Hubli News: ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ಬಿ.ಆರ್.ಟಿ.ಎಸ್ ಬಸ್ಸಿನ ಅಪಘಾತದ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಸಾಗಿವೆ. ಅವೈಜ್ಞಾನಿಕತೆಯೋ..? ಬೇಜವಾಬ್ದಾರಿಯೋ ಗೊತ್ತಿಲ್ಲ ಅವಳಿನಗರದ ಜನರಿಗೆ ಚಿಗರಿ ಯೋಜನೆ ವರವಾಗುವುದಕ್ಕಿಂತ ಶಾಪವಾಗಿ ಪರಿಣಮಿಸಿದೆ.
ಸಿಗ್ನಲ್ ಗೆ ಸಂಬಂಧಿಸಿದಂತೆ ಕೆಲಸ ಮಾಡುತ್ತಿದ್ದ ವಾಹನಕ್ಕೆ ಹಿಂದಿನಿಂದ ಬಂದ ಚಿಗರಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬಸ್ಸಿನ ಮುಂದಿನ ಭಾಗ ಜಖಂಗೊಂಡಿರುವ ಘಟನೆ ಹುಬ್ಬಳ್ಳಿ ಧಾರವಾಡ ಮಧ್ಯದಲ್ಲಿ ನಡೆದಿದೆ. ಸಿಗ್ನಲ್ ಕಂಬಕ್ಕೆ ಸಂಬಂಧಿಸಿದಂತೆ ಕೆಲಸ ಮಾಡಲು ಬುಲೇರೋ ವಾಹನವನ್ನು ಪಾರ್ಕ್ ಮಾಡಲಾಗಿದೆ. ನಿಂತಿದ್ದ ವಾಹನಕ್ಕೆ ಚಿಗರಿ ಬಸ್ ಗುದ್ದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಇನ್ನೂ ಚಿಗರಿ ಅಪಘಾತದ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಸಾಗಿದ್ದು, ಈ ಬಗ್ಗೆ ಬಿ.ಆರ್.ಟಿ.ಎಸ್ ಅಧಿಕಾರಿಗಳು ಚಾಲಕರಿಗೆ ಸೂಕ್ತ ನಿರ್ದೇಶನದ ಜೊತೆಗೆ ತಾಂತ್ರಿಕ ಸಮಸ್ಯೆಗಳಿಂದ ಆಗುವ ಅಪಘಾತಕ್ಕೆ ಬ್ರೇಕ್ ಹಾಕುವ ಕಾರ್ಯವನ್ನು ಮಾಡಬೇಕಿದೆ.




