Sunday, November 16, 2025

Latest Posts

ಲೇಡಿ ಸೂಪರ್‌ಸ್ಟಾರ್ ನಯನ ತಾರಾ ಎಕ್ಸ್ ಖಾತೆ ಹ್ಯಾಕ್: ಸೈಬರ್ ಠಾಣೆಗೆ ದೂರು

- Advertisement -

Movie News: ಖ್ಯಾತ ನಟಿ ನಯನತಾರಾ ಎಕ್ಸ್ ಖಾತೆ ಹ್ಯಾಕ್ ಆಗಿದೆ. ಹೀಗಾಗಿ ನಟಿ, ತಮ್ಮ ಎಕ್ಸ್ ಖಾತೆಗೆ ಯಾವುದೇ ಮೆಸೆಜ್, ರಿಕ್ವೆಸ್ಟ ಬಂದರೂ ನಾನು ಅದಕ್ಕೆ ಪ್ರತಿಕ್ರಿಯಿಸುವುದಿಲ್ಲ. ನನ್ನ ಖಾತೆ ಹ್ಯಾಕ್ ಆಗಿದ್ದು, ಅದು ಸರಿಯಾಗುವವರೆಗೂ ಯಾರೂ ನನಗೆ ಸಂದೇಶ ರವಾನಿಸಬೇಡಿ ಎಂದು ಹೇಳಿದ್ದಾರೆ.

ಯಾವುದೇ ಅನಗತ್ಯ ಟ್ವೀಟ್ ಅಥವಾ ಅನುಮಾನ ಬರುವಂಥ ಪೋಸ್ಟ್ ಹಾಕಿದ್ದರೆ, ಅದನ್ನು ನಂಬಬೇಡಿ ಎಂದು ನಯನತಾರಾ ಅಭಿಮಾನಿಗಳಿಗೆ ಕರೆ ನೀಡಿದ್ದಾರೆ. ಈ ಮಾತು ಅವರು ಹೇಳಿದ್ದು ಯಾಕೆ ಅಂದ್ರೆ, ನಯನತಾರಾ ಕಮರ್ಷಿಯಲ್ ಆ್ಯಡ್‌ಗಳಿಗೆ ಸಂಬಂಧಿಸಿದ ಪೋಸ್ಟ್ ಹಾಕುತ್ತಿರುತ್ತಾರೆ. ಆ ರೀತಿ ಯಾವುದಾದರೂ ಆ್ಯಡ್ ಸದ್ಯಕ್ಕೆ ಕಾಣಿಸಿಕೊಂಡರೆ, ಅದನ್ನು ನಂಬಬೇಡಿ ಎಂದು ನಯನತಾರಾ ಹೇಳಿದ್ದಾರೆ.

ಸೆಲೆಬ್ರಿಟಿಗಳ ಎಕ್ಸ್ ಖಾತೆ, ಇನ್‌ಸ್ಟಾಗ್ರಾಮ್, ಯುಟ್ಯೂಬ್ ಚಾನೆಲ್ ಹ್ಯಾಕ್ ಆಗುತ್ತಲೇ ಇರುತ್ತದೆ. ಸದ್ಯ ನಯನತಾರಾ ಸೈಬರ್ ಕ್ರೈಮ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

- Advertisement -

Latest Posts

Don't Miss