Delhi News: ಸೈಬರ್ ವಂಚಕರ ಮಾತು ಕೇಳಿ ಶಾಲಾ ಶಿಕ್ಷಕಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ದೆಹಲಿಯ ಆಗ್ರಾದಲ್ಲಿ ನಡೆದಿದೆ.
ಆಗ್ರಾದಲ್ಲಿ ಮಾಲತಿ ಶರ್ಮಾ ಎಂಬ ಮಹಿಳೆ ಶಾಲಾ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಕೆಲ ಕಿಡಿಗೇಡಿಗಳು ಆಕೆಗೆ ಕಾಲ್ ಮಾಡಿ, ನಿಮ್ಮ ಮಗಳ ಲೈಂಗಿಕ ಹಗರಣದ ವೀಡಿಯೋ ನಮ್ಮ ಬಳಿ ಇದೆ. ನೀವು ದುಡ್ಡು ಕೊಡದಿದ್ದಲ್ಲಿ, ನಾವು ಆ ವೀಡಿಯೋವನ್ನು ರಿಲೀಸ್ ಮಾಡುತ್ತೇವೆ. ಸಾಮಾಜಿಕ ಜಾಲತಾಣದಲ್ಲಿ ಅದನ್ನು ಅಪ್ಲೋಡ್ ಮಾಡುತ್ತೇವೆ ಎಂದು ಹೆದರಿಸಿದ್ದಾರೆ.
ಈ ವೇಳೆಯೆ ಮಾಲತಿ ಶರ್ಮಾಗೆ ಹೃದಯದ ನೋವು ಸಂಭವಿಸಿದೆ. ಬಳಿಕ ಆಕೆಗೆ ಆದಷ್ಟು ಬೇಗ ಇಂತಿಷ್ಟು ಲಕ್ಷ ಕಳಿಸು ಎಂದು ದುಂಂಬಾಲು ಬಿದ್ದಿದ್ದಾರೆ. ಆಕೆ ಮಗನಿಗೆ ವಿಷಯ ತಿಳಿಸಿದಾಗ, ಆತ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿ, ದೂರು ದಾಖಲಿಸಿದ್ದಾರೆ. ಪೊಲೀಸರು ತನಿಖೆ ನಡೆಸಿದ ಬಳಿಕ, ಅದು ಸೈಬರ್ ಕ್ರೈಮ್ ವಂಚಕರ ಕೆಲಸವೆಂದು ತಿಳಿದಿದೆ. ಅಲ್ಲದೇ ಮಗಳ ಯಾವ ವೀಡಿಯೋವೂ ಅವರ ಬಳಿ ಇಲ್ಲ. ಅವೆಲ್ಲವೂ ಸುಳ್ಳು ಎಂದು ಗೊತ್ತಾಗಿದೆ.
ಆದರೂ ಮಾಲತಿ ಶರ್ಮಾರ ಹೃದಯದ ನೋವು ಹೆಚ್ಚಾಗಿ, ಶಾಲೆಯಿಂದ ಬರುವಾಗ, ಕುಸಿದು ಬಿದ್ದಿದ್ದಾರೆ. ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ, ಆಕೆ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ.