ಚಿತ್ರದುರ್ಗ: ಸರ್ಕಾರದ ಅನ್ನಭಾಗ್ಯ. ಗೃಹಲಕ್ಷ್ಮಿ .ಗೃಹಜೋತಿ .ಮುಂತಾದ ಯೋಜನೆಗಳಿಗೆ ಆಧಾರ್ ನೋಂದಣಿ ಬಹು ಮುಖ್ಯವಾದ ಕಾರಣ ನಾಡಕಛೇರಿ ಮುಂಬಾಗದಲ್ಲಿ ಸರದಿ ಸಾಲಿನಲ್ಲಿ ಗರ್ಭಿಣಿಯರು ಮಕ್ಕಳು ವೃದ್ಧರು ಪರದಾಡುತ್ತಿರುವ ದೃಶ್ಯ ಇಂದು ಕಂಡುಬಂದಿತು. ನಾಡ ಕಚೇರಿಯ ಸಿಬ್ಬಂದಿ ಟೋಕನ್ ವ್ಯವಸ್ಥೆ ಮಾಡಿದ್ದರೂ ಕೂಡ ಈ ಸಮಸ್ಯೆ ಬಗೆಹರಿಯುತ್ತಿಲ್ಲ. ಜನ ಗೊಂದಲಕ್ಕೆ ಬಿದ್ದು ಆತುರದಲ್ಲಿ ನಾಡಕಚೇರಿಗೆ ಬರುತ್ತಿದ್ದಾರೆ.
ಶಕುಂತಲಾ ಉಪತಾಶಿಲ್ದಾರ್ ನಾಡಕಚೇರಿ ನಾಯಕನಹಟ್ಟಿ ರವರು ತಿಳಿಸಿದಂತೆ .ಆಧಾರ್ ನೊಂದಣ ಮಾಡಿಸಲು ಮುಗಿ ಬೀಳುತ್ತಿರುವ ಕಾರಣ ಈ ಸಮಸ್ಯೆಯಾಗಿದೆ. ಟೋಕನ್ ವ್ಯವಸ್ಥೆ ಮಾಡಿ ಸಮಯ ನಿಗದಿಪಡಿಸಿದ್ದರು ಕೂಡ ಜನರು ಸ್ಪಂದಿಸದಿರುವುದು ನಾವುಗಳು ಕೂಡ ವೃದ್ಧರಿಗೆ ಗರ್ಭಿಣಿಯರಿಗೆ ಮಕ್ಕಳಿಗೆ ಅತಿ ವೇಗವಾಗಿ ನಾವೇ ಖುದ್ದಾಗಿ ನಿಂತಿದ್ದು ಮಾಡಿಸಿ ಕೊಡುತ್ತಿದ್ದೇನೆ ಈ ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸುತ್ತೇವೆ ಎಂಬ ತಿಳಿಸಿದರು
ಜನಸಮಾನ್ಯರಾದ ಸಂದೀಪ್ ಅವರು ಮಾತನಾಡಿ ಸರ್ಕಾರ ವಿವಿಧ ಯೋಜನೆಗಳಿಗೆ ಆಧಾರ್ ನೊಂದಣಿ ಮಾಡದಿದ್ದರೆ ಯಾವುದೇ ಕೆಲಸಗಳಾಗುತ್ತಿಲ್ಲ ಆದಕಾರಣ ಕಾಯುವ ಸ್ಥಿತಿ ನಮ್ಮದಾಗಿದೆ ಎಂದು ತಿಳಿಸಿದರು.
Loan & Interest : ಹುಬ್ಬಳ್ಳಿಯಲ್ಲಿ ಮೀಟರ್ ಬಡ್ಡಿ ದಂಧೆಕೋರರ ಹಾವಳಿ: