Tuesday, October 15, 2024

Latest Posts

Health Tips: ಮುಟ್ಟಿನ ಸಮಯದಲ್ಲಿ ಸಮಸ್ಯೆಗಳು ಕಾಡ್ತಾ ಇದ್ಯಾ?

- Advertisement -

Health Tips: ಮುಟ್ಟು ಅನ್ನೋದು ತುಂಬಾ ಕಾಮನ್ ವಿಷಯ. ಪ್ರತೀ ಹೆಣ್ಣು ಮಕ್ಕಳು ಅನುಭವಿಸಲೇಬೇಕಾದ ನೋವು. ಆದರೆ ನೀವಂದುಕೊಂಡಷ್ಟು ಕಾಮನ್ ಆಗಿರುವುದಿಲ್ಲ ಈ ಹಿಂಸೆ. ಆ ಹಿಂಸೆ ಹೇಗಿರತ್ತೆ ಎಂದು ಅದನ್ನು ಅನುಭವಿಸಿದ ಹೆಣ್ಣು ಮಕ್ಕಳಿಗಷ್ಟೇ ಗೊತ್ತಿರುತ್ತದೆ. ಮುಟ್ಟಿನ ಸಮಯದಲ್ಲಿ ಆಗುವ ತೊಂದರೆಗಳ ಬಗ್ಗೆ ಪಾರಂಪರಿಕ ವೈದ್ಯ ಡಾ.ಪವಿತ್ರಾ ಮಾತನಾಡಿದ್ದಾರೆ.

ಮುಟ್ಟಾದ ಸಂದರ್ಭದಲ್ಲಿ ಹೊಟ್ಟೆ ನೋವು, ಬೆನ್ನು ನೋವು, ಕೈ ಕಾಲು ನೋವಾಗುತ್ತದೆ. ಕೆಲವರಿಗೆ ತುಂಬಾ ಹೊಟ್ಟೆನೋವು, ಮೈ ಕೈ ನೋವಾಗುತ್ತದೆ. ಇನ್ನು ಕೆಲವರಿಗೆ ಮುಟ್ಟಾಗಿದ್ದು ಗೊತ್ತೇ ಆಗುವುದಿಲ್ಲ. ಅಷ್ಟು ಆರಾಮವಾಗಿ ಇರುತ್ತಾರೆ.

ಇನ್ನು ಕೆಲವರು ಈ ದಿನಗಳಲ್ಲಿ ಮಾನಸಿಕವಾಗಿ ಕುಗ್ಗಿಹೋಗಿದ್ದಾರೆ. ಈ ಎಲ್ಲ ಸಮಸ್ಯೆಗಳಿಗೆ ಕಾರಣವೇನು ಎಂದರೆ, ಕೆಲಸದ ಒತ್ತಡ, ಮನೆಯಲ್ಲಿ ಸದಾ ಜಗಳ, ಅನಾರೋಗ್ಯಕರ ಜೀವನಶೈಲಿ, ಅನಾರೋಗ್ಯಕರ ಆಹಾರ ಸೇವನೆ ಇತ್ಯಾದಿ ಕಾರಣವಾಗುತ್ತದೆ. ಕೆಲವರು ಹೆಚ್ಚು ಖಾರಾ, ಉಷ್ಣವಾಗಿರುವ ಪದಾರ್ಥವನ್ನೇ ಸೇವಿಸುತ್ತಾರೆ. ಮತ್ತೆ ಕೆಲವರು ಹೆಚ್ಚು ಟೀ, ಕಾಫಿ ಸೇವನೆ ಮಾಡುತ್ತಾರೆ. ಇವೆಲ್ಲವೂ ಮುಟ್ಟಿನ ಸಮಯದಲ್ಲಿ ಆರೋಗ್ಯ ಹಾಳಾಗಲು ಕಾರಣವಾಗುತ್ತದೆ. ಇನ್ನು ಈ ಸಮಸ್ಯೆಗೆ ಕಾರಣವೇನು..? ಪರಿಹಾರವೇನು ಎಂದು ತಿಳಿಯಲು ಈ ವೀಡಿಯೋ ನೋಡಿ.

- Advertisement -

Latest Posts

Don't Miss