Saturday, April 19, 2025

Latest Posts

ಮಹದಾಯಿ ಬೇಡಿಕೆ ಈಡೇರಿಸಿ ಎಂದು ರಕ್ತದಲ್ಲಿ ಪತ್ರ ಬರೆದ ಯುವ ರೈತ

- Advertisement -

Dharwad News: ಧಾರವಾಡ: ಮಹಾದಾಯಿ ಹೋರಾಟ ಹಲವು ವರ್ಷಗಳಿಂದ ನಡೆಯುತ್ತಿದ್ದರೂ, ಇದುವರೆಗೆ ಆ ಹೋರಾಟಕ್ಕೆ ನ್ಯಾಯ ದೊರಕಿಲ್ಲ. ಹಾಾಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಧಾರವಾಡ ಜಿಲ್ಲೆ ನವಲಗುಂದದ ರೈತನೋರ್ವ ರಕ್ತದಲ್ಲಿ ಪತ್ರ ಬರೆದಿದ್ದಾರೆ.

ಯುವರೈತ ಮೈಲಾರಪ್ಪ ವೈದ್ಯ ಎಂಬ ರೈತ ಹುತಾತ್ಮ ದಿನಾಚರಣೆ ವೇದಿಕೆಯಲ್ಲಿ ರಕ್ತದಲ್ಲಿ ಪತ್ರ ಬರೆದಿದ್ದಾರೆ. ಇನ್ನು ಇವರು ಇದೇ ಮೊದಲು ರಕ್ತದಲ್ಲಿ ಪತ್ರ ಬರೆದವರಲ್ಲ, ಬದಲಾಗಿ ಕಳೆದ ಮೂರು ವರ್ಷಗಳಿಂದ ರಕ್ತದಲ್ಲಿ ಪತ್ರ ಬರೆಯುತ್ತಿದ್ದಾರೆ. ಮಹಾದಾಯಿ ಬೇಡಿಕೆ ಈಡೇರಿಸುವಂತೆ ಇವರು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಪತ್ರ ಬರೆಯುತ್ತಿದ್ದಾರೆ.

ಈ ಬಳಿಕ ಮಾತನಾಡಿರುವ ಮೈಲಾರಪ್ಪ, ಪ್ರತಿ ವರ್ಷ ನಾನು ಪತ್ರ ಬರೆಯುವೆ. ರಕ್ತದ ಪತ್ರ ರವಾನೆಸಿದಾಗ ಸ್ವೀಕೃತಿಯಾದ ಪ್ರತಿಕ್ರಿಯೆ ಮಾತ್ರ ಬರುತ್ತದೆ. ಆದರೆ ಬೇಡಿಕೆ ಮಾತ್ರ ಈಡೇರುತ್ತಿಲ್ಲ. ಮಹದಾಯಿಗಾಗಿ ನಮ್ಮ ರೈತರ ಹೋರಾಟ ನಿರಂತವಾಗಿ ನಡೆದಿದೆ. ಆದರೂ ಸರ್ಕಾರಗಳು ಸ್ಪಂದಿಸುತ್ತಿಲ್ಲ. ಬೇಡಿಕೆ ಈಡೇರುವವರೆಗೂ ನಮ್ಮ ಹೋರಾಟ ನಿಲ್ಲದು. ಪ್ರತಿ ರೈತ ಹುತಾತ್ಮ ದಿನದಂದು ನಾನು ರಕ್ತದಲ್ಲಿ ಪತ್ರ ಬರೆಯುವೆ. ಮಹದಾಯಿ ನೀರು ಬಂದ ವರ್ಷದಿಂದ ರಕ್ತದ ಪತ್ರ ನಿಲ್ಲಿಸುವೆ ಎಂದಿದ್ದಾರೆ.

- Advertisement -

Latest Posts

Don't Miss