ಬಿಗ್‌ಬಾಸ್‌ನಲ್ಲಿ ಶುರುವಾಯ್ತು ಲವ್ ಸ್ಟೋರಿ: ಕಾರ್ಯಕ್ರಮಕ್ಕೆ ಆಗಮಿಸಿ ದೂರು ನೀಡಿದ ಪ್ರಿಯತಮೆ..!

Bigg Boss Hindi: ಹಿಂದಿ ಬಿಗ್‌ಬಾಸ್ ನಲ್ಲಿ ಸಲ್ಮಾನ್ ಖಾನ್ ಆಕ್ರೋಶ ವ್ಯಕ್ತಪಡಿಸಿದ್ದು, ಸ್ಪರ್ಧಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಬಿಗ್‌ಬಾಸ್ ಸ್ಪರ್ಧಿಯಾಗಿರುವ ಸ್ಕೌಟ್ ಮತ್ತು ಲವ್ ಎಂಬುವವರ ನಡುವಿನ ಸ್ನೇಹ ಇದೀಗ ಎಲ್ಲೆಡೆ ಚರ್ಚೆಯಲ್ಲಿದೆ.

ಏಕೆಂದರೆ ಇವರಿಬ್ಬರೂ ತಾವು ಅಣ್ಣ ತಂಗಿ ಇದ್ದ ಹಾಗೆ ಎಂದು ಹೇಳಿದ್ದಾರೆ. ಆದರೆ ಇವರಿಬ್ಬರ ಮಧ್ಯೆ ಇರುವ ಆತ್ಮೀಯತೆಯ ಬಗ್ಗೆ ಜನ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಇವರಿಬ್ಬರ ನಡುವೆ  ಸ್ನೇಹ, ಅಣ್ಣ- ತಂಗಿ ಸಂಬಂಧ ಇದ್ದಂತಿಲ್ಲ. ಬದಲಾಗಿ ವಿಚಾರ ಬೇರೆಯೇ ಇದೆ ಎನ್ನುತ್ತಿದ್ದಾರೆ.

ಈ ಬಗ್ಗೆ ವೀಕೆಂಡ್ ಪಂಚಾಯ್ತಿಯಲ್ಲಿ ಸಲ್ಮಾನ್ ಖಾನ್ ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಕೌಟ್ ಮತ್ತು ಲವ್ ಮಧ್ಯೆ ಇರುವುದು ಸ್ನೇಹವೇ ಆಗಿದ್ದಲ್ಲಿ, ಈ ಬಗ್ಗೆ ಗೆಳತಿ ಕಾಶ್ವಿ ಜತೆ ಏಕೆ ಮುಕ್ತವಾಗಿ ಮಾತನಾಡಲಿಲ್ಲ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಸ್ಕೌಟ್ಗೆ ಗೆಳತಿ ಇದ್ದಾಳೆ ಅನ್ನೋದು ತಿಳಿದಿದ್ದರೂ ಲವ್ ಯಾಕೆ ಆತನ ಜತೆ ಅಷ್ಟು ಆತ್ಮೀಯತೆಯಿಂದ ಇರಲು ಕಾರಣವೇನು ಎಂದು ಪ್ರಶ್ನಿಸಿದ್ದಾರೆ.

ಅಂದಹಾಗೆ ಕಾಶ್ವಿ ಸ್ಕೌಟ್ ಗೆಳತಿಯಾಗಿದ್ದು, ಆಕೆ ಬಿಗ್‌ಬಾಸ್ ಸ್ಪರ್ಧಿಯಲ್ಲ. ಬದಲಾಗಿ ಆಕೆ ವೀಕೆಂಡ್‌ಕಾ ವಾರ್ ಕಾರ್ಯಕ್ರಮಕ್ಕೆ ಆಗಮಿಸಿದ್ದು, ಆ ವೇಳೆ ಇವರಿಬ್ಬರ ಗೆಳೆಯತನದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಕಾರಣಕ್ಕೆ ಸಲ್ಮಾನ್ ಇವರಿಬ್ಬರಿಗೆ ಕ್ಲಾಸ್ ತೆಗೆದುಕ“ಂಡಿದ್ದರು.

About The Author