Friday, March 14, 2025

Latest Posts

ನಾರ್ತ್ ಸ್ಟೈಲ್ ಬೋಂಡಾ ರೆಸಿಪಿ

- Advertisement -

ಇವತ್ತು ನಾವು ನಾರ್ತ್ ಸ್ಟೈಲ್ ಬೋಂಡಾ ಮಾಡೋದು ಹೇಗೆ ಅನ್ನೋದನ್ನ ನೋಡೋಣ ಬನ್ನಿ. ಬೋಂಡ ತಯಾರಿಸಲು ಬೇಕಾಗುವ ಸಾಮಗ್ರಿಯನ್ನ ನೋಟ್ ಮಾಡಿಕೊಳ್ಳಿ.

3ರಿಂದ 4 ಬೇಯಿಸಿ ಸಿಪ್ಪೆ ತೆಗೆದ ಆಲೂಗಡ್ಡೆ, 2ರಿಂದ 3 ಸ್ಪೂನ್ ಎಣ್ಣೆ, ಒಂದು ಸ್ಪೂನ್ ಜೀರಿಗೆ, ಚಿಟಿಕೆ ಸೋಂಪು, 4ರಿಂದ 5 ಎಸಳು ಕರಿಬೇವು, ಒಂದು ಸಣ್ಣಗೆ ಕತ್ತರಿಸಿದ ಈರುಳ್ಳಿ, ಕೊಂಚ ಅರಿಷಿನ, ಕೊಂಚ ಗರಂ ಮಸಾಲೆ, ಚಿಟಿಕೆ ಇಂಗು, ಅರ್ಧ ಚಮಚ ಮೆಣಸಿನ ಪುಡಿ, ಅರ್ಧ ಕಪ್ ಕಡಲೆ ಹಿಟ್ಟು, ಎರಡು ಸ್ಪೂನ್ ಅಕ್ಕಿ ಹಿಟ್ಟು.

ಬೋಂಡಾ ಹೂರಣಕ್ಕೆ ಹಾಕಲು ಒಂದು ಸ್ಪೂನ್ ಮಸಾಲೆ ತಯಾರಿಸಿಕೊಳ್ಳಬೇಕು. ಈ ಮಸಾಲೆಗೆ ಒಂದು ಸ್ಪೂನ್ ಜೀರಿಗೆ, 5ರಿಂದ 6 ಎಸಳು ಬೆಳ್ಳುಳ್ಳಿ, ಒಂದರಿಂದ ಎರಡು ಹಸಿ ಮೆಣಸಿನಕಾಯಿ, ಒಂದು ಸ್ಪೂನ್ ಸೋಂಪು ಬೇಕು. ಇದನ್ನೆಲ್ಲ ಮಿಕ್ಸಿ ಮಾಡಿದ್ರೆ ಬೋಂಡಾ ಹೂರಣಕ್ಕೆ ಬೇಕಾಗುವ ಮಸಾಲೆ ರೆಡಿ.

ಒಂದು ಪಾತ್ರೆಗೆ ಅರ್ಧ ಕಪ್ ನೀರು ಮತ್ತು ಚಿಟಿಕೆ ಉಪ್ಪು ಹಾಕಿ ಕರಗಿಸಿ. ನಂತರ ಜರಡಿ ಮಾಡಿದ ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಖಾರದ ಪುಡಿ, ಜೀರಿಗೆ, ಹಿಂಗು, ಅರ್ಧ ಸ್ಪೂನ್ ಎಣ್ಣೆ ಹಾಕಿ ಹಿಟ್ಟು ಕಲೆಸಿ. ಈಗ ದೋಸೆ ಹಿಟ್ಟಿಗಿಂತ ಕೊಂಚ ತೆಳ್ಳಗಿರುವ ಬ್ಯಾಟರ್ ರೆಡಿ ಮಾಡಿ ಪಕ್ಕಕ್ಕಿರಿಸಿ.

