Hubli News: ಹುಬ್ಬಳ್ಳಿ: ಬಿಗ್ ಬಾಸ್ ಖ್ಯಾತಿಯ ಸಮೀರ್ ಆಚಾರ್ಯ ತನ್ನ ತಂದೆ-ತಾಯಿಯ ಜೊತೆಗೂಡಿ ತನ್ನ ಪತ್ನಿಗೆ ಮನಬಂದಂತೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಹೌದು, ಇಂದು ಎಂದಿನಂತೆ ಮನೆಯಲ್ಲಿ ಕೆಲಸದಲ್ಲಿ ತೊಡಗಿದ್ದ ಶ್ರಾವಣಿ ಸಮೀರ್ ಆಚಾರ್ಯ ತನ್ನ ಮಗಳು ಅಳುತ್ತಿದ್ದ ಕಾರಣಕ್ಕೆ ಬೇದರಿಸಿದ್ದಾರೆ.
ಇದೇ ವಿಷಯಕ್ಕೆ ಸಮೀರ್ ಆಚಾರ್ಯ ಅವರ ತಂದೆ ತನ್ನ ಸೊಸೆ ಶ್ರಾವಣಿಗೆ ಬೈದಿದ್ದಾರೆ. ಇದೇ ವಿಷಯಕ್ಕೆ ಮಾತಿಗೆ ಮಾತು ಬೆಳೆದು ಜಗಳ ಪ್ರಾರಂಭವಾಗಿದೆ ಎಂದು ಹೇಳಲಾಗುತ್ತಿದೆ.
ಬಳಿಕ ಸಮೀರ್ ಸೇರಿದಂತೆ ಅವರ ಅತ್ತೆ, ಮಾವ ಸೇರಿಕೊಂಡು ಮನಬಂದಂತೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ವೇಳೆ ಇನ್ಸ್ಟಾಗ್ರಾಂನಲ್ಲಿ ಲೈವ್ ಹೋಗಿದ್ದ ಶ್ರಾವಣಿ ಫೋನ್ ಒಡೆದು ಹಾಕಿದ್ದಾರೆ. ಗಲಾಟೆ ವೇಳೆ ಶ್ರಾವಣಿ ಅವರಿಗೆ ಕೈ, ಮುಖಕ್ಕೆ ಗಾಯಗಳಾಗಿವೆ.
ಮತ್ತೊಂದೆಡೆ ಸಮೀರ್ ಆಚಾರ್ಯ ತಂದೆಯ ತಲೆಗೆ ಗಾಯಗಳಾಗಿವೆ. ಸದ್ಯ ಶ್ರಾವಣಿ ನ್ಯಾಯಕ್ಕಾಗಿ ಮಹಿಳಾ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ.
ಮತ್ತೊಂದೆಡೆ ಸಮೀರ್ ಆಚಾರ್ಯ ತಂದೆ ಸೊಸೆ ಮೇಲೆ ದೂರು ನೀಡಲು ಮುಂದಾಗಿದ್ದಾರೆ ಎಂಬ ಸಂಗತಿ ಗೊತ್ತಾಗಿದೆ.
ಆದರೆ ಈ ಬಗ್ಗೆ ಸಮೀರ್ ಆಚಾರ್ಯ ಪತ್ನಿ ಶ್ರಾವಣಿ ಅವರನ್ನು ಮಾತನಾಡಿಸಲು ಮುಂದಾದಾಗ ಅವರು ಮಾವ, ಅತ್ತೆ ಹಾಗೂ ಗಂಡ ಹಲ್ಲೆ ನಡೆಸಿದ್ದು ಸತ್ಯ ಎಂದಿದ್ದಾರೆ. ಆದರೆ ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸಲು ನಿರಾಕರಿಸಿದರು.