ಆಂಧ್ರಪ್ರದೇಶದ ಕರ್ನೂಲ್‌ನಲ್ಲಿ ಯಾರೂ ಊಹಿಸದ ಘನಘೋರ ದುರಂತವೊಂದು ನಡೆದು ಹೋಗಿದೆ. ಒಂದಲ್ಲ.. ಎರಡಲ್ಲ.. ಬರೋಬ್ಬರಿ 20ಕ್ಕೂ ಹೆಚ್ಚು ಮಂದಿ ಸಜೀವ ದಹನವಾಗಿದ್ದಾರೆ. ಆ 40 ನಿಮಿಷಗಳ ಕಾಲ ರವ ರವ ಬೆಂಕಿಯಲ್ಲಿ ಬೆಂದು ಹೋಗಿದ್ದಾರೆ. ಎಸಿ ಸ್ಲೀಪರ್ ಬಸ್ ಹೊತ್ತಿಉರಿದಿದ್ದು, 19 ಮಂದಿ ಪವಾಡ ಸದಶ್ಯದಂತೆ ಬದುಕುಳಿದಿದ್ದಾರೆ. ಬೆಳಗಿನ ಜಾವ 3.30ರ ಸುಮಾರಿಗೆ ಎಲ್ಲರೂ ಸುಖನಿದ್ರೆಗೆ ಜಾರಿದ ಹೊತ್ತಲ್ಲಿ, ಜವರಾಯ ಅಟ್ಟಹಾಸ ಮೆರೆದಿದ್ದ.
ಅಸಲಿಗೆ ಇಷ್ಟಕ್ಕೆಲ್ಲಾ ಕಾರಣರಾಗಿದ್ದು, ಒಬ್ಬ ಬೈಕ್ ಸವಾರ. ಅದೆಲ್ಲಿಂದ ಬರ್ತಿದ್ನೋ ಏನೋ? ಅದ್ಯಾವ ಗುಂಗಲ್ಲಿದ್ನೋ ಗೊತ್ತಿಲ್ಲ. ಅದೆಷ್ಟು ಅರ್ಜೆಂಟ್ ಇತ್ತೋ ಗೊತ್ತಿಲ್ಲ. ರಾಂಗ್ ರೂಟಲ್ಲಿ ಬಂದು, ತಾನೂ ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಜನರ ಸಾವಿಗೆ ಕಾರಣನಾಗಿದ್ದಾನೆ. ಅದ್ರಲ್ಲೂ ಒಂದೇ ಕುಟುಂಬದ ನಾಲ್ವರು ದುರ್ಮರಣಕ್ಕೆ ಕಾರಣನಾಗಿದ್ದಾನೆ.
ಅಬ್ಬಬ್ಬಾ.. ಈತನ ಹೆಸರು ಶಿವಶಂಕರ. ಬಸ್‌ನಲ್ಲಿದ್ದವರನ್ನು ಡೈರೆಕ್ಟ್ ಆಗಿ ಶಿವನ ಪಾದಕ್ಕೆ ಸೇರುವಂತೆ ಮಾಡಿದ್ದಾನೆ. ನೋಡೋದಕ್ಕೆ ತಳಹಿಡಿದ ತಪ್ಪಲಿಯಂತಿದ್ದಾನೆ. ಸ್ಟೈಲಾಗಿ ಏರ್ ಕಟ್. ಕಣ್ಣಿಗೆ ಕನ್ನಡ ಹಾಕಿಕೊಂಡು, ತನ್ನನ್ನೇ ತಾನು ಸೂಪರ್ ಹೀರೋ ಅಂದುಕೊಂಡಿದ್ದ ಅನ್ಸತ್ತೆ. ಈತನ ಹುಚ್ಚು, ಕೆಟ್ಟ ಸಾಹಸಕ್ಕೆ ಕುಟುಂಬಗಳನ್ನೇ ಬಲಿ ಪಡೆದಿದ್ದಾನೆ.
ಅಕ್ಟೋಬರ್ 24ರ ಬೆಳಗಿನ ಜಾವ, ರಾಂಗ್ ರೂಟ್‌ನಲ್ಲಿ ಭಾರೀ ವೇಗವಾಗಿ ಬೈಕ್ ಓಡಿಸಿಕೊಂಡು ಶಿವಶಂಕರ್ ಬರ್ತಿದ್ದಾನೆ. ಇತ್ತ, ಎಂದಿನಂತೆ ಕಾವೇರಿ ಖಾಸಗಿ ಬಸ್, ಹೈದರಾಬಾದ್‌ನಿಂದ ಬೆಂಗಳೂರಿಗೆ ಹೊರಟಿತ್ತು. ನೋಡನೋಡುತ್ತಿದ್ದಂತೆ ಬಸ್‌ಗೆ ಬೈಕ್ ಡಿಕ್ಕಿಯಾಗಿದೆ. ಸ್ಫೀಡ್ ಆಗಿ ಬರ್ತಿದ್ರಿಂದ ನಿಯಂತ್ರಣ ಮಾಡೋಕೆ ಸಾಧ್ಯವಾಗಿಲ್ಲ. ಬರೋಬ್ಬರಿ 400 ಮೀಟರ್ ದೂರ ಬೈಕನ್ನ ಎಳೆದೊಯ್ದಿದ್ದಾನೆ. ಬೈಕ್ ಪೆಟ್ರೋಲ್ ಲೀಕ್ ಆಗಿದೆ. ರಸ್ತೆಗೆ ಬೈಕ್ ಉಜ್ಜಿಕೊಂಡು ಹೋಗಿದ್ರಿಂದ ಬೆಂಕಿಯ ಕಿಡಿಗಳು ಹೊತ್ತಿಕೊಂಡಿದ್ದು, ಕ್ಷಣಾರ್ಧದಲ್ಲಿ ಬಸ್‌ಗೆ ವ್ಯಾಪಿಸಿದೆ. ಮಿಕ್ಕಿದೆಲ್ಲವೂ ಘೋರ ದುರಂತ.

