Sunday, November 16, 2025

Latest Posts

ಕಿಡ್ನಿ ಕೊಲ್ಲುತ್ತೆ ರೆಡಿಮೇಡ್ ಡ್ರಿಂಕ್ಸ್: ಯಾವ ಮಾಂಸಾಹಾರ ಕಿಡ್ನಿಗೆ ಬೆಸ್ಟ್ ?

- Advertisement -

Health Tips: ಹೊಟೇಲ್‌ನಲ್ಲಿ, ಮಾರುಕಟ್ಟೆಯಲ್ಲಿ ಸಿಗುವ ಪ್ಯಾಕ್ಡ್ ಕೂಲ್ ಡ್ರಿಂಕ್ಸ್ ಆರೋಗ್ಯಕ್ಕೆ ಮಾರಕ ಅಂತಾ ನಾವು ನಿಮಗೆ ಹಲವು ಬಾರಿ ಹೇಳಿದ್ದೇವೆ. ಏಕೆಂದರೆ, ಇದು ಕೆಡದಿರಲಿ ಎಂದು ಅದಕ್ಕೆ ಪ್ರಿಸರ್ವೇಟಿವ್ಸ್ ಬಳಸುತ್ತಾರೆ. ಅಲ್ಲದೇ ಹಲವು ಕೆಮಿಕಲ್ಸ್ ಬಳಕೆ ಮಾಡುವುದರಿಂದ, ಇದು ಕಿಡ್ನಿ ಆರೋಗ್ಯವನ್ನು ಹಾಳು ಮಾಡುತ್ತದೆ. ಭಾರತದಲ್ಲಿ ಅರ್ಧಕರ್ಧ ಜನ ಕಿಡ್ನಿ ಆರೋಗ್ಯವನ್ನು ಹಾಳು ಮಾಡಿಕೊಂಡಿರುವುದೇ ಈ ಕೂಲ್ ಡ್ರಿಂಕ್ಸ್‌ನಿಂದ ಎಂದು ಸಾಬೀತಾಗಿದೆ. ಹಾಗಾದ್ರೆ ಈ ಬಗ್ಗೆ ವೈದ್ಯರು ಹೇಳೋದೇನು ಅಂತಾ ತಿಳಿಯೋಣ ಬನ್ನಿ..

ನೀರು ಕಡಿಮೆ ಕುಡಿಯುೂವುದರಿಂದ ಮತ್ತು ಅಗತ್ಯಕ್ಕಿಂತ ಹೆಚ್ಚು ನೀರು ಕುಡಿಯುವುದರಿಂದ, ಕೀಟನಾಶಕ ಬಳಸಿದ ಆಹಾರಗಳ ಸೇವನೆ ಮಾಡುವುದರಿಂದ, ಹೆಚ್ಚು ಹೊಟೇಲ್ ಆಹಾರವನ್ನು ಸೇವಿಸುವುದರಿಂದ ಕಿಡ್ನಿ ಆರೋಗ್ಯ ಬಹುಬೇಗ ಹಾಳಾಗಿ ಹೋಗುತ್ತದೆ.

ಇದರ ಜೊತೆಗೆ ರೇಡಿಮೇಡ್ ಜ್ಯೂಸ್‌ಗಳ ಸೇವನೆಯಿಂದಲೂ ನಮ್ಮ ಆರೋಗ್ಯ ಹಾಳಾಗುತ್ತದೆ. ರೇಡಿಮೇಡ್ ಜ್ಯೂಸ್, ಪ್ಯಾಕ್ಡ್ ಕೂಲ್‌ಡ್ರಿಂಕ್ಸ್ ಅದೆಷ್ಟು ಹಾನಿಕಾರಕ ಅಂದ್ರೆ, ಒಮ್ಮೆ ಇದರ ಸೇವನೆ ಮಾಡಿದರೆ, ಚಟ ಹತ್ತುವ ಸಾಧ್ಯತೆ ಇರುತ್ತದೆ. ಹಾಗಾಗಿ ಮಕ್ಕಳಿಗೆ ಕೂಲ್ ಡ್ರಿಂಕ್ಸ್ ಕುಡಿಸಬಾರದು ಅಂತಾ ಹೇಳೋದು.

ಕೆಲವು ಮಕ್ಕಳು ಸಣ್ಣ ವಯಸ್ಸಿನಲ್ಲೇ ಕೂಲ್ ಡ್ರಿಂಕ್ಸ್ ಸೇವನೆ ಹೆಚ್ಚು ಮಾಡಿಕೊಂಡು, ಶುಗರ್ ಬರಿಸಿಕೊಂಡಿರುವ ಉದಾಹರಣೆಗಳಿದೆ. ಜೊತೆಗೆ, ಸೋಡಾ ಮಿಕ್ಸ್ ಮಾಡಿರುವ ಕೂಲ್ ಡ್ರಿಂಕ್ಸ್ ಹೆಚ್ಚು ಸೇವನೆ ಮಾಡಿಯೇ, ಎಷ್ಟೋ ಜನ ಕಿಡ್ನಿ ಫೇಲ್ ಆಗಿ, ಸಾವನ್ನಪ್ಪಿರುವುದು ಕೂಡ ಸಾಬೀತಾಗಿದೆ.

ಇನ್ನು ಮಾಂಸಾಹಾರ ಸೇವನೆ ಮಾಡುವವರು ಅದನ್ನು ಲಿಮಿಟಿನಲ್ಲಿ ಸೇವನೆ ಮಾಡಬೇಕು ಅಂತಾರೆ ವೈದ್ಯರು. ಹಾಾಗಾದ್ರೆ ಮಾಂಸಾಹಾರ ಸೇವನೆ ಮಾಡುವಾಗ, ನಾವು ಯಾವ ವಿಷಯವನ್ನು ಗಮನದಲ್ಲಿ ಇರಿಸಿಕೊಳ್ಳಬೇಕು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಲು ಈ ವೀಡಿಯೋ ನೋಡಿ.

- Advertisement -

Latest Posts

Don't Miss