ರಾಯರ ಮಠದಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ

www.karnatakatv.net : ರಾಯಚೂರು : ಮಂತ್ರಾಲಯದ ರಾಯರ ಮಠದಲ್ಲಿ ಮಹಿಳೆಯೋರ್ವಳು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಿನ್ನೆ ರಾತ್ರಿ ಬೆಳಕಿಗೆ ಬಂದಿದೆ . ಶಿವಮೊಗ್ಗ ದಿಂದ ಮಂತ್ರಾಲಯಕ್ಕೆ  ರಾಘವೇಂದ್ರ ಸ್ವಾಮಿಗಳ ದರ್ಶನಕ್ಕೆ ಆಗಮಿಸಿದ್ದ ಮಹಿಳೆ  ಮಠದಲ್ಲಿ ನಿದ್ರಾ ಮಾತ್ರೆ ತೆಗೆದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಳೆ. ಆದರೆ ಕಾರಣ ತಿಳಿದು ಬಂದಿಲ್ಲ.

ಪ್ರಜ್ಞೆ ತಪ್ಪಿ ಬಿದ್ದ ಮಹಿಳೆಯನ್ನು ಸೆಕ್ಯೂರಿಟಿ ಗಾರ್ಡ್ ರಕ್ಷಣೆ ಮಾಡಿ ಎಮ್ಮಿಗೆನೂರು ಗ್ರಾಮದ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಿದ್ದಾರೆ . ಆ ಮಹಿಳೆಗೆ ಆರೋಗ್ಯ  ಗಂಭೀರ ಪರಿಸ್ಥಿತಿಯಲ್ಲಿಇದೆ ಎಂದು ತಿಳಿದು ಬಂದಿದೆ.

About The Author