www.karnatakatv.net: ಜಿ-20 ಶೃಂಗಸಭೆಯಲ್ಲಿ ಮೊದಲ ಸೆಶನ್ಸ್ ನಲ್ಲಿ ಮೋದಿ ಮಾತನಾಡಿ, ಒಂದು ಭೂಮಿ..ಒಂದು ಆರೋಗ್ಯ ಎಂಬುದು ನಮ್ಮ ರಾಷ್ಟ್ರದ ಧ್ಯೇಯ ಎಂದು ಸಭೆಯಲ್ಲಿ ನಾಯಕರಿಗೆ ತಿಳಿಸಿದ್ದಾರೆ.
ಜಾಗತಿಕವಾಗಿ ಕೊವಿಡ್ 19 ವಿರುದ್ಧ ಹೋರಾಟಕ್ಕೆ ಭಾರತ ಅಪಾರ ಕೊಡುಗೆಗಳನ್ನು ನೀಡಿದ ವಿಚಾರಕ್ಕೆ ಜಾಸ್ತಿ ಒತ್ತು ಕೊಟ್ಟಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಹರ್ಷವರ್ಧನ ಶೃಂಗಲಾ ಹೇಳಿದರು. 2022ರ ಅಂತ್ಯದ ಹೊತ್ತಿಗೆ 5 ಬಿಲಿಯನ್ ಡೋಸ್ ಕೊವಿಡ್ 19 ಲಸಿಕೆ ಉತ್ಪಾದನೆಗೆ ಭಾರತ ಸಿದ್ಧವಾಗಿದೆ. ಇದನ್ನು ಇಡೀ ಜಗತ್ತಿಗೆ ಅಗತ್ಯವಿದ್ದಲ್ಲಿ ಪೂರೈಸಲಾಗುತ್ತದೆ ಎಂದು ಹೇಳಿರುವ ಪ್ರಧಾನಿ ಮೋದಿ, ಆರ್ಥಿಕ ಚೇತರಿಕೆ ಮತ್ತು ಪೂರೈಕೆ ಸರಪಳಿ ವೈವಿಧ್ಯೀಕರಣದಲ್ಲಿ ಭಾರತವನ್ನು ನಿಮ್ಮ ಸಹಭಾಗಿಯನ್ನಾಗಿ ಮಾಡಿಕೊಳ್ಳಿ ಎಂದು ಜಿ20 ದೇಶಗಳ ನಾಯಕರಿಗೆ ಕರೆ ನೀಡಿದರು. ಕೊವಿಡ್ 19 ಸಾಂಕ್ರಾಮಿಕದ ಹೊರತಾಗಿಯೂ ಕೂಡ ವಿಶ್ವಾಸಾರ್ಹ ಪೂರೈಕೆಯಲ್ಲಿ ಭಾರತ ನಂಬಿಕಸ್ಥ ಪಾಲುದಾರನಾಗಿದೆ ಎಂಬುದಾಗಿ ಪ್ರಧಾನಿ ಮೋದಿ ಶೃಂಗಸಭೆಯಲ್ಲಿ ಹೇಳಿದ್ದಾರೆಂದು ಹರ್ಷವರ್ಧನ ಶೃಂಗಲಾ ತಿಳಿಸಿದ್ದಾರೆ.

