಚಟ ಬಿಡಿಸಲು, ಉತ್ತರಪ್ರದೇಶದ ಶಾಲೆಯೊಂದರ ಶಿಕ್ಷಕಿ, ಮಸ್ತ್ ಐಡಿಯಾ ಮಾಡಿದ್ದಾರೆ.

ಕಣ್ಣಿಗೆ ರಕ್ತ ಬಂದಿರುವ ರೀತಿ ಬ್ಯಾಂಡೇಜ್‌ ಸುತ್ತಿರುವ ರೀತಿ, ನಟಿಸಿ, ತಾವು ಮೊಬೈಲ್ ಬಳಸಿದ ಕಾರಣಕ್ಕೆ, ತಮ್ಮ ಕಣ್ಣಿನಿಂದ ರಕ್ತ ಬರುತ್ತಿದೆ. ನೀವು ಮೊಬೈಲ್ ಬಳಸಬೇಡಿ ಎಂದು ತಿಳಿ ಹೇಳಿದ್ದಾರೆ. ಇದನ್ನು ನೋಡಿರುವ ಮಕ್ಕಳು ಕಂಗಾಲಾಗಿದ್ದು, ಅವರ ಕೈಗೆ ಮೊಬೈಲ್ ಕೊಟ್ಟರೂ, ಅದನ್ನು ತೆಗೆದುಕೊಳ್ಳದೇ, ತಾವು ಇನ್ನು ಮುಂದೆ ಮೊಬೈಲ್ ಬಳಸುವುದಿಲ್ಲ ಎಂದಿದ್ದಾರೆ.

ಈ ವೀಡಿಯೋ ಎಕ್ಸ್‌ನಲ್ಲಿ ಸಖತ್ ವೈರಲ್ ಆಗಿದ್ದು, ಶಿಕ್ಷಕಿಯ ಈ ಐಡಿಯಾಗೆ ಎಲ್ಲರೂ ಭೇಷ್ ಎಂದಿದ್ದಾರೆ. ಅಲ್ಲದೇ, ಎಲ್ಲ ಶಾಲೆಗಳಲ್ಲಿ ಇದೇ ರೀತಿಯಾಗಿ ಮಕ್ಕಳಿಗೆ ಮೊಬೈಲ್ ಬಳಕೆಯ ಬಗ್ಗೆ ಹೆದರಿಕೆ ಹುಟ್ಟಿಸಿದರೆ, ಉತ್ತಮ ಅಂತಾ ಹೇಳಿದ್ದಾರೆ.

https://youtu.be/uqBkJ-j2y4Y

- Advertisement -

Latest Posts

Don't Miss