ಬೋಂಡಾ ಹೂರಣ ಮಾಡಿಕೊಳ್ಳಲು ಗ್ಯಾಸ್ ಆನ್ ಮಾಡಿ, ಪ್ಯಾನ್ ಇಟ್ಟು ಅದಕ್ಕೆ 2ರಿಂದ 3 ಟೇಬಲ್ ಸ್ಪೂನ್ ಎಣ್ಣೆ, ಚಿಟಿಕೆ ಜೀರಿಗೆ, ಚಿಟಿಕೆ ಸೋಂಪು, 4ರಿಂದ 5 ಎಸಳು ಕರೀಬೇವು ಹಾಕಿ ಹುರಿಯಿರಿ.

ಇದಕ್ಕೆ ಈರುಳ್ಳಿ ಹಾಕಿ 2ನಿಮಿಷ ಬಾಡಿಸಿ, ಬೋಂಡಾಗಾಗಿ ತಯಾರಿಸಿದ ಮಸಾಲೆ, ಚಿಟಿಕೆ ಉಪ್ಪು, ಚಿಟಿಕೆ ಅರಿಷಿನ, ಚಿಟಿಕೆ ಗರಂ ಮಸಾಲೆ ಸೇರಿಸಿ ಹುರಿಯಿರಿ. ನಿಮಗೆ ಖಾರ ಹೆಚ್ಚು ಬೇಕಾದ್ದಲ್ಲಿ ಬೋಂಡಾ ಮಸಾಲೆಯನ್ನು ಹೆಚ್ಚು ಸೇರಿಸಿ ಅಥವಾ ಖಾರದ ಪುಡಿ- ಗರಂ ಮಸಾಲೆ ಮಿಶ್ರಣವನ್ನ ಹೆಚ್ಚು ಉಪಯೋಗಿಸಿ.

https://youtu.be/vUG1SKf7U9U

ಈಗ ಬೇಯಿಸಿಟ್ಟುಕೊಂಡ ಆಲುವನ್ನ ಮ್ಯಾಶ್ ಮಾಡಿ ಪಲ್ಯಕ್ಕೆ ಬಳಸಿ. ಮ್ಯಾಶ್ ಮಾಡಿದ ಆಲೂ ಮಿಕ್ಸ್ ಮಾಡುವಾಗ ಬೇಕಾದಲ್ಲಿ ಕೊಂಚ ನೀರು, ಎಣ್ಣೆ ಸೇರಿಸಬಹುದು. ಕೊನೆಯದಾಗಿ ಸಣ್ಣಗೆ ಕತ್ತರಿಸಿದ ಕೊತ್ತೋಂಬರಿ ಸೊಪ್ಪು ಸೇರಿಸಿ ಮಿಕ್ಸ್ ಮಾಡಿ, 2 ನಿಮಿಷ ಪ್ಯಾನ್‌ನಲ್ಲಿರಿಸಿ, ಗ್ಯಾಸ್ ಆಫ್ ಮಾಡಿ ಆರಲು ಬಿಡಿ.
10 ನಿಮಿಷದ ಬಳಿಕ ಪಲ್ಯದ ಮಿಶ್ರಣದಿಂದ ಚಿಕ್ಕ ಚಿಕ್ಕ ಉಂಡೆ ತಯಾರಿಸಿಕೊಳ್ಳಿ.

ಎಣ್ಣೆ ಕಾಯಲು ಇರಿಸಿ, ಪಲ್ಯದ ಉಂಡೆಯನ್ನ ಬ್ಯಾಟರ್‌ನಲ್ಲಿ ಅದ್ದಿ ಕಾದ ಎಣ್ಣೆಯಲ್ಲಿ ಕರೆಯಿರಿ. ಮಂದ ಉರಿಯಲ್ಲಿ ಬೋಂಡಾ ಕರೆದರೆ ರುಚಿ ಉತ್ತಮವಾಗಿರುತ್ತೆ. ರೆಡಿಯಾದ ಬೋಂಡಾವನ್ನ ಸಾಸ್ ಜೊತೆ ಸರ್ವ್ ಮಾಡಿ.

ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

- Advertisement -

Latest Posts

Don't Miss