Political News: ವಿಧಾನಸೌಧದಲ್ಲಿ ಇಂದು ಸಂಪುಟ ಸಭೆ ನಡೆದಿದ್ದು, ಸಿಬಿಐಗೆ ಮುಕ್ತಿ ಅನುಮತಿ ನೀಡಿರುವ ಅಧಿಸೂಚನೆ ವಾಪಸ್ ಪಡೆಯಲು ಕ್ಯಾಬಿನೇಟ್ ನಿರ್ಧರಿಸಿದೆ ಎಂದು ಸಚಿವ ಹೆಚ್.ಕೆ.ಪಾಟೀಲ್ ಹೇಳಿದ್ದಾರೆ.
ಭ್ರಷ್ಟಾಚಾರ ತಡೆ ಕಾಯ್ದೆಯಡಿ ಸಿಬಿಐ ಮುಕ್ತವಾಗಿ ತನಿಖೆ ನಡೆಸಬಹುದಿತ್ತು. ಈ ಹಿಂದೆ ತನಿಖೆ ನಡೆಸಲು ಮು್ಕ್ತ ಅವಕಾಶ ನೀಡಿತ್ತು. ಆದರೆ ಈಗ ಈ ಅಧಿಸೂಚನೆ ವಾಪಸ್ ಪಡೆದಿದ್ದು, ಸಿಬಿಐ ತನಿಖೆ ನಡೆಸಬೇಕು ಅಂದ್ರೆ ರಾಜ್ಯ ಸರ್ಕಾರದ ಪರ್ಮಿಷನ್ ಕೇಳಬೇಕು ಎಂದು ಸಚಿವ ಹೆಚ್.ಕೆ.ಪಾಟೀಲ್ ಹೇಳಿದ್ದಾರೆ.
ನಾವು ರಾಜ್ಯದಲ್ಲಿ ಸಿಬಿಐ ತನಿಖೆಗೆ ನೀಡಿದ್ದ ಮುಕ್ತ ಅವಕಾಶವನ್ನು ಹಿಂಪಡೆಯುತ್ತಿದ್ದೇವೆ. ನಾವು ಸಿಬಿಐಗೆ ವಹಿಸಿದ್ದ ಎಲ್ಲ ಪ್ರಕರಣದಲ್ಲಿ ಅವರು ಚಾರ್ಜ್ ಶೀಟ್ ಸಲ್ಲಿಸಿಲ್ಲ. ಹಾಗಾಗಿ ಅನೇಕ ಪ್ರಕರಣಗಳು ಬಾಕಿ ಉಳಿದಿದೆ. ಹೀಗಾಗಿ ಸಿಬಿಐ ತಪ್ಪು ದಾರಿ ಹಿಡಿಯುವುದನ್ನು ತಡೆಯುವ ನಿಟ್ಟಿನಲ್ಲಿ ಸಿಬಿಐಗೆ ನೀಡಿದ್ದ ಮುಕ್ತ ಅನುಮತಿಯನ್ನು ಹಿಂಪಡೆಯುತ್ತಿದ್ದೇವೆ ಎಂದು ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಹೇಳಿದ್ದಾರೆ.
ಇನ್ನು ಸಿಎಂ ಸಿದ್ದರಾಮಯ್ಯ ಮುಡಾ ಹಗರಣದಲ್ಲಿ ಸಿಕ್ಕಿಹಾಕಿಕೊಂಡಿದ್ದು, ಸಿಬಿಐ ತನಿಖೆಗೆ ಒಳಪಟ್ಟರೆ, ಸಿಎಂ ಪಟ್ಟ ಹೋಗಬಹುದು ಎಂದು ಅಂದಾಜಿಸಿ, ಈ ಅನುಮತಿ ಹಿಂಪಡೆದಿರಬಹುದು ಎಂದು ಹಲವರು ಕಿಡಿಕಾರಿದ್ದಾರೆ.