Wednesday, June 18, 2025

Latest Posts

ಗೌರಿ ವಿಸರ್ಜನೆ ವೇಳೆ ಡಿಜೆ ಮ್ಯೂಸಿಕ್‌ಗೆ ಹೆಜ್ಜೆ ಹಾಕುತ್ತಿದ್ದ ವ್ಯಕ್ತಿ ಹಾರ್ಟ್ ಅಟ್ಯಾಕ್‌ಗೆ ಬಲಿ

- Advertisement -

Chamarajanagara News: ಚಾಮರಾಜನಗರದಲ್ಲಿ ಯುವಕರೊಂದಿಗೆ ಸೇರಿ ನೃತ್ಯ ಮಾಡುತ್ತಿದ್ದ ವ್ಯಕ್ತಿ ಹಾರ್ಟ್ ಅಟ್ಯಾಕ್ ಆಗಿ, ಕುಸಿದು ಬಿದ್ದು, ಸಾವನ್ನಪ್ಪಿದ್ದಾರೆ.

ಚಾಮರಾಜನಗರ ತಾಲೂಕಿನ ಮೂಡ್ನಾಕೂಡು ತಾಲೂಕಿನಲ್ಲಿ ಈ ಘಟನೆ ನಡೆದಿದ್ದು, 42 ವರ್ಷದ ಬಾಬು ಎಂಬುವವರು ಹಾರ್ಟ್ ಅಟ್ಯಾಕ್‌ನಿಂದ ಮೃತಪಟ್ಟಿದ್ದಾರೆ. ಈ ಗ್ರಾಮದಲ್ಲಿ ಗಣೇಶ ವಿಸರ್ಜನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಡಿಜೆ ಹಾಡಿಗೆ ಯುವಕರೆಲ್ಲ ಹೆಜ್ಜೆ ಹಾಕುತ್ತಿದ್ದರು. ಅವರೊಂದಿಗೆ ಸೇರಿ ಬಾಬು ಕೂಡ ಡಾನ್ಸ್ ಮಾಡಿದ್ದು, ಕೆಲ ಹೊತ್ತಿನಲ್ಲಿ ಅಚಾನಕ್ ಆಗಿ ಕುಸಿದು ಬಿದ್ದಿದ್ದಾರೆ.

ಬಾಬುವನ್ನು ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲು ಪ್ರಯತ್ನಿಸಿದ್ದಾರೆ. ಆದರೆ ಬಾಬು ಅದಾಗಲೇ ಸಾವನ್ನಪ್ಪಿದ್ದರು. ಕೊರೋನಾ ಬಳಿಕ ಹಲವರು ಸಡನ್ ಆಗಿ ಹಾರ್ಟ್ ಅಟ್ಯಾಕ್ ಆಗಿ ಸಾವನ್ನಪ್ಪುತ್ತಿರುವುದನ್ನು ನಾವು ನೋಡುತ್ತಿದ್ದೇವೆ.

ಡಾನ್ಸ್ ಮಾಡುತ್ತ, ಯಕ್ಷಗಾನ ಮಾಡುತ್ತ, ಜಿಮ್‌ಗೆ ಹೋಗಿ ಬಂದ ಬಳಿಕ, ಹೆಚ್ಚು ಕೆಲಸ ಮಾಡಿದ ಬಳಿಕ, ನಿಶ್ಶಕ್ತಿಯಿಂದ ಬಳಸಿ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಅದರಲ್ಲೂ ಇನ್ನು ವಯಸ್ಸು 50 ದಾಟದವರು ಸಾವನ್ನಪ್ಪುತ್ತಿರುವುದು ಆತಂಕಕಾರಿ ವಿಷಯವಾಗಿದೆ.

- Advertisement -

Latest Posts

Don't Miss