Tuesday, October 15, 2024

Latest Posts

Different case: 2 ವರ್ಷದ ಮಗುವಿನ ಪ್ರಾಣ ತೆಗೆದ ಏರ್‌ಬ್ಯಾಗ್: ನವಜಾತ ಶಿಶುವಿನ ಪ್ರಾಣ ಉಳಿಸಿದ ವೈದ್ಯ

- Advertisement -

Kerala News: ಕಾರ್‌ನಲ್ಲಿ ಬಳಸುವ ಏರ್‌ಬ್ಯಾಗ್ ತುರ್ತು ಪರಿಸ್ಥಿತಿಯಲ್ಲಿ ಜೀವ ಉಳಿಸಲು ಬಳಸಲಾಗುವ ವಸ್ತು. ಆದರೆ ಅದೇ ಏರ್‌ಬ್ಯಾಗ್, ಪುಟ್ಟ ಕಂದಮ್ಮನ ಸಾವಿಗೆ ಕಾರಣವಾಗಿದೆ.

ಕೇರಳದಲ್ಲಿ ಈ ಘಟನೆ ನಡೆದಿದ್ದು, ಚಲಿಸುತ್ತಿದ್ದ ಕಾಾರು, ಟ್ಯಾಂಕರ್‌ಗೆ ಡಿಕ್ಕಿ ಹೊಡೆದಿದೆ. ಈ ಪರಿಣಾಮವಾಗಿ ಏರ್‌ಬ್ಯಾಗ್ ಓಪನ್ ಆಗಿದೆ. ಮುಂದಿನ ಸೀಟಿನಲ್ಲಿ ತಾಯಿಯೊಂದಿಗೆ ಕುಳಿತಿದ್ದ ಎರಡು ವರ್ಷದ ಮಗು, ಏರ್‌ ಬ್ಯಾಗ್ ಓಪನ್ ಆದ ಪರಿಣಾಮ, ಮಗುವಿನ ಮುಖ ಒತ್ತಿಹೋಗಿದೆ. ಈ ವೇಳೆ ಉಸಿರುಗಟ್ಟಿ ಸಾವನ್ನಪ್ಪಿದೆ.

ಮಗುವನ್ನು ಇನ್ನುಳಿನ ನಾಲ್ವರು ಪ್ರಯಾಣಿಕರು ಸಣ್ಣ ಪುಟ್ಟ ಗಾಯವಾಗಿ, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮನುಷ್ಯನ ಜೀವ ಉಳಿಸಬೇಕಾದ ಏರ್‌ಬ್ಯಾಗ್ ಮಗುವಿನ ಪ್ರಾಣವನ್ನೇ ಕಸಿದಿದೆ.

ಇನ್ನೊಂದೆಡೆ ಸೋಶಿಯಲ್ ಮೀಡಿಯಾದಲ್ಲಿ ಒಂದು ವೀಡಿಯೋ ಹರಿದಾಡುತ್ತಿದ್ದು, ಈ ವೀಡಿಯೋದಲ್ಲಿ ಉಸಿರು ನಿಂತು ಹೋಗಿದ್ದ ಮಗುವಿಗೆ, ವೈದ್ಯರೊಬ್ಬರು ಜೀವ ನೀಡಿದ್ದಾರೆ. ಅಗಷ್ಟೇ ಹುಟ್ಟಿದ ಮಗು ಉಸಿರಾಡದೇ ಹಾಗೆ ಮಲಗಿದ್ದು, ಅದನ್ನು ಎತ್ತಿಕೊಂಡು ಆಪರೇಷನ್ ಥಿಯೇಟರ್‌ನಿಂದ ಹೊರ ಬಂದ ವೈದ್ಯರು, ಕೆಲವು ವೈದ್ಯಕೀಯ ಸಾಧನಗಳನ್ನು ತೆಗೆದುಕೊಂಡು , ಮಗು ಉಸಿರಾಡುವಂತೆ ಮಾಡಿದ್ದಾರೆ. ವೀಡಿಯೋ ನೋಡಿ ನೆಟ್ಟಿಗರು, ವೈದ್ಯರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಹಾರೈಸಿದ್ದಾರೆ.

ಈ ವೀಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ

- Advertisement -

Latest Posts

Don't Miss