Gujarath News: ಎಲ್ಲ ಮಕ್ಕಳಿಗೂ ಚಿಪ್ಸ್ ಅಂದ್ರೆ ತುಂಬಾ ಇಷ್ಟವಾಗಿರತ್ತೆ. ಬರೀ ಮಕ್ಕಳಿಗೆ ಯಾಕೆ..? ದೊಡ್ಡವರಿಗೂ ಚಿಪ್ಸ್ ಅಂದ್ರೆ ಇಷ್ಟದ ಸ್ನ್ಯಾಕ್ಸ್. ಆದರೆ ಇಲ್ಲೊಂದು ನಾಲ್ಕು ವರ್ಷದ ಮಗುವಿಗೆ ಚಿಪ್ಸ್ ತಿನ್ನಲು ಕೊಟ್ಟಾಗ, ಆ ಚಿಪ್ಸ್ ಪ್ಯಾಕ್‌ನಲ್ಲಿ ಸತ್ತ ಕಪ್ಪೆ ಸಿಕ್ಕಿದೆ.
ಗುಜರಾತ್‌ನ ಜಾಮ್‌ನಗರದಲ್ಲಿ ಈ ಘಟನೆ ನಡೆದಿದ್ದು, ಮುಂಬೈ ನಿವಾಸಿ, ತಮ್ಮ ಮಗುವಿಗೆ ತಿನ್ನಲು ಚಿಪ್ಸ್ ಕೊಟ್ಟಿದ್ದರು. ಆದರೆ ಮಗು ಚಿಪ್ಸ್ ತಿನ್ನುವಾಗ, ಅದರಲ್ಲಿ ಸತ್ತ ಕಪ್ಪೆ ಸಿಕ್ಕಿದೆ. ಮಗು ಈ ವಿಷಯವನ್ನು ಅಮ್ಮನಿಗೆ ಹೇಳಿದಾಗ, ಮಗು ಏನೇನೋ ಹೇಳುತ್ತದೆ ಎಂದು ನಿರ್ಲಕ್ಷಿಸಿದ್ದಾರೆ. ಆದರೆ ಮಗು ಪದೇ ಪದೇ ಈ ಬಗ್ಗೆ ಹೇಳಿದಾಗ, ಅಮ್ಮ ಚಿಪ್ಸ್ ಪ್ಯಾಕೇಟ್ ಚೆಕ್ ಮಾಡಿದ್ದಾರೆ. ಆಗ ಕಪ್ಪೆ ಸತ್ತ ಸ್ಥಿತಿಯಲ್ಲಿ ಕಂಡುಬಂದಿದೆ.
ಇದನ್ನು ನೋಡಿ ಪೋಷಕರು ಆತಂಕಕ್ಕೆ ಒಳಗಾಗಿದ್ದು, ಮಗುವಿನ ಪೋಷರು ಪೊಲೀಸರಿಗೆ, ಆಹಾರ ಇಲಾಖೆ ಅಂಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ಬಾಲಾಜಿ ವೇಫರ್‌ಸ್ ಎನ್ನುವ ಕಂಪನಿ ಈ ಆಹಾರ ಪೊಟ್ಟಣ ತಯಾರಿಸಿದ್ದು, ಇದೀಗ ಆಹಾರ ಇಲಾಖೆ ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸಿದ್ದಾರೆ.
ಕೆಲ ದಿನಗಳ ಹಿಂದೆ ಐಸ್‌ಕ್ರೀಮ್‌ನಲ್ಲಿ ಬೆರಳು ಪತ್ತೆಯಾಗಿತ್ತು. ಇನ್ನೊಂದು ಬಾರಿ ಐಸ್‌ಕ್ರೀಮ್‌ನಲ್ಲಿ ಹುಳು ಪತ್ತೆಯಾಗಿತ್ತು. ಇನ್ನನು ವಿಮಾನದಲ್ಲಿ ಸಿಗುವ ಆಹಾರಗಳಲ್ಲಿ ಪದೇ ಪದೇ, ಹಲ್ಲಿ, ಕಲ್ಲು, ಜಿರಲೆ ಸಿಗುವುದು ಕಾಮನ್ ಆಗಿಬಿಟ್ಟಿದೆ.
#Frog found in a chips packet in #Gujarat #Jamnagar pic.twitter.com/ACm1HXxEqH
— Swamy (@SwamyJourno) June 19, 2024