Monday, December 23, 2024

Latest Posts

ಜ್ಯೂಸ್ ಅಂಗಡಿ ತೆರೆಯಲಿದ್ದೀರಾ..? ಹಾಗಾದ್ರೆ ಇಲ್ಲಿದೆ ಕೆಲ ಟಿಪ್ಸ್..!

- Advertisement -

ಹಣ್ಣು- ತರಕಾರಿಗಳಿಂದ ವಿವಿಧ ತರಹದ ಜ್ಯೂಸ್ ತಯಾರಿಸಬಹುದು. ಕೊಟ್ಟ ತರಕಾರಿ ಅಥವಾ ಹಣ್ಣಿನಿಂದ ಜ್ಯೂಸ್ ತಯಾರಿಸುವ ಕಲೆ ನಿಮ್ಮಲ್ಲಿದ್ದರೆ ಇಂದೇ ಜ್ಯೂಸ್ ಅಂಗಡಿ ಓಪೆನ್ ಮಾಡಲು ಪ್ಲ್ಯಾನ್ ಮಾಡಿ. ಇದಕ್ಕಾಗಿಯೇ ನಾವಿಂದು ಕೆಲ ಟಿಪ್ಸ್‌ಗಳನ್ನ ನೀಡಲಿದ್ದೇವೆ.

ಜ್ಯೂಸ್ ಅಂಗಡಿ ಎಲ್ಲಿ ತೆರೆಯಬಹುದು..?
ಈ ಪ್ರಶ್ನೆಗೆ ಉತ್ತರ, ಆಸ್ಪತ್ರೆಯ ಪಕ್ಕ, ಪ್ರವಾಸಿ ತಾಣಗಳ ಬಳಿ, ಪ್ರಸಿದ್ಧ ದೇವಸ್ಥಾನದ ಬಳಿ, ಪಾರ್ಕ್ ಬಳಿ, ಶಾಲಾ ಕಾಲೇಜಿನ ಬಳಿ ಅಥವಾ ಮಾರುಕಟ್ಟೆಯಲ್ಲಿ ಜ್ಯೂಸ್ ಶಾಪ್ ತೆರೆಯಬಹುದು.

ಈ ಸ್ಥಳಗಳಲ್ಲಿ ನೀವು ಒಂದು ಅಂಗಡಿಯನ್ನ ಬಾಡಿಗೆಗೆ ಪಡಿಯಬೇಕು. ಇಂಥ ಜಾಗಗಳಲ್ಲಿ ಬಾಡಿಗೆಯ ಬೆಲೆ 10ರಿಂದ 15 ಸಾವಿರದವರೆಗೆ ಇರುತ್ತದೆ. ಅಲ್ಲದೇ ನೀವು 50 ಸಾವಿರದಿಂದ ಒಂದು ಲಕ್ಷದವರೆಗೆ ಡೆಪಾಸಿಟ್ ಕೂಡ ಕೊಡಬೇಕಾಗುತ್ತದೆ.

ಈಗ ನೀವು ಜ್ಯೂಸ್ ಮಾಡಲು ಜ್ಯೂಸರ್ ತೆಗೆದುಕೊಳ್ಳಬೇಕಾಗುತ್ತದೆ. 4ರಿಂದ 5 ಸಾವಿರದ ತನಕ ಒಳ್ಳೆ ಕ್ವಾಲಿಟಿಯ ಜ್ಯೂಸರ್ ಸಿಗುತ್ತದೆ. ಇದರೊಂದಿಗೆ ತಣ್ಣಗಿನ ಜ್ಯೂಸ್ ನೀಡುವುದಕ್ಕಾಗಿ ರೆಫ್ರಿಜರೇಟರ್ ಅವಶ್ಯಕತೆ ಇರುತ್ತದೆ. ಹೊಸ ರೆಫ್ರಿಜರೇಟರ್ ತೆಗೆದುಕೊಳ್ಳುವುದಿದ್ದರೆ 15ರಿಂದ 20 ಸಾವಿರ ರೂಪಾಯಿಯಾಗುತ್ತದೆ. ಸೆಕೆಂಡ್ ಹ್ಯಾಂಡ್ ತೆಗೆದುಕೊಳ್ಳುವುದಿದ್ದರೆ 10 ಸಾವಿರದೊಳಗೆ ಸಿಗುತ್ತದೆ. ಆಯ್ಕೆ ನಿಮ್ಮದು.

