Wednesday, July 23, 2025

Latest Posts

ಅಪ್ಪ-ಮಕ್ಕಳ ದುರಂತ ಮನಕಲಕುವ ಸ್ಟೋರಿ : ದುರಂತ ಕಥೆ

- Advertisement -

ಸಾವು ಎನ್ನುವುದು ಯಾವಾಗ ಯಾರಿಗೆ ಹೇಗೆ ಬರುತ್ತದೆ ಗೊತ್ತಾಗುವುದಿಲ್ಲ. ಆರೋಗ್ಯವಾಗಿದ್ದವರು ಕೂಡ ಧಿಡೀರ್‌ ಸಾವನ್ನಪ್ಪುತ್ತಾರೆ. ಆಕಸ್ಮಿಕ ಅಪಘಾತಗಳಾಗಿ ಊಹೆನೂ ಮಾಡದ ರೀತಿಯಲ್ಲಿ ರಸ್ತೆಯಲ್ಲೇ ಹೆಣವಾಗುತ್ತಾರೆ. ಈ ರೀತಿಯಾಗಿ ದುರದೃಷ್ಟಾವತ್‌ ಎನ್ನುವಂತೆ ರಾಯಚೂರಿನ ಸಿರವಾರ ತಾಲೂಕಿನ ಕೆ.ತಿಮ್ಮಾಪುರ ಗ್ರಾಮದಲ್ಲಿ ಫುಡ್ ಪಾಯಿಸನ್‌ನಿಂದಾಗಿ ತಂದೆ ಮತ್ತು ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ.

38 ವರ್ಷದ ತಂದೆ ರಮೇಶ್ , 8 ವರ್ಷದ ಮಗಳು ನಾಗಮ್ಮ, 6 ವರ್ಷದ ದೀಪಾ ಮೃತ ದುರ್ವೈವಿಗಳಾಗಿದ್ದಾರೆ. ಸದ್ಯ ತಾಯಿ ಪದ್ಮಾ ಹಾಗೂ ಇನ್ನಿಬ್ಬರು ಮಕ್ಕಳಾದ ಕೃಷ್ಣ, ಚೈತ್ರಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರಿಗೆ ಗುಳೆ ಹೋಗಿದ್ದ ರಮೇಶ್ ಕುಟುಂಬವು 4 ದಿನಗಳ ಹಿಂದೆ ಗ್ರಾಮಕ್ಕೆ ಬಂದಿದ್ದರು. ಸೋಮವಾರ ಜಮೀನಿನಲ್ಲಿ ಬೆಳೆದಿದ್ದ ತೊಗರಿ ಬೆಳೆಗೆ ರಮೇಶ್ ಕ್ರಿಮಿನಾಶಕ ಸಿಂಪಡಣೆ ಮಾಡಿದ್ದರು. ಬಳಿಕ ರಾತ್ರಿ ರೊಟ್ಟಿ ಚವಳೆಕಾಯಿ ಪಲ್ಯ, ಅನ್ನ, ಸಾಂಬರ್ ಊಟ ಮಾಡಿದ್ದರು. ರಾತ್ರಿ 3 ಗಂಟೆ ಸುಮಾರಿಗೆ ಕುಟುಂಬಸ್ಥರಿಗೆ ಹೊಟ್ಟೆನೋವು ಕಾಣಿಸಿಕೊಂಡು ಅಸ್ವಸ್ಥರಾಗಿದ್ದರು. ಬಳಿಕ ಅವರನ್ನು ಲಿಂಗಸುಗೂರು ಆಸ್ಪತ್ರೆಗೆ ದಾಖಲಿಸಲಾಗುತ್ತಿತ್ತು.

ಆದರೆ ಆಸ್ಪತ್ರೆಗೆ ರವಾನಿಸುವ ವೇಳೆ ಮಾರ್ಗ ಮಧ್ಯದಲ್ಲೇ ದೀಪಾ ಕೊನೆಯುಸಿರೆಳೆದಿದ್ದಾಳೆ. ಬಳಿಕ ರಮೇಶ್ ಹಾಗೂ ನಾಗಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಇನ್ನುಳಿದ ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

 

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss