Thursday, December 5, 2024

Latest Posts

ಚಲಿಸುತ್ತಿದ್ದ ರೈಲಿನಲ್ಲಿ ಪ್ರಯಾಣಿಕನಿಗೆ ಕಚ್ಚಿದ ಹಾವು: ಆತಂಕದಿಂದ ದಿಕ್ಕೆಟ್ಟು ಓಡಿದ ಜನ

- Advertisement -

Jhansi News: ಚಲಿಸುತ್ತಿದ್ದ ರೈಲಿನಲ್ಲಿ ವ್ಯಕ್ತಿಯೊಬ್ಬರಿಗೆ ಹಾವು ಕಚ್ಚಿದ ಘಟನೆ ಝಾನ್ಸಿಯಲ್ಲಿ ನಡೆದಿದೆ. ಮಧ್ಯಪ್ರದೇಶದ ಝಾನ್ಸಿಯಲ್ಲಿ ಈ ಘಟನೆ ನಡೆದಿದ್ದು, ದಾದರ್ ಮತ್ತು ಅಮೃತಸರ ಎಕ್ಸ್‌ಪ್ರೆಸ್‌ನಲ್ಲಿ ವ್ಯಕ್ತಿಗೆ ಹಾವು ಕಚ್ಚಿದೆ.

30 ವರ್ಷದ ಭಗವಾನ್‌ದಾಸ್ ಎಂಬ ವ್ಯಕ್ತಿಗೆ ಹಾವು ಕಚ್ಚಿದ್ದು, ಈತ ಟಿಕಮ್‌ಘಡ್ ನಿವಾಸಿಯಾಗಿದ್ದಾನೆ. ಈತ ದೆಹಲಿಗೆ ಹೋಗಲು ತಯಾರಿ ನಡೆಸಿದ್ದು, ದೆಹಲಿ ರೈಲು ತಪ್ಪಿ ಹೋದ ಕಾರಣ, ಝಾನ್ಸಿಯ ರೈಲು ಹಿಡಿದು ನಡೆದಿದ್ದಾರೆ. ರೈಲಿನಲ್ಲಿ ಹೆಚ್ಚು ಜನರಿದ್ದ ಕಾರಣ, ಬಾಗಿಲ ಬಳಿ ನಿಂತು ಪ್ರಯಾಣಿಸಿದ್ದಾರೆ. ಈ ವೇಳೆ ಹಾವು ಕಚ್ಚಿದೆ.

ಈ ವ್ಯಕ್ತಿ ಝಾನ್ಸಿಯಿಂದ ಈ ರೈಲಿನಲ್ಲಿ ತನ್ನ ಮಗನೊಂದಿಗೆ ಪ್ರಯಾಣಿಸುತ್ತಿದ್ದ. ಈ ವೇಳೆ ಹಾವು ಕಚ್ಚಿದ್ದು, ಹಾವು ಎಲ್ಲಿ ತಮಗೂ ಕಚ್ಚುತ್ತದೆಯೋ, ಎಂದು ಹೆದರಿ ಅಲ್ಲಿದ್ದ ಪ್ರಯಾಣಿಕರು ದಿಕ್ಕಾಪಾಲಾಗಿ ನುಗ್ಗಿದ್ದಾರೆ. ಬಳಿಕ ಗ್ವಾಲಿಯರ್ ರೈಲ್ವೆ ಸ್ಟೇಶನ್‌ನಲ್ಲಿ ಇಳಿದು, ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಚಿಕಿತ್ಸೆ ಕೊಡಿಸಲಾಗಿದೆ.

- Advertisement -

Latest Posts

Don't Miss