Friday, October 18, 2024

Latest Posts

ವಿದ್ಯಾರ್ಥಿಗೆ 1000 ಬಸ್ಕಿ ಹೊಡೆಯಲು ಹೇಳಿದ ಟೀಚರ್: ಖಾಯಂ ಆಗಿ ಕಾಲಿನ ಶಕ್ತಿ ಕಳೆದುಕೊಂಡ ಬಾಲಕ

- Advertisement -

China News: ವಿದ್ಯಾರ್ಥಿಗಳು ತಪ್ಪು ಮಾಡಿದಾಗ, ಶಾಲೆಯಲ್ಲಿ ಶಿಕ್ಷಕರು ಶಿಕ್ಷೆ ಕೊಡುವುದು ಸಾಮಾನ್ಯ. ಮಮತ್ತು ಮುಖ್ಯ. ಏಕೆಂದರೆ, ಮಕ್ಕಳು ತಮ್ಮ ತಪ್ಪನ್ನು ತಿದ್ದಿಕೊಂಡು, ಬುದ್ಧಿ ಕಲಿಯಬೇಕು ಅಂದ್ರೆ, ಅವರಿಗೆ ಶಿಕ್ಷೆ ಕೊಡುವುದು ಕೂಡ ಅಷ್ಟೇ ಮುಖ್ಯವಾಗಿರುತ್ತದೆ. ಆದರೆ ಆ ಶಿಕ್ಷೆ ಮಕ್ಕಳ ಪ್ರಾಣ ತೆಗೆಯುವಂತೆಯೋ, ಅಥವಾ ಅವರ ಆರೋಗ್ಯವನ್ನು ಹಾಳು ಮಾಡುವಂತೆಯೋ, ಅಥವಾ ಅವರ ಭವಿಷ್ಯವನ್ನೇ ಹಾಳು ಮಾಡುವಂತೆಯೋ ಇರಬಾರದು.

ಆದ್ರೆ ವಿದ್ಯಾರ್ಥಿ ಮಾಡಿದ ತಪ್ಪಿಗೆ ಶಿಕ್ಷಕನೋರ್ವ ಸಾವಿರ ಬಸ್ಕಿ ಹೊಡೆಯುವ ಶಿಕ್ಷೆ ನೀಡಿದ್ದು, ಆ ಬಾಲಕ ಕಾಲಿನ ಸ್ವಾಧೀನವನ್ನೇ ಕಳೆದುಕೊಂಡು, ಆಸ್ಪತ್ರೆಗೆ ದಾಖಲಾಗಿದ್ದಾನೆ. ಈ ಘಟನೆ ಚೀನಾದಲ್ಲಿ ನಡೆದಿದ್ದು, 13 ವರ್ಷದ ಬಾಲಕ ಕಾಲಿನ ಶಕ್ತಿ ಕಳೆದುಕೊಂಡಿದ್ದಾನೆ.

ಈ ಬಾಲಕ ಅದೇನು ತಪ್ಪು ಮಾಡಿದ್ದನೋ ಗೊತ್ತಿಲ್ಲ. ಅವನಿಗೆ ಶಿಕ್ಷಕ ಸಾವಿರ ಬಸ್ಕಿ ಹೊಡೆಯುವಂತೆ ಹೇಳಿದ್ದಾರೆ. ಅದೇ ರೀತಿ ವಿದ್ಯಾರ್ಥಿ ಕೂಡ ಸಾವಿರ ಬಸ್ಕಿ ಹೊಡೆದಿದ್ದಾನೆ. ಬಳಿಕ ಕಾಲು ನೋವಿನಿಂದ ಒದ್ದಾಡಿದ್ದಾನೆ.  ಮನೆಗೆ ಹೋದ ಬಳಿಕ, ತಂದೆ ತಾಯಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ವೈದ್ಯರು ಮಾಮೂಲಿ ಕಾಲು ನೋವು, ಸ್ನಾಯು ನೋವೆಂದು ಔಷಧಿ ನೀಡಿದ್ದಾರೆ.

ಆದರೆ ಸರಿಯಾಗಿ ಸ್ಕ್ಯಾನಿಂಗ್ ಎಲ್ಲ ಮಾಡಿ, ಚಿಕಿತ್ಸೆ ಮಾಡಿದಾಗ, ಆತನಿಗೆ ಸಾವಿರ ಬಸ್ಕಿ ಹೊಡೆದು, ಪರಿಹಾರವಾಗದೇ ಇರುವ ರೋಗ ಶುರುವಾಗಿದೆ ಎಂದು ಗೊತ್ತಾಗಿದೆ. ಹಾಗಾಗಿ ಆ ವಿದ್ಯಾರ್ಥಿ ಇನ್ನು ಜೀವನದಲ್ಲಿ ಎಂದಿಗೂ ತನ್ನ ಕಾಲಿನ ಮೇಲೆ ತಾನು ನಿಲ್ಲಲಾಗುವುದಿಲ್ಲ. ಆತನ ಕಾಲಿನಲ್ಲಿದ್ದ ಸಂಪೂರ್ಣ ಶಕ್ತಿ ನಾಶವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ವಿದ್ಯಾರ್ಥಿಯ ಪೋಷಕರು, ಶಿಕ್ಷಕನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

- Advertisement -

Latest Posts

Don't Miss