Monday, December 23, 2024

Latest Posts

ಈ ಒಂದು ಮಷಿನ್ ಇದ್ರೆ ಸಾಕು ನೀವು 5ರಿಂದ 6 ಉದ್ಯಮ ಮಾಡಬಹುದು..!

- Advertisement -

ಮನೆಯಲ್ಲಿ ಸುಮ್ಮನೆ ಕೂರುವ ಬದಲು ಸಣ್ಣದಾದ ಉದ್ಯಮ ಶುರು ಮಾಡಿದ್ರೆ ಮುಂಬರುವ ದಿನಗಳಲ್ಲಿ ಕೊಂಚ ಲಾಭಗಳಿಸಬಹುದು. ನಿಮ್ಮ ಲಕ್ ಚೆನ್ನಾಗಿದ್ದರೆ ಇದೇ ಚಿಕ್ಕ ಉದ್ಯಮ ಮುಂದೆ ದೊಡ್ಡ ಲಾಭಗಳಿಕೆಯೂ ಮಾಡಿಕೊಡಬಹುದು. ಆದ್ರೆ ಯಾವುದೇ ಉದ್ಯಮ ಶುರು ಮಾಡುವುದಕ್ಕೆ ಬಂಡವಾಳ ಹೂಡುವುದು ಅವಶ್ಯಕವಾಗಿರುತ್ತದೆ. ಆದ್ರೆ ಉದ್ಯಮ ಶುರು ಮಾಡಲು ಬೇಕಾಗಿರುವ ಸಾಮಗ್ರಿ, ಪ್ಯಾಕಿಂಗ್ ಮಷಿನ್ ಸೇರಿಸಿ ಒಟ್ಟು 10ರಿಂದ 15 ಸಾವಿರದ ತನಕ ಬಂಡವಾಳ ಹೂಡಿ ಉದ್ಯಮ ಆರಂಭಿಸಬಹುದು.

ಈ ಮೊದಲು ನಾವು ನಿಮಗೆ ಪ್ಯಾಕಿಂಗ್ ಮಷಿನ್ ಬಗ್ಗೆ ಸಾಕಷ್ಟು ವಿಷಯ ಹೇಳಿದ್ದೇವೆ. ಇಂದು ಕೂಡ ಈ ಕುರಿತಂತೆ ಚಿಕ್ಕ ಮಾಹಿತಿ ನೀಡಲಿದ್ದೇವೆ. ಪ್ಯಾಕಿಂಗ್ ಮಷಿನ್ ಇದ್ರೆ ನೀವು ಮನೆಯಲ್ಲೇ 5ರಿಂದ 6 ಉದ್ಯಮ ಶುರು ಮಾಡಬಹುದು.

ಹೋಲ್‌ ಸೇಲ್ ಅಂಗಡಿಯಿಂದ ಕೆಲ ಸಾಮಗ್ರಿಯನ್ನ ತಂದು ಅದನ್ನ ಪ್ಯಾಕ್ ಮಾಡಿ ಮಾರಬಹುದು.

ಡ್ರೈ ಫ್ರೂಟ್ಸ್: ಡ್ರೈಫ್ರೂಟ್ಸ್ ಅಂದ್ರೆ ಪಿಸ್ತಾ, ಬಾದಾಮ್, ಕಾಜು, ದ್ರಾಕ್ಷಿ, ಒಣ ದ್ರಾಕ್ಷಿ ಇಷ್ಟೇ ಅಂದುಕೊಂಡಿರುತ್ತಾರೆ. ಆದ್ರೆ ಇದರೊಂದಿಗೆ ವಿವಿಧ ತರಹದ ಖರ್ಜೂರ, ಒಣಗಿಸಿದ ಸ್ಟ್ರಾಬೇರಿ, ರಾಸ್‌ಬೇರಿ, ಕಿವಿ ಹಣ್ಣು, ಅಂಜೂರದ ಹಣ್ಣು, ಏಪ್ರಿಕಾಟ್ ಹೀಗೆ ಮುಂತಾದ ಒಣ ಹಣ್ಣುಗಳು ಸಿಗುತ್ತದೆ. ಬೇರೆ ಬೇರೆ ಊರುಗಳಲ್ಲಿ ಈ ರೀತಿ ಅಪರೂಪದ ಹಣ್ಣು ಸಿಗುತ್ತದೆ. ಅವುಗಳನ್ನ ಹೋಲ್‌ಸೇಲ್ ಬೆಲೆಯಲ್ಲಿ ತರಿಸಿ, ಪ್ಯಾಕ್ ಮಾಡಿ ಮಾರಬಹುದು.

