ಭಯವಿಲ್ಲದೇ ರಿವಾಲ್ವರ್ ಬಳಸುವ ರೀತಿ ಹೇಳುವ ರೀಲ್ಸ್ ಮಾಡಲು ಹೋಗಿ ಸಾವನ್ನಪ್ಪಿದ ಯುವಕ

Delhi News: ರೀಲ್ಸ್ ಮಾಡಲು ಹೋಗಿ ಸಾವನ್ನಪ್ಪಿದ ಕೇಸ್‌ಗಳು ಬಹಳ ಇದೆ. ಆದರೆ ಇಲ್ಲೋರ್ವ ಯುವಕ ರಿವಾಲ್ವರ್ ಅನ್ನು ಬಳಸುವ ರೀತಿ ಹೇಳಲು ಹೋಗಿ, ಎದೆಗೆ ಗುಂಡು ತಾಗಿ, ಸಾವನ್ನಪ್ಪಿದ್ದಾನೆ.

ದೆಹಲಿಯ ದಲ್ಲುಪುರದಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ನಿವಾಸಿ ಪವನ್ ರೀಲ್ಸ್ ಮಾಡಿ, ಪ್ರಾಣಬಿಟ್ಟ ಯುವಕ. ಈತ ತನ್ನ ಗೆಳೆಯನ ಬಳಿ ವೀಡಿಯೋ ರೆಕಾರ್ಡ್ ಮಾಡಲು ಹೇಳಿದ್ದು, ಹೆದರಿಯೇ ಈತನ ಗೆಳೆಯ ರೆಕಾರ್ಡ್ ಮಾಡಲು ಓಕೆ ಎಂದಿದ್ದಾನೆ.

ಪವನ್ ಗನ್‌ಗೆ ಬುಲೆಟ್ ಲೋಡ್ ಮಾಡಿದ್ದಾನೆ. ತನಗೆ ಭಯವಿಲ್ಲದೇ ರಿವಾಲ್ವರ್ ಹ್ಯಾಂಡಲ್ ಮಾಡೋದು ತಿಳಿದಿದೆ ಎಂದು ನಗು ನಗುತ್ತಲೇ, ಎದೆಗೆ ಗನ್ ಇರಿಸಿದ್ದಾನೆ. ಎಲ್ಲ ಎಕ್ಸ್‌ಪ್ಲೇನ್ ಮಾಡಿಯಾದ ಬಳಿಕ, ವೀಡಿಯೋ ಮಾಡುತ್ತಿದ್ದ ಗೆಳೆಯ, ತಮಾಷೆ ಮಾಡಬೇಡ, ಗನ್ ಪ್ರೆಸ್ ಆದರೆ ಕಷ್ಟವೆಂದು ಗೆಳೆಯ ಹೇಳಿದ್ದಾನೆ.

ಆದರೆ ಗೆಳೆಯನ ಬಳಿ, ಹಾಗೇನಾಗುವುದಿಲ್ಲವೆಂದು ಹೇಳುವಾಗಲೇ ರಿವಾಲ್ವರ್‌ನಿಂದ ಗುಂಡು ಹಾರಿ, ಪವನ್ ಎದೆ ಸೀಳಿದೆ. ಈ ಎಲ್ಲ ಘಟನೆ ವೀಡಿಯೋದಲ್ಲಿ ರೆಕಾರ್ಡ್ ಆಗಿದೆ. ತಕ್ಷಣ ಪವನ್‌ನನ್ನು ಆಸ್ಪತ್ರೆಗೆ ಸೇರಿಸಿದರೂ, ಆದಾಗಲೇ ಪವನ್ ಮೃತಪಟ್ಟಿದ್ದ.

ಇನ್ನು ನಿಜವಾಗ್ಲೂ ಗನ್ ಮಿಸ್‌ಫೈರ್ ಆದ್ದಾ ಅಥವಾ ಪವನ್ ಬೇಕಂತಲೇ ಗನ್ ಫೈರ್ ಮಾಡಿ, ಆತ್ಮಹತ್ಯೆ ಮಾಡಿಕ“ಂಡಿದ್ದಾನಾ ಅಂತಾ ಪೋಲೀಸರ ತನಿಖೆಯಿಂದ ತಿಳಿಯಬೇಕಿದೆ.

About The Author