Sunday, November 16, 2025

Latest Posts

Health Tips: ನೀರು ಜಾಸ್ತಿ ಕುಡಿದ್ರೂ ಸಮಸ್ಯೆ..! ಮೂತ್ರ ವಿಸರ್ಜನೆಗೂ ಲಿಮಿಟ್..?

- Advertisement -

Health Tips: ನಮಗೆ ಎಷ್ಟಾಗತ್ತೋ ಅಷ್ಟು ನೀರು ನಾವು ಕುಡಿಯಬೇಕು ಅಂತಾ ವೈದ್ಯರೇ ಹೇಳಿದ್ದನ್ನು ನಾವು ಕೇಳಿರುತ್ತದೆ. ಅದರ ಅರ್ಥವೇನೆಂದರೆ, ನಮಗೆ ಎಷ್ಟು ನೀರನ್ನು ಕುಡಿದು, ಜೀರ್ಣಿಸಿಕೊಳ್ಳುವ ಶಕ್ತಿ ಇರುತ್ತದೆಯೋ, ಅಷ್ಟು ನೀರನ್ನು ನಾವು ಕುಡಿಯಬೇಕು ಎಂದು. ಯಾಕಂದ್ರೆ ನಾವು ಸರಿಯಾಗಿ ನೀರು ಕುಡಿದಾಗ, ನಮ್ಮ ಮೂತ್ರ ಬಿಳಿ ಬಣ್ಣದಲ್ಲಿದ್ದು, ಇದು ಆರೋಗ್ಯಕರ ಸಂಕೇತವೆಂದು ತೋರಿಸುತ್ತದೆ. ಅದೇ ನಮ್ಮ ದೇಹಕ್ಕೆ ಬೇಕಷ್ಟು ನೀರು ನಾವು ಕುಡಿದಿಲ್ಲವೆಂದಲ್ಲಿ, ಮೂತ್ರದ ಬಣ್ಣ ಹಳದಿ ಬಣ್ಣಕ್ಕೆ ತಿರುಗುತ್ತದೆ. ಹಾಗಾದ್ರೆ ನೀರು ಹೆಚ್ಚು ಕುಡಿಯಬೇಕೋ..? ದಾಹವಾದಾಗ ಮಾತ್ರ ಕುಡಿಯಬೇಕೋ ಎಂದು ವೈದ್ಯರೇ ಹೇಳಿದ್ದಾರೆ ಕೇಳಿ.

ವೈದ್ಯರು ಹೇಳುವ ಪ್ರಕಾರ ನೀರನ್ನು ನಾವು ಅಗತ್ಯಕ್ಕಿಂತ ಹೆಚ್ಚೂ ಕುಡಿಯಬಾರದು, ಕಡಿಮೆಯೂ ಕುಡಿಯಬಾರದು. ಸಮ ಪ್ರಮಾಣದಲ್ಲಿ ನೀರು ಕುಡಿಯಬೇಕು. ಏಕೆಂದರೆ ನಾವು ಅಗತ್ಯಕ್ಕಿಂತ ಹೆಚ್ಚು ನೀರು ಕುಡಿದಾಗ, ನಮ್ಮ ಕಿಡ್ನಿ ವೀಕ್ ಆಗುತ್ತದೆ. ಆಗ ನಮಗೆ ಪದೇ ಪದೇ ಮೂತ್ರವಾಗುತ್ತದೆ. ಆಗ ದೇಹದಲ್ಲಿ ನೀರು ಉಳಿಯುವುದಿಲ್ಲ. ಹಾಗಾಗಿ ಬಾಯಾರಿಕೆಯಾದಾಗ ಸರಿಯಾದ ಪ್ರಮಾಣದಲ್ಲಿ ನೀರಿನ ಸೇವನೆ ಮಾಡಿ ಎನ್ನುತ್ತಾರೆ ವೈದ್ಯರು.

ದಿನಕ್ಕೆ ಓರ್ವ ಮನುಷ್ಯ ಎರಡೂವರೆಯಿಂದ 3 ಲೀಟರ್ ನೀರು ಕುಡಿಯಬಹುದು. ಅದಕ್ಕಿಂತ ಹೆಚ್ಚು ಕುಡಿಯುವುದು ಉತ್ತಮವಲ್ಲ. ಆದರೆ 3 ಲೀಟರ್‌ಗೂ ಅಧಿಕ ನೀರು ಕುಡಿಯುವಷ್ಟು ನಿಮಗೆ ದಾಹವಾಗುತ್ತಿದ್ದರೆ ಮಾತ್ರ, ನೀವು ನೀರು ಕುಡಿಯಬಹುದು. ಆದರೆ ಅತಿಯಾಗಿ ನೀರಿನ ಸೇವನೆ ಮಾಡಿದಾಗ, ಕಿಡ್ನಿಯು ಕೆಲಸ ಮಾಡುವುದನ್ನು ನಿಧಾನ ಮಾಡುತ್ತದೆ. ಆಗ ಕಿಡ್ನಿಯನ್ನು ಮೊದಲಿನಂತೆ ಕೆಲಸ ಮಾಡುವಂತೆ ಮಾಡಲು, ಕಷ್ಟವಾಗುತ್ತದೆ. ಹಾಗಾಗಿ ಲಿಮಿಟಿನಲ್ಲಿ ನೀರು ಕುಡಿಯಬೇಕು ಅಂತಾರೆ ವೈದ್ಯರು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.

- Advertisement -

Latest Posts

Don't Miss