Health Tips: ದೇಹಕ್ಕೆ ಎಣ್ಣೆ ಮಸಾಜ್ ಮಾಡುವುದು ಆರೋಗ್ಯಕ್ಕೆ ಉತ್ತಮವಾಗಿದೆ. ಹಾಗಾಗಿ ಹಿಂದೂಗಳು ವರ್ಷಕ್ಕೊಮ್ಮೆ ದೀಪಾವಳಿ ಎಣ್ಣೆ ಸ್ನಾನವೆಂಬ ನೆಪದಲ್ಲಿ, ಅಭ್ಯಂಗ ಸ್ನಾನ ಮಾಡುತ್ತಾರೆ. ಹಾಗಾದ್ರೆ ಪಾದಕ್ಕೆ ಎಣ್ಣೆ ಹಚ್ಚುವುದು ಉತ್ತಮ ಹೌದೋ, ಅಲ್ಲವೋ ಎಂಬ ಬಗ್ಗೆ ತಿಳಿಯೋಣ ಬನ್ನಿ..
ಪಾದಕ್ಕೆ ಎಣ್ಣೆ ಮಸಾಜ್ ಮಾಡುವುದು ಉತ್ತಮ ಅಂತಾರೆ ಪಾರಂಪರಿಕ ವೈದ್ಯೆಯಾದ ಡಾಾ.ಪವಿತ್ರಾ ಅವರು. ವೈದ್ಯರು ಹೇಳುವ ಪ್ರಕಾರ, ಪ್ರತಿನಿತ್ಯ ಪಾದಗಳಿಗೆ ಎಣ್ಣೆ ಮಸಾಜ್ ಮಾಡಬೇಕು. ಏಕೆಂದರೆ, ನಮ್ಮ ದೇಹದ ಉಷ್ಣತೆ ಹೆಚ್ಚಾಗಿದ್ದರೆ, ಪಾದಕ್ಕೆ ಎಣ್ಣೆ ಹಚ್ಚುವುದರಿಂದ ನಮ್ಮ ದೇಹ ತಂಪಾಗಿರುತ್ತದೆ.
ನಾವು ನೆತ್ತಿಗೆ ಅಥವಾ ಪಾದಕ್ಕೆ ಎಣ್ಣೆ ಹಚ್ಚುವುದರಿಂದ ನಮ್ಮ ದೇಹ ತಂಪಾಗಿರುತ್ತದೆ. ಏಕೆಂದರೆ, ಈ ಎರಡೂ ಭಾಗದಲ್ಲಿ ಉಷ್ಣತೆ ಹೆಚ್ಚಾದಾಗ, ನಮ್ಮ ದೇಹದ ರಕ್ತಸಂಚಾರದಲ್ಲಿ ಏರುಪೇರಾಗುತ್ತದೆ. ಹೊಟ್ಟೆ ಆರೋಗ್ಯ ಹಾಳಾಗುವುದು. ಅಜೀರ್ಣ ಸಮಸ್ಯೆ ಸೇರಿ, ಇನ್ನೂ ಹಲವು ಆರೋಗ್ಯ ಸಮಸ್ಯೆ ಉಂಟಾಗುತ್ತದೆ. ಹಾಗಾಗಿ ನೆತ್ತಿಗೆ ಮತ್ತು ಪಾದಕ್ಕೆ ಪ್ರತಿದಿನ ಎಣ್ಣೆ ಹಚ್ಚಿ ಮಸಾಜ್ ಮಾಡಬೇಕು.
ಇನ್ನು ಪಾದಗಳಿಗೆ ಯಾವ ಎಣ್ಣೆ ಹಚ್ಚಿದರೆ, ನಮ್ಮ ದೇಹ ತಂಪಾಗಿರುತ್ತೆ ಅಂದ್ರೆ, ಹರಳೆಣ್ಣೆ. ರಾಾತ್ರಿ ಮಲಗುವಾಗ, ಪಾದಕ್ಕೆ ಹರಳೆಣ್ಣೆಯಿಂದ ಮೃದುವಾಗಿ ಮಸಾಜ್ ಮಾಡಿದ್ರೆ, ನಿಮ್ಮ ದೇಹ ತಂಪಾಗಿರುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.