ಜ್ಯೂಸ್‌ಗೆ ಬೇಕಾದ ಗ್ಲಾಸ್, ಪಾತ್ರೆ, ಪಾರ್ಸೆಲ್ ಕೊಡುವುದಕ್ಕೆ ಪ್ಲಾಸ್ಟಿಕ್ ಕಪ್ಸ್ ತೆಗೆದುಕೊಳ್ಳುವುದಕ್ಕೆ ಸ್ವಲ್ಪ ಹಣ ಖರ್ಚಾಗುತ್ತದೆ. ಇದರೊಂದಿಗೆ ನಿಮ್ಮ ಅಂಗಡಿಗೆ ನಾಮಫಲಕದ ಬೋರ್ಡ್ ಹಾಕಲು 2ರಿಂದ 3 ಸಾವಿರ ಆಗುತ್ತದೆ.

ಇನ್ನು ಅಂಗಡಿಯಲ್ಲಿ ಕೆಲಸ ಮಾಡಲು ಕೆಲ ಹುಡುಗರನ್ನು ನೇಮಿಸಿಕೊಳ್ಳಬೇಕಾಗುತ್ತದೆ. ಆರಂಭದಲ್ಲಿ ಒಬ್ಬರನ್ನ ಕೆಲಸಕ್ಕೆ ನೇಮಿಸಿಕೊಂಡರೆ ಸಾಕು. ಅವರಿಗೆ 5 ಸಾವಿರದ ತನಕ ಸಂಬಳ ನೀಡಬೇಕಾಗುವುದು.

ಇನ್ನು ಪಾಂಪ್ಲೆಟ್ ಹಂಚಿಯೋ ಅಥವಾ ಆನ್‌ಲೈನ್ ಮೂಲಕವೋ ನಿಮ್ಮ ಅಂಗಡಿಯ ಪ್ರಚಾರ ಆರಂಭಿಸಿ. ಆರಂಭದಲ್ಲೇ ನಿಮಗೆ ಲಾಭವಾಗುವುದಿಲ್ಲ. ನಿಮ್ಮ ಅಂಗಡಿಯ ಪ್ರಚಾರ ಹೆಚ್ಚಾದಲ್ಲಿ ಲಾಭ ಹೆಚ್ಚು ಬರುತ್ತದೆ. ಅಲ್ಲದೇ ಈ ಮೇಲೆ ತಿಳಿಸಿರುವಂತೆ ಆಯಾ ಜಾಗದಲ್ಲಿ ಅಂಗಡಿಯನ್ನಿಟ್ಟರೆ ಲಾಭ ಕಟ್ಟಿಟ್ಟ ಬುತ್ತಿ. ಆದ್ರೆ ಆ ಜಾಗದಲ್ಲಿ ಅಂಗಡಿ ತೆಗೆದರೆ ಯಾವುದೇ ಸಮಸ್ಯೆ ಇಲ್ಲವಲ್ಲ ಎಂದು ಮೊದಲೇ ಪರಿಶೀಲಿಸಿಕೊಳ್ಳಿ. ಜ್ಯೂಸ್ ರುಚಿಯೊಂದಿಗೆ ಅದರ ಕ್ವಾಲಿಟಿ ಮತ್ತು ಸ್ವಚ್ಛತೆ ಕೂಡ ಮುಖ್ಯ.

ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

- Advertisement -

Latest Posts

Don't Miss