ರಾಜ್ಯ ಬಿಜೆಪಿ ಪಾಳಯದಲ್ಲಿ ಬಹುದೊಡ್ಡ ಬೆಳವಣಿಗೆ ಆಗುತ್ತಿದೆ. ಬಿ.ವೈ ವಿಜಯೇಂದ್ರ ಅವರನ್ನು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದ ಇಳಿಸಲೇಬೇಕು ಎಂಬ ಕೂಗು ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಇದ್ದು, ಅತಿದೊಡ್ಡ ಕಂಪನ ಶುರುವಾಗಿದೆ.
ಈಗಾಗಲೇ ಕರ್ನಾಟಕದಲ್ಲಿ ವಿಜಯೇಂದ್ರ ಅಧ್ಯಕ್ಷರಾಗಿರುವುದನ್ನು ಬಹುತೇಕ ಬಿಜೆಪಿ ಹಿರಿಯ ನಾಯಕರು ಇಷ್ಟಪಡುತ್ತಿಲ್ಲ. ರಾಜ್ಯಾಧ್ಯಕ್ಷರು ಬದಲಾಗಬೇಕು ಎಂಬುದು ಸಾಕಷ್ಟು ಹಿರಿಯ ನಾಯಕರ ಅಭಿಪ್ರಾಯ ಆಗಿದೆ. ಈ ಬಗ್ಗೆ ಅಸಮಾಧಾನವೂ ಇದೆ. ಏಕಾಏಕಿ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರ ಸ್ಥಾನದಿಂದ ಇಳಿಸಿದರೆ ಯಡಿಯೂರಪ್ಪ ತಿರುಗಿ ಬಿದ್ದರೆ ಪಕ್ಷಕ್ಕೆ ಡ್ಯಾಮೇಜ್ ಆಗುತ್ತೆ. ಇತ್ತ ರಾಜ್ಯಾಧ್ಯಕ್ಷರನ್ನು ಬದಲಾವಣೆ ಮಾಡಲಿಲ್ಲ ಅಂದರೆ ಹಿರಿಯ ನಾಯಕರ ಅಸಮಾಧಾನಕ್ಕೆ ಪಕ್ಷ ಒಡೆದು ಹೋಗುವ ಸಾಧ್ಯತೆಗಳು ಇವೆ. ಹೀಗಾಗಿ ವಿಜಯೇಂದ್ರ ಅವರನ್ನು ಪಕ್ಷಾಧ್ಯಕ್ಷ ಸ್ಥಾನದಿಂದ ಇಳಿಸದೆ ದಾರಿಯಿಲ್ಲ ಅಂತ ಯೋಚಿಸುತ್ತಿರುವ ಮೋದಿ-ಅಮಿತ್ ಶಾ ಜೋಡಿ.
ಇದರ ಮಧ್ಯದಲ್ಲಿ ಇದೀಗ ಬಿಜೆಪಿಯಲ್ಲಿ ದೊಡ್ಡದೊಂದು ಬದಲಾವಣೆಯ ಆಗುವ ಬಗ್ಗೆ ಮಾತುಕತೆ ಜೋರಾಗಿದೆ. ಕಳೆದ ವಾರ ದಿಲ್ಲಿಯಿಂದ ಬಂದ ಒಂದು ವರ್ತಮಾನ ಯಡಿಯೂರಪ್ಪ ಅವರಿಗೆ ಕಸಿವಿಸಿ ಉಂಟು ಮಾಡಿದೆಯಂತೆ. ಅದರ ಪ್ರಕಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಒಂದು ಪ್ರಪೋಸಲ್ಲನ್ನು ಯಡಿಯೂರಪ್ಪನವರ ಮುಂದಿಡಲಿದ್ದಾರಂತೆ.
ಏನದೂ ಪ್ರಪೋಸಲ್ಲು ?
ಕರ್ನಾಟಕದಲ್ಲಿ ವಿಜಯೇಂದ್ರ ಅಧ್ಯಕ್ಷರಾಗಿರುವುದನ್ನು ಬಹುತೇಕ ಹಿರಿಯ ನಾಯಕರು ಇಷ್ಟಪಡುತ್ತಿಲ್ಲ. ಹೀಗಾಗಿ ವಿಜಯೇಂದ್ರ ಅವರನ್ನು ರಾಷ್ಟ್ರಮಟ್ಟದಲ್ಲಿ ಪಕ್ಷಕ್ಕೆ ನಿಯೋಜನೆ ಮಾಡಿ, ನಿಮ್ಮ ಹಿರಿಯ ಮಗ ರಾಘವೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ತಂದರೆ ಹೇಗೆ? ಎಂಬುದು ಅಮಿತ್ ಶಾ ಮುಂದಿಡಲಿರುವ ಪ್ರಪೋಸಲ್ಲು. ಇದಕ್ಕೆ ಯಡಿಯೂರಪ್ಪನವರು ಬಹಳ ಕಸಿವಿಸಿಯಲ್ಲಿದ್ದಾರೆ.
ಇಬ್ಬರು ಮಕ್ಕಳೇ ಆದರೆ ಬಿ ವೈ ರಾಘವೇಂದ್ರ ಅವರು ರಾಜ್ಯಾಧ್ಯಕ್ಷರು ಆದರೆ ಯಡಿಯೂರಪ್ಪಗೆ ಯಾಕೆ ಕಸಿವಿಸಿ ಆಗ್ಬೇಕಲ್ವ ? ಅದಕ್ಕೂ ಒಂದು ಕಾರಣ ಇದೆ. ಆ ಕಾರಣಕ್ಕೆ ಬಿವೈ ಗೆ ಟೆನ್ಷನ್ ಟೆನ್ಷನ್.