ಕುರುಕಲು ತಿಂಡಿ: ಹಳ್ಳಿ ಕಡೆಯಂತೂ ವಿವಿಧ ರೀತಿಯ ಕುರುಕಲು ತಿಂಡಿ ಮಾಡಲಾಗುತ್ತದೆ. ಹಲಸಿನ ಚಿಪ್ಸ್, ಹಲಸಿನ ಮತ್ತು ಮಾವಿನ ಒಣ ಹಪ್ಪಳ, ಶ್ಯಾವಿಗೆ, ಚಕ್ಕುಲಿ, ವಿವಿಧ ಧಾನ್ಯಗಳ ಕುರುಕಲು ತಿಂಡಿ ಮಾಡಲಾಗುತ್ತದೆ. ಅಂತಹುದೆಲ್ಲ ಸಿಟಿಯಲ್ಲಿ ಸಿಗುವುದು ಕಡಿಮೆ. ಮತ್ತು ಸಿಟಿ ಜನ ಊರಿನ ತಿಂಡಿಗಳ ರುಚಿ ನೋಡಲು ಕಾದಿರುತ್ತಾರೆ. ಹಾಗಾಗಿ ಈ ರೀತಿಯ ರುಚಿಕರ ತಿಂಡಿ ಮಾಡಿ, ಪ್ಯಾಕ್ ಮಾಡಿ ಸಿಟಿಗೆ ತಂದು ಮಾರಾಟ ಮಾಡಬಹುದು.

ಸಿಹಿ ತಿಂಡಿ: ಭಾರತದಲ್ಲಿ ಸಿಗುವ ಮನೆಯಲ್ಲಿ ಮಾಡುವ ಸಿಹಿ ತಿಂಡಿಗಳು ಒಂದಾ ಎರಡಾ..? ಕರ್ನಾಟಕದಲ್ಲೇ ಸಾವಿರಕ್ಕೂ ಹೆಚ್ಚು ಸಿಹಿ ತಿಂಡಿ ಮಾಡಲಾಗುತ್ತದೆ. ಅಂತಹುದರಲ್ಲಿ 10 ತರಹದ ಸಿಹಿ ತಿಂಡಿಯನ್ನಾದರೂ ನೀವು ಮಾಡಿ ಅಥವಾ ಹೋಲ್‌ಸೇಲ್‌ ರೇಟ್‌ನಲ್ಲಿ ಕೊಂಡು ತಂದು ಪ್ಯಾಕ್ ಮಾಡಿ ಮಾರಬಹುದು. ಅಲ್ಲದೇ, ಸೀಸನ್‌ಗೆ ತಕ್ಕಂತೆ ಸಿಗುವ ಹಣ್ಣುಗಳಿಂದ ವೆರೈಟಿ ವೆರೈಟಿ ಖಾದ್ಯಗಳನ್ನ ಮಾಡಲಾಗುತ್ತದೆ. ಅವುಗಳನ್ನ ಸಿಟಿಗಳಿಗೆ ತಂದು ಮಾರಿದರೆ ಒಳ್ಳೆಯ ಲಾಭ ಗಳಿಸಬಹುದು.

https://youtu.be/RDZyR9qUQ8o

ಹಿಟ್ಟುಗಳ ಮಾರಾಟ: ಕಡಲೆ ಹಿಟ್ಟು, ಉದ್ದಿನ ಹಿಟ್ಟು, ಅಕ್ಕಿ ಹಿಟ್ಟು, ಗೋದಿ ಹಿಟ್ಟು, ರಾಗಿ ಹಿಟ್ಟು ಮುಂತಾದ ಧಾನ್ಯಗಳ ಹಿಟ್ಟು ತಂದು, ಅದನ್ನ ಪ್ಯಾಕ್ ಮಾಡಿ ಮಾರಬಹುದು.

ಮಸಾಲೆ ಪುಡಿ: ಮಸಾಲೆ ಪುಡಿ ಅಥವಾ ಮಸಾಲೆ ಪದಾರ್ಥಗಳಾದ ಜೀರಿಗೆ, ಸಾಸಿವೆ, ಕೊತ್ತೊಂಬರಿ ಕಾಳು, ಕಾಳು ಮೆಣಸುಗಳನ್ನ ತಂದು ಪ್ಯಾಕ್ ಮಾಡಿ ಮಾರಬಹುದು.

ಆದರೆ ಒಂದು ವಿಷಯ ನೆನಪಿರಲಿ, ಕಡಿಮೆ ರೇಟಿಗೆ ಈ ಎಲ್ಲ ಸಾಮಗ್ರಿ ಸಿಗುತ್ತದೆ ಎಂದು ಅದರ ಕ್ವಾಲಿಟಿ ನೋಡದೇ ತಂದು ಮಾರಾಟ ಮಾಡಿದ್ರೆ, ಕಳಪೆ ಸಾಮಗ್ರಿ ಎಂದು ಜನ ನಿಮ್ಮ ಬಳಿ ಪ್ರಾಡಕ್ಟ್‌ಗಳನ್ನ ಪರ್ಚೇಸ್ ಮಾಡುವುದಿಲ್ಲ. ಆದ್ದರಿಂದ ಲಾಭ ಪಡೆಯುವ ತವಕದಲ್ಲಿ ಸಾಮಗ್ರಿಯ ಕ್ವಾಲಿಟಿ ನೋಡುವುದನ್ನು ಮರೆಯಬೇಡಿ.

ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

- Advertisement -

Latest Posts

Don't Miss