Political News: ಗುತ್ತಿಗೆದಾರ ಚೆಲುವರಾಜು ಅವರಿಗೆ ಜೀವಬೆದರಿಕೆ ಹಾಕಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಾಜಿ ಶಾಸಕ ಮುನಿರತ್ನ ಅವರನ್ನು ಕೋಲಾರದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ನಂಗಲಿ ಗ್ರಾಮದಲ್ಲಿ ಮುನಿರತ್ನರನ್ನು ವಶಕ್ಕೆ ಪಡೆಯಲಾಗಿದೆ. ಮುನಿರತ್ನ ಕೋಲಾರದಿಂದ ಆಂಧ್ರದ ಚಿತ್ತೂರಿಗೆ ತೆರಳುತ್ತಿದ್ದ ಸಂದರ್ಭದಲ್ಲಿ, ಅವರ ಮೊಬೈಲ್ ಫೋನ್ ಲೊಕೆಶನ್ ಟ್ರ್ಯಾಕ್ ಮಾಡಿ, ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಮುನಿರತ್ನ ಗುತ್ತಿಗೆದಾರರಿಗೆ ಕಾಲ್ ಮಾಡಿ, ಜಾತಿ ನಿಂದನೆ ಮಾಡಿದ್ದಲ್ಲದೇ, ಕೊಲೆ ಬೆದರಿಕೆಯೂ ಹಾಕಿದ್ದಾರೆ. ಈ ಆಡಿಯೋ ವೈರಲ್ ಆಗುತ್ತಿದ್ದಂತೆ, ಪೊಲೀಸರು ತನಿಖೆ ನಡೆಸಿದ್ದು, ಕೇಸ್ ದಾಖಲಾದಾಗಿನಿಂದ ಮುನಿರತ್ನ ಅವರ ಮೇಲೆ ಪೊಲೀಸರು ನಿಗಾ ಇರಿಸಿದ್ದರು. ಇಂದು ಕೋಲಾರದಲ್ಲಿ ಸ್ಥಳೀಯ ಪೊಲೀಸರು ಮುನಿರತ್ನ ಅವರನ್ನು ಅರೆಸ್ಟ್ ಮಾಡಲಾಗಿದ್ದು, ಬೆಂಗಳೂರಿಗೆ ಕರೆತಂದು, ಬೆಂಗಳೂರು ಪೊಲೀಸರಿಗೆ ಒಪ್ಪಿಸಲಿದ್ದಾರೆ.
ಇನ್ನು ಈ ಪ್ರಕರಣದಲ್ಲಿ ನಾಲ್ವರು ಆರೋಪಿಗಳಿದ್ದು, ಎ1 ಆರೋಪಿ ಮುನಿರತ್ನ ಆಗಿದ್ದು, ಎ2 ಆರೋಪಿ ಇವರ ಆಪ್ತ ವಿಜಯ್ ಕುಮಾರ್, ಎ3 ಆರೋಪಿ ಸೆಕ್ಯೂರಿಟಿ ಅಭಿಷೇಕ್, ಎ4 ಆರೋಪಿ ವಸಂತ್ ಕುಮಾರ್ ಆಗಿದ್ದಾರೆ.