Tuesday, January 14, 2025

Latest Posts

ನಾಳೆ ಆಮ್ ಆದ್ಮಿ ಪಕ್ಷದ ಸಮಾವೇಶ ಸಭೆ

- Advertisement -

state news

ಬೆಂಗಳೂರು(ಮಾ.3): ಎಲೆಕ್ಷನ್ ಹತ್ತಿರ ಬರ್ತಾ ಇರೋ ಹಿನ್ನಲೆ ಆಮ್‌ ಆದ್ಮಿ ಪಕ್ಷವೂ ತನ್ನ ನಾಯಕರಿಗೆ ಬೂಸ್ಟ್ ಮಾಡುತ್ತಿದೆ. ಪಕ್ಷ ಅಧಿಕಾರಕ್ಕೆ ಬರಬೇಕು ಎಂಬ ನಿಟ್ಟನಲ್ಲಿ ಅಂತಿಮ ಸಮಾವೇಶವನ್ನು ನಡೆಸಲು ಸಿದ್ದತೆ ನಡೆಸುತ್ತಿದೆ, ಹೀಗಾಗಿ ನಾಳೆ ಸಮಾವೇಶ ನಡೆಸುತ್ತಿದೆ.

ಈ ಸಮಾವೇಶವು ನಗರದ ಹೈಸ್ಕೂಲ್‌ ಮೈದಾನದಲ್ಲಿ ಹಮ್ಮಿಕೊಂಡಿದ್ದು, ಸಮಾವೇಶದ ಅಂತಿಮ ಸಿದ್ಧತೆ ಕಾರ್ಯಗಳು ಭರದಿಂದ ಸಾಗಿವೆ.

ಸಮಾವೇಶಕ್ಕೆ ಸುಮಾರು 40 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. 15-20 ಸಾವಿರ ಮಂದಿ ಪದಾಧಿಕಾರಿಗಳೇ ಆಗಮಿಸುವರು. ಸಮಾವೇಶದಲ್ಲಿ ಪಕ್ಷದ ರಾಜ್ಯ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧನೆ ಜೊತೆಗೆ ಬಹಿರಂಗ ಸಭೆ ನಡೆಯಲಿದ್ದು, ಪಕ್ಷದ ರಾಜ್ಯ ಕಾರ್ಯದರ್ಶಿ ಸಂಚಿತ್‌ ಸಹನಿ, ಜಿಲ್ಲಾಧ್ಯಕ್ಷ ಚಂದ್ರು ಬಸವಂತಪ್ಪ ಸೇರಿ ಅನೇಕ ಮುಖಂಡರು ಭಾಗವಹಿಸಲಿದ್ದಾರೆ. ