ಕಾರ್ ಮೇಲೆ ಪಾಕ್ ಧ್ವಜವಿರಿಸಿ ಫೋಟೋ ತೆಗೆದು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟ ಕಿಡಿಗೇಡಿ

Gadag News: ಗದಗ: ಕಾರ್ ಮೇಲೆ ಪಾಕ್ ಧ್ವಜ ಹಾಕಿ, ಅದರ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿರುವ ಘಟನೆ ಗದಗದಲ್ಲಿ ನಡೆದಿದೆ.

ತಹಶೀನ್ ಎಂಬಾತ ಕಾರ್ ಬೋನಟ್ ಮೇಲೆ ಪಾಕ್ ಧ್ವಜದ ಬಾವುಟ ಹಾಕಿ, ನೊಂದಣಿ ಪೋಚ್ ಪಾಕಿಸ್ತಾನ ರಾಷ್ಟ್ರದ ಧ್ವಜದ ಚಿತ್ರ ಪ್ರದರ್ಶನ ಮಾಡಿ. ಆ ಫೋಟೋವನ್ನು ಸೋಶಿಯಲ್ ಮೀಡಿಯಾಗೆ ಹಾಕಿದ್ದಾನೆ. ಅಲ್ಲದೇ ಈ ಪೋಸ್ಟ್ ಅನ್ನು ಅಬ್ದುಲ್ ಎಂಬ ಹೆಸರಿನ ಐಡಿಯಿಂದ ಶೇರ್ ಮಾಡಿದ್ದಾನೆ.

ಫೋಟೋ ಶೇರ್ ಆಗುತ್ತಿದ್ದಂತೆ, ಗದಗ ನಗರ ಠಾಣೆಯಲ್ಲಿ ಸೊಮೋಟೋ ಕೇಸ್ ದಾಖಲಾಗಿದೆ. ಸಮಾಜದ ಐಕ್ಯತೆ ಧಕ್ಕೆ, ಸೌಹಾರ್ಧತೆಗೆ ಭಾದಕವಾಗುವ ಕೃತ್ಯವನ್ನು ಎಸಗಿದ್ದಾರೆಂದು ಸುಮೋಟೋ ಕೇಸ್ ಹಾಕಲಾಗಿದೆ. BNS ಕಾಯ್ದೆ ಕಲಂ 299, 353(2), R/W 3/5 ನಡಿ ಕೇಸ್ ದಾಖಲಾಗಿದ್ದು, ಬಕ್ರೀದ್ ಹಬ್ಬಕ್ಕೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಇನ್ನು ಘಟನೆ ಕುರಿತಂತೆ ದೇಶದ ಅನ್ನ ತಿಂದು ದ್ರೋಹ ಬಗೆಯುವರಿಗೆ ತಕ್ಕ ಶಿಕ್ಷೆಯಾಗಲಿ ಅಂತ ಸಾರ್ವಜನಿಕರು ಆಗ್ರಹಿಸಿದ್ದಾರೆ. ಆದರೆ ಆರೋಪಿಯನ್ನು ಇನ್ನೂ ಬಂಧಿಸಲಾಗಿಲ್ಲ. ಹಾಗಾಗಿ ಆರೋಪಿಗಳನ್ನು ಬಂಧಿಸಿ, ಜೈಲಿಗೆ ಹಾಕಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

About The Author