Dharwad News: ಧಾರವಾಡ : ಅನಾರೋಗ್ಯದಿಂದ ಬಿಎಸ್ಎಫ್ ಯೋಧರೊಬ್ಬರು ಧಾರವಾಡದ ಖಾಸಗಿ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದ ಮಂಜುನಾಥ ಕುಂದರಗಿ (33) ಎಂಬುವವರೇ ಸಾವಿಗೀಡಾದವರು. ಜುಲೈ 4 ರಂದು ಮಂಜುನಾಥ ಅವರು ರಜೆ ಮೇಲೆ ಊರಿಗೆ ಬಂದಿದ್ದರು.
ಓರಿಸ್ಸಾದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಂಜುನಾಥ, ರಜೆಗೆಂದು ಮನೆಗೆ ಬಂದಾಗ ಜ್ವರದಿಂದ ಬಳಲುತ್ತಿದ್ದರು. ಅವರನ್ನು ಸವದತ್ತಿಯ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ, ಅಲ್ಲಿ ಚಿಕಿತ್ಸೆಗೆ ಸ್ಪಂದಿಸದ ಕಾರಣ ಧಾರವಾಡದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇಂದು ಚಿಕಿತ್ಸೆಗೆ ಸ್ಪಂದಿಸದ ಯೋಧ ಮಂಜುನಾಥ ಇಂದು ಅಸುನೀಗಿದ್ದಾರೆ. ನಾಳೆ ಸಂಜೆ ಯೋಧನ ಅಂತ್ಯಕ್ರಿಯೆ ಹುಟ್ಟೂರಲ್ಲಿ ನೆರವೇರಲಿದೆ.
ಸಂಗಮೇಶ್ ಶೆಟ್ಟಿಗಾರ್, ಕಿತ್ತೂರು ಕರ್ನಾಟಕ ಬ್ಯೂರೋ ಮುಖ್ಯಸ್ಥರು