ವಿಜಯೇಂದ್ರ ಅವರ ಜಾಗಕ್ಕೆ ರಾಘವೇಂದ್ರ ಬಂದು ಕುಳಿತರೆ ಯಡಿಯೂರಪ್ಪ ಇಷ್ಟಪಡುವುದಿಲ್ಲ ಅಂತೇನಲ್ಲ. ಆದರೆ ಇಂಥ ಪ್ರಪೋಸಲ್ಲು ಪಕ್ಷದ ಮೇಲೆ ತಮಗಿರುವ ಹಿಡಿತವನ್ನು ಕಡಿಮೆ ಮಾಡುವ ತಂತ್ರ ಎಂಬುದು ಅವರ ಯೋಚನೆ. ಕಳೆದ ತಿಂಗಳು ಕರ್ನಾಟಕಕ್ಕೆ ಬಂದ ಅಮಿತ್ ಶಾ ಅವರು ವಿಜಯೇಂದ್ರ ಅವರ ವಿಷಯದಲ್ಲಿ ಒಂದಷ್ಟು ಪಾಸಿಟಿವ್ ಆಗಿಯೇ ಇದ್ದರು. ಅಷ್ಟೇ ಅಲ್ಲದೆ, ಪಕ್ಷದ ನಾಯಕರನ್ನು ನೀವು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂಬ ದೂರು ವ್ಯಾಪಕವಾಗಿದೆ. ಮೊದಲು ಅದನ್ನು ಸರಿಪಡಿಸಿಕೊಳ್ಳಿ ಅಂತ ಹೇಳಿ ಬುದ್ದಿ ಹೇಳಿ ಹೋಗಿದ್ದರು.
ಆದರೆ ವಿಜಯೇಂದ್ರ ಅವರು ಪಕ್ಷದಲ್ಲಿರುವ ಅಸಮಾಧಾನಿತರ ಜತೆ ಸಂಧಾನದ ಪ್ರಯತ್ನ ನಡೆಸಿದ್ದು ನಿಜವಾದರೂ ಅದು ಹೇಳಿಕೊಳ್ಳುವಂಥ ಫಲ ನೀಡಿಲ್ಲ. ಹೀಗಾಗಿ ಕೇಂದ್ರ ಸಚಿವ ಪ್ರಲ್ಹಾದ ಜೋಷಿ ಮತ್ತು ಮಾಜಿ ಸಿಎಂ ಡಿ.ವಿ.ಸದಾನಂದಗೌಡರ ಪ್ಯಾಚಪ್ ಪ್ರಯತ್ನಗಳೂ ವರ್ಕ್ ಔಟ್ ಆಗುವ ಲಕ್ಷಣಗಳು ಕಾಣುತ್ತಿಲ್ಲ. ಇನ್ನು ವಿಜಯೇಂದ್ರ ಅವರನ್ನು ಇಳಿಸಿ ರಾಘವೇಂದ್ರ ಅವರನ್ನು ತರುತ್ತೇವೆ ಎಂಬುದೇ ತಮ್ಮ ಸುತ್ತ ಹೆಣೆಯುವ ಜಾಲ. ಮೊದಲನೆಯದಾಗಿ ವಿಜಯೇಂದ್ರ ಅವರ ಜಾಗಕ್ಕೆ ರಾಘವೇಂದ್ರ ಅವರು ಬಂದರೆ ಪಕ್ಷದ ಮೇಲಿನ ಹಿಡಿತ ಕೈ ತಪ್ಪುತ್ತದೆ. ಯಾಕೆಂದರೆ ರಾಘವೇಂದ್ರ ಅವರು ವಿಜಯೇಂದ್ರ ಅವರಂತೆ ಅಗ್ರೆಸಿವ್ ಅಲ್ಲ. ಇವತ್ತು ಅಗ್ರೆಸಿವ್ ಆಗಿರದಿದ್ದರೆ ಪಕ್ಷದ ಮೇಲೆ ಹಿಡಿತ ಹೊಂದಲು ಸಾಧ್ಯವಿಲ್ಲ.
ಒಂದು ಸಲ ಹೀಗೆ ಹಿಡಿತ ಕಳೆದುಕೊಂಡರೆ ರಾಘವೇಂದ್ರ ಕೂಡಾ ತುಂಬ ಕಾಲ ಅಧ್ಯಕ್ಷರಾಗಿ ಮುಂದುವರಿಯಲು ಸಾಧ್ಯವಿಲ್ಲ. ಅರ್ಥಾತ್, ಮುಂದಿನ ವಿಧಾನಸಭಾ ಚುನಾವಣೆಯ ವೇಳೆಗೆ ಪಕ್ಷದ ಅಧ್ಯಕ್ಷ ಸ್ಥಾನದಲ್ಲಿ ತಮ್ಮ ವಿರೋಧಿ ಬಣದ ನಾಯಕರೊಬ್ಬರು ಸೆಟ್ಲಾಗಿರುತ್ತಾರೆ ಎಂಬುದು ಯಡಿಯೂರಪ್ಪ ಅವರ ಅನುಮಾನ. ಈಗಾಗಲೇ ಈ ವಿಚಾರಗಳಿಂದ ವಿಚಲಿತರಾಗಿರುವ ಯಡಿಯೂರಪ್ಪ ಮುಂದೆ ಎನೂ ಮಾಡುತ್ತಾರೆ. ಮೋದಿ ಅಮಿತ್ ಶಾ ಜೋಡಿ ಯಾವ ರೀತಿ ಗೊಂದಲಗಳನ್ನು ಸರಿಪಡಿಸುತ್ತಾರೆ ಕಾದು ನೋಡಬೇಕಿದೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