Tuesday, July 15, 2025

Latest Posts

ಚಿರತೆಯನ್ನ ಬೋನಿಗೆ ತಳ್ಳಿದ ‘ಕೋಳಿ’!

- Advertisement -

ಪರಮೇಶ್ವರ ಬೆಟ್ಟದಲ್ಲಿ ನವಿಲು, ನಾಯಿ ತಿಂದು ಹಾಯಾಗುತ್ತಿದ್ದ ಚಿರತೆಯು, ಕೊನೆಗೆ ಒಂದು ಕೋಳಿಯ ಆಸೆಗೆ ಬಲಿಯಾಗಿ ಬೋನಿಗೆ ಬಿದ್ದಿದೆ. ಅರಣ್ಯ ಇಲಾಖೆಯ ಹೊಸ ಪ್ರಯೋಗ ಯಶಸ್ವಿಯಾಗಿದೆ. ಈ ಸುದ್ದಿ ಈಗ ಸುತ್ತಲೂ ಮೆಚ್ಚುಗೆಗೆ ಪಾತ್ರವಾಗಿದೆ.

ಪರಮೇಶ್ವರ ಬೆಟ್ಟ, ರಾಯಚೂರು ತಾಲೂಕಿನ ಡಿ.ರಾಮಪುರ ಗ್ರಾಮದ ಬಳಿಯಲ್ಲಿರುವ ಒಂದು ನಿಸರ್ಗ ಸೊಬಗಿನ ಪ್ರದೇಶ. ಇಲ್ಲಿಯವರೆಗೂ ಕಾಡುಪ್ರಾಣಿಗಳಿಂದ ಯಾವುದೇ ಸಮಸ್ಯೆ ಇಲ್ಲದ ಈ ಪ್ರದೇಶದಲ್ಲಿ ಮೇ 20ರಂದು ಮೊದಲು ಚಿರತೆಯ ಚಲನವಲನ ಕಂಡುಬಂದಿತ್ತು. ಅಂದಿನಿಂದ, ಚಿರತೆಯು ನವಿಲುಗಳು, ನಾಯಿಗಳನ್ನು ತಿನ್ನುತ್ತ ಬೆಟ್ಟದಲ್ಲಿ ಓಡಾಡುತ್ತಲೇ ಇತ್ತು. ಗ್ರಾಮದವರು ಅಂದರೆ ಬಹುತೇಕ ಕೂಲಿ ಕಾರ್ಮಿಕರು, ಸಣ್ಣ ರೈತರು ಆತಂಕದಲ್ಲಿದ್ದರು.

ಮೊದಲಿಗೆ ನವಿಲು, ಬಳಿಕ ಸಾಕಿದ ನಾಯಿಗಳು… ಕೊನೆಗೆ ಹುಳು, ಹುಪ್ಪಟಿ ತಿನ್ನಲು ಬರುವ ಕೋಳಿಗಳನ್ನೂ ಹೊಡೆದು ಹಾಕತೊಡಗಿತ್ತು. ಈ ತೀವ್ರ ಪರಿಸ್ಥಿತಿಗೆ ಈ ಸಲ ಈ ಚಿರತೆಯ ಆಟದ ಅಂತ್ಯವನ್ನೇ ತರಬೇಕು! ಅಂತ
ಅರಣ್ಯ ಇಲಾಖೆ ಕೂಡ ಮನಸ್ಸು ಮಾಡಿ ಹನಿಟ್ರ್ಯಾಪ್ ತಂತ್ರ ರೂಪಿಸಿತು.

ಆದ್ರೆ ಹೆಮ್ಮೆಪಡುವ ಹನಿಟ್ರ್ಯಾಪ್ ತಂತ್ರ… ಮಳೆಯ ಕಾರಣದಿಂದ ಫೇಲ್ ಆಯ್ತು. ಹೆಚ್ಚು ತೊಳಕು, ಕಡಿಮೆ ಪರಿಣಾಮ – ಹೀಗಾಗಿ ಅರಣ್ಯ ಇಲಾಖೆ ಹೊಸ ತಂತ್ರ ರೂಪಿಸಿತು. ಅದೇ – ಕೋಳಿ ಮತ್ತು ನಾಯಿ ತಂತ್ರ.
ಒಂದೇ ಬೋನಿನೊಳಗೆ – ನಾಯಿ ಮತ್ತು ಕೋಳಿಯನ್ನು ಭದ್ರವಾಗಿ ಇಟ್ಟು, ಚಿರತೆಯನ್ನ ಆಕರ್ಷಿಸಲು ಶುರುಮಾಡಿದರು.

ಕೋಳಿಗೆ ಪಂಜರದಲ್ಲಿಟ್ಟರೂ, ನಾಯಿ ದಾಳಿ ಮಾಡದಂತೆ ಜಾಗರೂಕತೆ ತೆಗೆದುಕೊಳ್ಳಲಾಯಿತು. ಪ್ರತಿ ರಾತ್ರಿ ಮಾತ್ರ ಬೋನಿನೊಳಗೆ ಇಟ್ಟು – ಬೆಳಿಗ್ಗೆ ಅವರನ್ನು ಹೊರಗೆ ಬಿಡಲಾಗುತ್ತಿತ್ತು. ಈ ಮಧ್ಯೆ, ಟ್ರ್ಯಾಪ್ ಕ್ಯಾಮೆರಾದಲ್ಲಿ ಚಿರತೆಯ ಚಲನವಲನ ಸಿಕ್ಕಿಬಿದ್ದು, ಇದು ಯಶಸ್ಸಿಗೆ ತಿರುಗಲಾರಂಭಿಸಿದೆ.

ಬಳಿಕ ಜುಲೈ 14 ರಂದು ಕೋಳಿಯ ಮಾಂಸದಾಸೆಗೆ ಬಲಿಯಾದ ಚಿರತೆ, ಬೋನಿಗೆ ಸಿಕ್ಕಿ ಬಿದ್ದಿದ್ದು, ಅರಣ್ಯ ಇಲಾಖೆ ಅನುಸರಿಸಿದ ತಂತ್ರ ಫಲಿಸಿದಂತೆ ಸ್ಪಷ್ಟವಾಗಿದೆ. ಈ ಸುದ್ದಿ ಕೇಳಿ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಚಿರತೆ ಹಿಡಿಯುವ ಈ ಸಾಹಸಕ್ಕೆ ಸ್ಥಳೀಯರು ಮಾತ್ರವಲ್ಲ, ಸಾಮಾಜಿಕ ಜಾಲತಾಣದಲ್ಲೂ ಮೆಚ್ಚುಗೆ ವ್ಯಕ್ತವಾಗಿದೆ. ಚಿರತೆಯು ಬೋನಿಗೆ ಬಿದ್ದ ಬಳಿಕ, ಅದನ್ನು ತಕ್ಷಣವೇ ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ ಎನ್ನಲಾಗಿದೆ.

- Advertisement -

Latest Posts

Don't Miss