ಕನ್ನಡ ಚಿತ್ರರಂಗದಲ್ಲಿ ಮೊದಲ ಮೂರು ಸಿನಿಮಾಗಳು 100 ದಿನ ಪ್ರದರ್ಶನ ಕಂಡಿದ್ದು ಶಿವಣ್ಣ ಅವರ ಸಿನಿಮಾ. ಇದರಿಂದಲೇ ಅವರಿಗೆ ಹ್ಯಾಟ್ರಿಕ್ ಹೀರೋ ಎಂಬ ಬಿರುದ್ದು ಬಂದಿದ್ದು. ಅಷ್ಟೇ ಅಲ್ಲದೆ ಕನ್ನಡ ಚಿತ್ರರಂಗದಲ್ಲಿ ತಾಯಿಯ ಪ್ರೀತಿ ಮತ್ತು ಅಣ್ಣನ ಪ್ರೀತಿಯ ಮಹತ್ವವನ್ನು ಸಾರಿದವರೆಂದರೆ ಅದು ನಮ್ಮ ಶಿವಣ್ಣ. ಇವರು ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ಇದೀಗ ಶಿವರಾಜ್ ಕುಮಾರ್ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇವರ ಹೊಸ ಸಿನಿಮಾದಲ್ಲಿ ಡಾಲಿ ಧನಂಜಯ್ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. ‘ಟಗರು’ ಸಿನಿಮಾದ ನಂತರ ಶಿವರಾಜ್‌ಕುಮಾರ್ ಮತ್ತು ನಟ ಧನಂಜಯ ಅವರು ‘ಬೈರಾಗಿ’ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದಾರೆ. ಇದೀಗ ಈ ಸಿನಿಮಾ ರಿಲೀಸ್‌ಗೆ ರೆಡಿ ಆಗಿದೆ. ಇನ್ನು ಈ ಸಿನಿಮಾದ ಎರಡನೇ ಹಾಡನ್ನು ಸಿನಿಮಾ ರಿಲೀಸ್ ಗೂ ಮುನ್ನ ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ.
ವೆಶೇಷ ಅಂದರೆ ಈ ಹಾಡನ್ನು ಶಿವರಾಜ್‌ಕುಮಾರ್ ಅವರು ಹಾಡಿದ್ದಾರೆ. ಶಿವಣ್ಣನ ಜೊತೆಗೆ ಮತ್ತೊಬ್ಬ ಸ್ಟಾರ್ ನಟ ಕೂಡ ಈ ಹಾಡನ್ನು ಹಾಡಿದ್ದರಂತೆ. ಯಾರಪ್ಪ ಆ ನಟ ಅಂತೀರಾ..ಮುಂದೆ ಓದಿ.
‘ಬೈರಾಗಿ’ ಸಿನಿಮಾದ ‘Rhythm Of Shivappa’ ಎಂಬ ಮತ್ತೊಂದು ಹಾಡನ್ನು ರಿಲೀಸ್ ಮಾಡೋದಕ್ಕ ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ. ಒಂದು ಕಡೆ ಈ ಸಾಂಗ್ ಅನ್ನು ಶಿವಣ್ಣ ಹಾಡಿರೋದು ವಿಶೇಷವಾದರೆ, ಇನ್ನೊಂದೆಡೆ ಒಬ್ಬ ಸ್ಟಾರ್ ನಟ ಧ್ವನಿ ನೀಡಿರುವುದು ವಿಶೇಷವಾಗಿದೆ.
ಈ ಸಿನಿಮಾದ ನಿರ್ಮಾಪಕ ಕೃಷ್ಣ ಸಾರ್ಥಕ್, ಆರಂಭದಲ್ಲಿ ಈ ಹಾಡನ್ನು ‘ಡಾಲಿ’ ಧನಂಜಯ್ ಅವರಿಂದಲೇ ಹಾಡಿಸಬೇಕು ಎಂದು ಆಸೆ ಪಟ್ಟಿದ್ದರು. ಆದರೆ ‘ನನ್ನಿಂದ ಹಾಡಲು ಸಾಧ್ಯವಿಲ್ಲ’ ಎಂದು ಡಾಲಿ ಹೇಳಿದ್ದಾರೆ.
ಹಾಗಾಗಿ ಯಾರಿಂದ ಹಾಡಿಸಬೇಕು ಎಂದು ಶಿವರಾಜ್‌ಕುಮಾರ್ ಅವರ ಬಳಿಯೇ ನಿರ್ಮಾಪಕ ಕೃಷ್ಣ ಸಾರ್ಥಕ್ ಕೇಳಿದ್ದಾರೆ. ಅದಕ್ಕೆ ಒಬ್ಬ ಸ್ಟಾರ್ ನಟನ ಹೆಸರನ್ನು ಶಿವಣ್ಣ ಸೂಚಿಸಿದ್ದಾರೆ. ಜೂನ್ 2ರಂದು ‘Rhythm Of Shivappa’ ಸಾಂಗ್ ರಿಲೀಸ್ ಆಗಲಿದ್ದು, ಅಂದೇ ಶಿವಣ್ಣ ಜೊತೆಗೆ ಹಾಡಿರುವ ಆ ನಟ ಯಾರು ಅನ್ನೋದನ್ನ ಕಾದು ನೋಡಬೇಕಿದೆ.
ಪ್ರಕೃತಿ ಪ್ರಭಾಕರ್, ಕರ್ನಾಟಕ ಟಿವಿ, ಸಿನಿಮಾ ಬ್ಯುರೋ