Sandalwood: ನಿಮ್ಮ ಜೀವನದಲ್ಲಿ ನೀವು ಅವಮಾನವನ್ನು ಎದುರಿಸಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿರುವ ನಿರ್ದೇಶಕಿ ರೂಪಾ ಅಯ್ಯರ್, ಹಲವಾರು ಜನ ಅವಮಾನ ಮಾಡಿರುವ ಬಗ್ಗೆ ಮತ್ತು ಆ ಅವಮಾನಕ್ಕೆ ತಲೆಕೆಡಿಸಿಕ“ಳ್ಳದೇ, ತಮ್ಮ ಕೆಲಸದಲ್ಲಿ ಮಗ್ನರಾಗಿರುವ ಬಗ್ಗೆ ವಿವರಿಸಿದ್ದಾರೆ.
ರೂಪಾ ಅಯ್ಯರ್ ಅವರು 1 ಸಿನಿಮಾ ಕಥೆ ಬಗ್ಗೆ ಓರ್ವ ನಿರ್ದೇಶಕನ ಬಳಿ ಹೇಳಿದಾಗ, ಆತ ಓಹ್ ನಿಮ್ಮ ಕಥೆ ಚೆನ್ನಾಗಿದೆಯಾ..? ನಿಮ್ಮ ಕಥೆ ಚೆನ್ನಾಗಿದ್ರೆ ನಾನು ಚಪ್ಪಲಿ ತೆಗೆದು ತಲೆ ಮೇಲೆ ಇಟ್ಕೋತೀನಿ ಅಂತಾ ಹೇಳಿದ್ರು. ಆವಾಗ ನಾನು ಕಣ್ಣೀರು ಹಾಕಿದ್ದೆ. ಆದರೆ ಕೆಲವರು ನನಗೆ ನೀವೇ ನಿರ್ದೇಶನ ಮಾಡಿ ಅಂತಾ ಸಲಹೆ ನೀಡಿದರು.
ಬಳಿಕ ನಾನು ನಿರ್ದೇಶನ ಮಾಡಲು ನಿರ್ಧರಿಸಿದೆ. ನಂತರ ನನ್ನ ಸಿನಿಮಾಗೆ ಪ್ರಶಸ್ತಿ ಬಂದಾಗ, ಸಂದರ್ಶನದ್ಲಲಿ ನಾನು 1 ಮಾತು ಹೇಳಿದ್ದೆ. ಹೊಸ ಚಪ್ಪಲಿ ಖರೀದಿಸಿದ್ದೇನೆ. ಟ್ರೈ ಮಾಡೋದಾದ್ರೆ ಮಾಡಿ ಸರ್ ಅಂತಾ ಆ ಮಾತಿಗೆ ನಾನು ತಿರುಗೇಟು ನೀಡಿದ್ದೆ ಎಂದು ರೂಪಾ ಅಯ್ಯರ್ ಹೇಳಿದ್ದಾರೆ.
ಇನ್ನು ಮಹಿಳಾ ನಿರ್ದೇಶಕಿಯಾಗಿರೋದು ಎಷ್ಟು ಕಷ್ಟದ ಕೆಲಸವೆಂದು ಹೇಳಿರುವ ರೂಪಾ ಅಯ್ಯರ್, ಸಿನಿಮಾ ಕೆಲಸವನ್ನು ಸರಿಯಾದ ಸಮಯಕ್ಕೆ ಮಾಡಲು ಯಾರೂ ಬೆಂಬಲಿಸುವುದಿಲ್ಲ. ಈ ದಿನ ಶೂಟಿಂಗ್ಗೆ ಬನ್ನಿ ಅಂತಾ ಹೇಳಿದರೆ, ಬರ್ತೀನಿ ಅಂತಾ ನಿರ್ಲಕ್ಷ್ಯದಿಂದ ಮಾತನಾಡುತ್ತಾರೆ ಎಂದು ರೂಪಾ ಅಯ್ಯರ್ ಬೇಸರ ವ್ಯಕ್ತಪಡಿಸಿದ್ದಾರೆ. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.




