ಬೇಕಾಗುವ ಸಾಮಗ್ರಿ: ಅಕ್ಕಿ, ಎರಡು ಟೊಮೆಟೋ, ಎರಡು ಈರುಳ್ಳಿ, 5 ಎಸಳು ಬೆಳ್ಳುಳ್ಳಿ, ಕೊಂಚ ಶುಂಠಿ, ನಾಲ್ಕು ಸ್ಪೂನ್ ಎಣ್ಣೆ, ಜೀರಿಗೆ, ಒಣಮೆಣಸು, ಪಲಾವ್ ಎಲೆ, ಚಕ್ಕೆ, ಲವಂಗ, ಏಲಕ್ಕಿ, ಕಾಳುಮೆಣಸು, ಗೋಡಂಬಿ, ಅರಿಶಿನ, ಖಾರದಪುಡಿ, ಗರಂ ಮಸಾಲೆ, ಧನಿಯಾ ಪುಡಿ, ಕೊತ್ತೊಂಬರಿ ಸೊಪ್ಪು, ತುಪ್ಪ, ಉಪ್ಪು.
ಮಾಡುವ ವಿಧಾನ: ಮೊದಲು ಪ್ಯಾನ್‌ಗೆ ಎಣ್ಣೆ ಹಾಕಿ, ಜೀರಿಗೆ, ಒಣಮೆಣಸು, ಪಲಾವ್ ಎಲೆ, ಚಕ್ಕೆ, ಲವಂಗ, ಏಲಕ್ಕಿ, ಕಾಳುಮೆಣಸು, ಶುಂಠಿ, ಬೆಳ್ಳುಳ್ಳಿ, ಈರುಳ್ಳಿ ಹಾಕಿ ಹುರಿಯಿರಿ. ಬಳಿಕ ಟೊಮೆಟೋ ಹಾಕಿ ಹುರಿಯಿರಿ. ಬಳಿಕ ಗೋಡಂಬಿ, ಅರಿಶಿನ, ಖಾರದಪುಡಿ, ಗರಂ ಮಸಾಲೆ, ಧನಿಯಾ ಪುಡಿ, ಉಪ್ಪು ಹಾಕಿ ಮಿಕ್ಸ್ ಮಾಡಿ.
ಬಳಿಕ ಅಕ್ಕಿ ನೀರು ಹಾಕಿ ಮಿಕ್ಸ್ ಮಾಡಿ. ಮುಚ್ಚಳ ಮುಚ್ಚಿ ಬೇಯಿಸಿ. ನೀವು ಕುಕ್ಕರ್‌ನಲ್ಲಿ ಕೂಡ ಅನ್ನ ಬೇಯಿಸಬಹುದು. ಬಾಸ್ಮತಿ ಅಕ್ಕಿ ಬಳಸುತ್ತಿದ್ದರೆ, ಕುಕ್ಕರ್ ಬಳಸಕೂಡದು. ಅನ್ನ ಬೆಂದ ಬಳಿಕ, ಕೊತ್ತೊಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿ, ಸಲಾಡ್‌ನೊಂದಿಗೆ ಸವಿಯಲು ಕೊಡಿ.