- Advertisement -
Hubli News: ಹುಬ್ಬಳ್ಳಿ: ಚಲಿಸುತ್ತಿದ್ದ ಬೈಕ್‌ನ ಟೈರ್ ಸ್ಫೋಟಗೊಂಡ ಪರಿಣಾಮ ಕೆಲಸಕ್ಕೆ ಹೋಗುತ್ತಿದ್ದ ಯುವಕ ಸ್ಥಳದಲ್ಲೇ ಸಾವಿಗೀಡಾದ ದುರ್ಘಟನೆ ಶನಿವಾರ ರಾತ್ರಿ ಗದಗ ಹುಬ್ಬಳ್ಳಿ ರಸ್ತೆಯ ಬಂಡಿವಾಡ ಬ್ರಿಡ್ಜ್ ಬಳಿಯಲ್ಲಿ ನಡೆದಿದೆ.
ಕೋಳಿವಾಡ ಗ್ರಾಮದ 30 ವರ್ಷದ ಪ್ರವೀಣ ಜಂತೆ ಎಂಬಾತ ಹುಬ್ಬಳ್ಳಿಯ ರಾಜ್ ನಗರದಲ್ಲಿನ ಎಟಿಎಂನಲ್ಲಿ ನೈಟ್ ಶಿಫ್ಟ್ ಸೆಕ್ಯೂರಿಟಿಯಾಗಿ ಕೆಲಸ ಮಾಡುತ್ತಿದ್ದ. ಅದೇ ರೀತಿ ಶನಿವಾರ ರಾತ್ರಿ 9 ಗಂಟೆಯ ಸುಮಾರಿಗೆ ಮನೆಯಲ್ಲಿ ಊಟವನ್ನು ಮಾಡಿ ಕೆಲಸಕ್ಕೆಂದು ಹುಬ್ಬಳ್ಳಿಯತ್ತ ಹೊರಟಾಗ ಬಂಡಿವಾಡ ಬ್ರಿಡ್ಜ್ ಬಳಿ ದುರ್ಘಟನೆ ಸಂಭವಿಸಿ ಮೃತಪಟ್ಟಿದ್ದಾನೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹುಬ್ಬಳ್ಳಿಯ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ ಶವವನ್ನು ಕಿಮ್ಸ್ ಶವಾಗಾರಕ್ಕೆ ರವಾನೆ ಮಾಡಿದ್ದಾರೆ. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲಾಗಿದೆ.
- Advertisement -