Sirsi News: ಶಿರಸಿ : ಆಕಸ್ಮಿಕವಾಗಿ ಬಾವಿಗೆ ಬಿದ್ದ ಎರಡು ವರ್ಷದ ಬಾಲಕಿಯನ್ನು ರಕ್ಷಿಸಿದ ಪಯುಚೌಟಿ.
ಎರಡು ವರ್ಷದ ಮಗು ಆಟವಾಡುತ್ತಾ ಆಕಸ್ಮಿಕವಾಗಿ ಬಾವಿಗೆ ಬಿದ್ದ ಘಟನೆ ಸಿರಸಿ ನಗರದ ಕಸ್ತೂರಿಬಾ ನಗರದಲ್ಲಿ ನಡೆದಿದೆ.
ಅಲ್ಲಿ ಹತ್ತಿರದಲ್ಲಿದ್ದ ಸಾರಿಕಾ ಟ್ರಸ್ಟ್ ಅಧ್ಯಕ್ಷರಾದ ಪಯು ಚೌಟಿ ಅವರಿಗೆ ವಿಷಯ ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ ಧಾವಿಸಿ ಕೊಡಲೆ ಬಾವಿಗೆ ಜಿಗಿದು ಬಾಲಕಿಯನ್ನು ರಕ್ಷಿಸಿದ್ದಾರೆ.
ಇವರ ಈ ಕಾರ್ಯ ನೆರೆದ ಜನರ ಪ್ರಶಂಸೆಗೆ ಪಾತ್ರವಾಯಿತು ಬಾಲಕಿಯ ಕುಟುಂಬದವರು ಕೃತಜ್ಞತೆ ಸಲ್ಲಿಸಿದರು.




