Thursday, August 21, 2025

Latest Posts

ಸಿದ್ದುಗೆ ಆಘಾತ.. DK ‘ಕೈ’ಗೆ ಬಲ! : ಡಿಕೆಶಿ ಫುಲ್ ಸ್ಟ್ರಾಂಗ್ ಆಗ್ಬಿಟ್ರಾ?

- Advertisement -

ಕೆ.ಎನ್‌ ರಾಜಣ್ಣ ಅವರ ರಾಜೀನಾಮೆ ರಾಜ್ಯ ರಾಜಕೀಯದಲ್ಲಿ ಹೊಸ ಬಾಂಬ್‌ ಸಿಡಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ವಿರೋಧ ಪಕ್ಷದ ನಾಯಕ ಆರ್‌ ಅಶೋಕ್‌, ಕ್ರಾಂತಿಯಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಸಿದ್ದರಾಮಯ್ಯನವರ ಕಡೆಯ ಒಂದೊಂದೇ ವಿಕೆಟ್‌ಗಳು ಬೀಳ್ತಾ ಇವೆ. ಡಿ.ಕೆ ಶಿವಕುಮಾರ್ ಇನ್ನಷ್ಟು ಬಲಾಢ್ಯ ಆಗ್ತಿದ್ದಾರೆ. ಹಿಂದುಳಿದ ವರ್ಗಗಳ ವರದಿ ಏನಿತ್ತು ಅದನ್ನು ಡಿಕೆಶಿ ರದ್ದು ಮಾಡಿಸಿದ್ದರು. ಅಲ್ಲಿ ಸಿದ್ದರಾಮಯ್ಯಗೆ ಸೋಲು ಎದುರಾಗಿದೆ ಎಂದಿದ್ದಾರೆ.

ಪ್ರತಿದಿನ ಸಿದ್ದರಾಮಯ್ಯ ಪರ ಕೆ.ಎನ್. ರಾಜಣ್ಣ ಬ್ಯಾಟಿಂಗ್ ಮಾಡ್ತಾ ಇದ್ರು. ಧೈರ್ಯವಾಗಿ ಮಾತನಾಡುತ್ತಿದ್ದರು. ಈಗ ಸಿದ್ದರಾಮಯ್ಯ ಪರ ಇರುವಂತ ಕೇಂದ್ರ ರಾಜಣ್ಣ ಅವರನ್ನು ಕ್ಯಾಬಿನೆಟ್ ನಿಂದ ವಜಾ ಮಾಡುವುದಕ್ಕೆ ಕಾಂಗ್ರೆಸ್ ನಾಯಕರು ಹೇಳಿದ್ದಾರಂತೆ. ಯಾಕೆ, ರಾಹುಲ್ ಗಾಂಧಿ ಅವರು ದಿನನಿತ್ಯ ಅಂಬೇಡ್ಕರ್ ಸಂವಿಧಾನ ಕೈಯಲ್ಲಿ ಹಿಡ್ಕೊಂಡು ಓಡಾಡ್ತಿದ್ದಾರೆ. ನಾವು ರಕ್ಷಕರು ಅಂಬೇಡ್ಕರ್ ಪ್ರಜಾಪ್ರಭುತ್ವದ ರಕ್ಷಕರು ಅಂತ. ಎಲ್ಲಿ ಪ್ರಜಾಪ್ರಭುತ್ವ? ವೋಟ್ ಬೊಗಸಾಗಿದೆ ಚುನಾವಣಾ ಆಯೋಗ ಬೋಗಸ್ ಮಾಡಿದಂತ ರಾಹುಲ್ ಗಾಂಧಿ ಪ್ರತಿಭಟನೆ ಮಾಡಿದ್ರು.

ರಾಜಣ್ಣ ಏನ್ ಹೇಳಿದ್ರು, ಅವತ್ತು ಇದ್ದಿದ್ದು ನಮ್ಮ ಸರ್ಕಾರ, ನಮ್ಮ ಅಧಿಕಾರಿಗಳು. ಮಾಡಿದ್ರೆ ನಮ್ಮ ಅಧಿಕಾರಿಗಳು ತಪ್ ಮಾಡಿರ್ತಾರೆ ಅಂತ ಸತ್ಯ ಹೇಳಿದರು. ಈ ಸತ್ಯ ಹೇಳಿದ ತಕ್ಷಣ ಕಾಂಗ್ರೆಸ್ ನವರಿಗೆ ಉರಿ ಶುರುವಾಯಿತು. ಒಟ್ಟಿಗೆ ಹಸಿ ಮೆಣಸಿನಕಾಯಿ ಬಿದ್ದಂಗೆ ಹಾಗ್ಬಿಟ್ಟಿದೆ. ನಿನ್ನೆ ಅಷ್ಟೇ ಒಂದು ಲೆಟರ್ ಕೊಡಿಸಿದ್ದಾರೆ ಕಾಂಗ್ರೆಸ್ ಪಾರ್ಟಿಯಿಂದ, ಕೆಎನ್ ರಾಜಣ್ಣ ಅವರನ್ನು ಸಸ್ಪೆಂಡ್ ಮಾಡಿ ಅಂತ. ಕಾಂಗ್ರೆಸ್ ನಲ್ಲಿ ಪ್ರಜಾಪ್ರಭುತ್ವ ಇಲ್ಲ. ಡೆಮಾಕ್ರಸಿ ಇಲ್ಲ.

ಈ ವೋಟ್ ಕಳ್ತನನ್ನು ಸ್ಲೋಗನ್ ಮಾಡಿದ್ರು ಅದು ಟುಸ್ ಪಟಾಕಿ ಆಗೋಯ್ತು. ಅದರ ಬಗ್ಗೆ ರಾಜನ ಹೇಳಿದ್ಮೇಲೆ ಇನ್ನಷ್ಟು ಕನ್ಫರ್ಮ್ ಆಗೋಯ್ತು. ಅದಕ್ಕೆ ತಲೆದಂಡ. ಸತ್ಯ ಹೇಳಿದರೆ ಕಾಂಗ್ರೆಸ್ ನವರಿಗೆ ಆಗೋಲ್ಲ. ಅದಕ್ಕೆ ರಾಜಣ್ಣ ಅವರ ತಲೆ ತಂಡ ಹಾಗಿದೆ. ರಾಜಣ್ಣ ಅವರು ವಾಲ್ಮೀಕಿ ಜನಾಂಗದಿಂದ ಬಂದವರು. ಇಡಿ ಸಮುದಾಯಕ್ಕೆ ಕಾಂಗ್ರೆಸ್ ಪಾರ್ಟಿ ದ್ರೋಹ ಬಗೆದಿದೆ. ಕಾಂಗ್ರೆಸ್ ಪಾರ್ಟಿ ಅಕ್ಟೋಬನಲ್ಲಿ ಏನು ಪ್ರಳಯಾಗುತ್ತದೆ ಅದರ ಮುನ್ಸೂಚನೆ ಇದು. ಈಗಾಗಲೇ ಗಡ ಗಡ ಅಂತ ನಡಗಲು ಶುರುವಾಗಿದೆ ಸರ್ಕಾರ. ಈ ಸರ್ಕಾರ ತೊಲಗಲಿ ಅಂತ ಜನರು ಕಾಯ್ತಾ ಇದ್ದಾರೆ ಎಂದು ವಾಗ್ದಾಳಿ ಮಾಡಿದರು.

 

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

 

- Advertisement -

Latest Posts

Don't Miss