www.karnatakatv.net : ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಬಹುನಿರೀಕ್ಷಿತ ಸಿನಿಮಾ ಯುವರತ್ನ.. ಲಾಕ್ ಡೌನ್ ನಿಂದಾಗಿ ಕನ್ನಡದ ಸಾಕಷ್ಟು ಸಿನಿಮಾಗಳು ತೆರೆ ಕಾಣದೇ ಹಾಗೇ ಉಳಿದಿವೆ.. ಅವುಗಳಲ್ಲಿ ಅಪ್ಪು ನಟನೆಯ ಯುವರತ್ನ ಕೂಡ ಒಂದು.. ಚಿತ್ರವಂತೂ ಇನ್ನೂ ತೆರೆಕಂಡಿಲ್ಲ, ಯುವರತ್ನ ಸಿನಿಮಾ ಬಗ್ಗೆ ಹೊಸ ಅಪ್ಡೇಟ್ಸ್ ನ್ನಾದ್ರೂ ಕೊಡಿ ಅಂತ ಅಪ್ಪು ಫ್ಯಾನ್ಸ್ ಚಿತ್ರತಂಡವನ್ನ ಒತ್ತಾಯಿಸಿದ್ರು.. ಹೀಗಾಗಿ ಇದೀಗ ಚಿತ್ರದ ನಿರ್ದೇಶಕ ಸಂತೋಷ್ ಆನಂದ್ ರಾಮ್ ಯುವರತ್ನ ಚಿತ್ರದ ಹೊಸ ಸ್ಟಿಲ್ ನ್ನ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುವ ಮೂಲಕ ಅಭಿಮಾನಿಗಳನ್ನ ಸಮಾಧಾನಪಡಿಸಿದ್ದಾರೆ..
ಈ ಫೋಟೊ ಜೊತೆಗೆ ಒಳ್ಳೆ ಶೀರ್ಷಿಕೆನ್ನೂ ಕೊಟ್ಟಿದ್ದಾರೆ ನಿರ್ದೇಶಕ ಸಂತೋಷ್ ಆನಂದ್ ರಾಮ್.. ಕೆಲವರಿಗೆ ಇಂಟ್ರೊಡಕ್ಷನ್ ಬೇಡ.. ಅವರ ಬಗ್ಗೆ ಇನ್ಫರ್ಮೇಶನ್ ಕೊಟ್ರೆ ಸಾಕು ಎಂದು ಬರೆದುಕೊಂಡಿದ್ದಾರೆ.. ಈ ಸ್ಟಿಲ್ ನಲ್ಲಿ ಅಪ್ಪು ಪವರ್ ಫುಲ್ ಲುಕ್ ನಲ್ಲಿ ಮಿಂಚಿದ್ದಾರೆ.. ಚಿತ್ರದಲ್ಲಿ ಅಪ್ಪು ಕಾಲೇಜ್ ವಿದ್ಯಾರ್ಥಿಯಾಗಿ ಕಾಣಿಸಿಕೊಂಡಿದ್ದಾರೆ.. ಈ ಹಿಂದೆಯೂ ಹಾಡಿನ ಚಿತ್ರೀಕರಣದ ಫೋಟೊವೊಂದನ್ನ ಸಂತೋಷ್ ಅವರು ಶೇರ್ ಮಾಡಿದ್ರು.. ಅಂದಹಾಗೆ ಲಾಕ್ ಡೌನ್ ಟೈಮ್ ನಲ್ಲಿ ಚಿತ್ರದ ಟೀಸರ್ ಹಾಗೂ ಹಾಡುಗಳನ್ನ ರಿಲೀಸ್ ಮಾಡುವಂತೆ ಅಪ್ಪು ಫ್ಯಾನ್ಸ್ ಕೇಳಿಕೊಂಡಿದ್ರು.. ಆದಕ್ಕೆ ಪ್ರತಿಕ್ರಿಯಿಸಿದ್ದ ಚಿತ್ರದ ಸಂಗೀತ ನಿರ್ದೇಶಕ ಎಸ್.ತಮನ್ ಅವರು ನಾನು ಚೆನ್ನೈನಸ್ಲಿ ಲಾಕ್ ಡೌನ್ ನಲ್ಲಿರುವ ಕಾರಣ ಕೆಲಸಗಳು ನಡೆಯುತ್ತಿಲ್ಲ, ಹಾಡುಗಾರರು ಹಾಗೂ ಸಂಗೀತಗಾರರು ಈ ಇಕ್ಕಟ್ಟಿನ ಸ್ಥಿತಿಯಲ್ಲಿರುವ ಕಾರಣ ಯುವರತ್ನ ಚಿತ್ರದ ಹಾಡುಗಳು ತಡವಾಗಲಿವೆ.. ನಿಮಗೆ ಪವರ್ ಫುಲ್ ಆಲ್ಬಂ ಕೊಡುವ ಜವಾಬ್ದಾರಿ ನಮ್ಮದು.. ದಯವಿಟ್ಟುವಅಭಿಮಾನಿಗಳು ಸಹಕರಿಸಿ ಎಂದು ಮನವಿ ಮಾಡಿದ್ರು.. ಸದ್ಯ ಹೊರಬಂದಿರುವ ಯುವರತ್ನ ಚಿತ್ರದ ಸ್ಟಿಲ್ ಸಿನಿಪ್ರಿಯರ ಗಮನ ಸೆಳೆಯುತ್ತಿದೆ..
ಚಂದನ, ಸಿನಿಮಾ ಬ್ಯೂರೋ, ಕರ್ನಾಟಕ ಟಿವಿ