ಇಲ್ಲಿ ಅಧಿಕಾರ ಚಲಾಯಿಸಬೇಕು ಎಂಬ ಕುಮಾರಸ್ವಾಮಿ ಕನಸು ಎಂದಿಗೂ ನನಸಾಗೋದಿಲ್ಲ: ಸುಧಾಕರ್‌

Dharwad News: ಧಾರವಾಡ: ಸಿಎಂ ಸಿದ್ದರಾಮಯ್ಯ ಪ್ರಾಸಿಕ್ಯೂಷನ್ ಆದೇಶ ಹೈಕೋರ್ಟ್ ಎತ್ತಿ ಹಿಡಿದ ವಿಚಾರದ ಬಗ್ಗೆ ಧಾರವಾಡದಲ್ಲಿ ಉನ್ನತ ಶಿಕ್ಷಣ ಸಟಿವ ಡಾ.ಎಂ.ಸಿ.ಸುಧಾಕರ್ ಮಾತನಾಡಿದ್ದು, ಪ್ರಾಸಿಕ್ಯೂಷನ್ ಅಂತಾ ಅಲ್ಲ. ತನಿಖೆ ಮಾಡಲು ಅಡ್ಡಿ ಇಲ್ಲ ಎಂಬ ರೀತಿ ಆಗಿರಬಹುದು. ಮೂಲವಾದ ತನಿಖೆಯೇ ಆಗಿಲ್ಲ. ತನಿಖೆ ಆಗದೇ ಪ್ರಾಸಿಕ್ಯೂಷನ್ ಪ್ರಶ್ನೆ ಎಲ್ಲಿಂದ ಬಂತು? ತಾತ್ವಿಕವಾಗಿ ಮೇಲ್ನೋಟಕ್ಕೆ ತನಿಖೆ ಆಗಬೇಕು ಎಂದು ಸುಧಾಕರ್ ಆಗ್ರಹಿಸಿದ್ದಾರೆ.

ಬೇರೆಯವರ ವಿಷಯದಲ್ಲಿ ಪ್ರಾಸಿಕ್ಯೂಷನ್ ಗೆ ಅನುಮತಿ ಹೇಳಲಾಗಿದೆ. ಆದರೆ ಕ್ಷುಲ್ಲಕ ಕಾರಣ ನೀಡಿ ವಾಪಸ್ ಕಳುಹಿಸ್ತಾ ಇದಾರಲ್ಲ. ಇದು ಆಗಿರೋದು ತನಿಖೆ ಮಾಡಬಹುದು ಅನ್ನೋ ರೀತಿ ಆಗಿದೆಂಬುದು ನನ್ನ ಗ್ರಹಿಕೆ. ಕಾನೂನು ಚೌಕಟ್ಟಿನಲ್ಲಿ ಇಟ್ಟ ಪ್ರಶ್ನೆ ಕೇವಲ ತನಿಖೆಗೆ ಖಾಸಗಿಯವರು ಅನುಮತಿ ಕೇಳಲು ಅವಕಾಶ ಇಲ್ಲ. ಆ ಕಾಯಿದೆ ಬಗ್ಗೆ ನಾವು ಕೇಳಿದ್ವಿ. ಹೀಗಾಗಿ ಕಾನೂನು ಹೋರಾಟ ಮುಂದುವರೆಯುತ್ತದೆ. ನಾವೆಲ್ಲ ಸಿಎಂ ಜೊತೆಗೆ ಇದ್ದೇವೆ. ಇದೊಂದು ಷಡ್ಯಂತ್ರ ಆಗಿದೆ. ಬಿಜೆಪಿ-ಜೆಡಿಎಸ್ ನ ರಾಜಕೀಯ ಕುತಂತ್ರದ ಒಂದು ಭಾಗ. ಇದನ್ನು ಸೆಟ್ ಬ್ಯಾಕ್ ಅಂದುಕೊಳ್ಳೊಲ್ಲ. ಕಾನೂನು ಹೋರಾಟಕ್ಕೆ ಅವಕಾಶಗಳಿಗೆ. ಕಾನೂನು ರೀತಿ ನೋಡುತ್ತೇವೆ ಎಂದಿದ್ದಾರೆ.

ತನಿಖೆಯೇ ಆಗಿಲ್ಲ. ಸಿದ್ದರಾಮಯ್ಯ ತಪ್ಪು ಎನ್ನಲು ಆಗದು. ಮೊದಲು ತನಿಖೆಯಾಗಲಿ. ತನಿಖೆಯಲ್ಲಿ ತಪ್ಪು ಮಾಡಿದ ವರದಿ ಮಾಡಿದಾಗ ಮಾತ್ರ ಆರೋಪಿ ಆಗ್ತಾರೆ. ನಾನು ಕವಿವಿ ಘಟಿಕೋತ್ಸವದಲ್ಲಿ ಇದ್ದೆ. ಸಮಗ್ರ ಮಾಹಿತಿ ಫೋನ್ ಮಾಡಿ ತಿಳಿದುಕೊಳ್ಳುವೆ. ಫೋನ್ ಮಾಡಿ ಕೇಳಿ ಏನು ಸೂಚನೆ ತಿಳಿದುಕೊಳ್ಳುವೆ ಎಂದು ಸಚಿವ ಸುಧಾಕರ್ ಹೇಳಿದ್ದಾರೆ.

ನಮ್ಮ ಸರ್ಕಾರಕ್ಕೆ ಮುಜುಗರ ತರೋಕೆ ಹೀಗೆ ಮಾಡಿದ್ದಾರೆ. ಕಳೆದ ವರ್ಷ ಬಹುಮತದಿಂದ ಬಂದ ಸರ್ಕಾರ ನಮ್ಮದು. ಅಧಿಕಾರ ಪಡೆದ ಕ್ಷಣದಿಂದ ಅಪಪ್ರಚಾರ ಮಾಡುತ್ತಿದ್ದಾರೆ. ಈ ಸರ್ಕಾರ ಬೀಳುತ್ತದೆ. ನಮ್ಮ ಸರ್ಕಾರ ಬರುತ್ತದೆ ಎನ್ನುತ್ತಿದ್ದಾರೆ. ಕುಮಾರಸ್ವಾಮಿ ಒಡಂಬಡಿಕೆ ಮಾಡಿಕೊಂಡ ಮೇಲೆ ಜೋರಾಗಿದೆ. ಆಗಿನಿಂದ ಕುಮಾರಸ್ವಾಮಿ ನಿದ್ರೆ ಮಾಡುತ್ತಿಲ್ಲ. ದೆಹಲಿಯಲ್ಲಿ ಸಚಿವ ಸ್ಥಾನ ಸಿಕ್ಕರೂ ಎಚ್‌ಡಿಕೆಗೆ ಸಮಾಧಾನ ಇಲ್ಲ. ಇಲ್ಲಿ ಅಧಿಕಾರ ಚಲಾಯಿಸೋ ಕನಸು ಇದೆ. ಆ ಕನಸು ನನಸು ಆಗುವುದಿಲ್ಲ. ಇಡೀ ದೇಶದಲ್ಲಿ ಕುತಂತ್ರದ ರಾಜಕಾರಣ ಮಾಡುತ್ತಿದೆ. ಅದರಿಂದ ನಾವು ದೃತಿಗೆಡುವುದಿಲ್ಲ ಎಂದು ಸಚಿವ ಸುಧಾಕರ್ ಹೇಳಿದ್ದಾರೆ.

About The Author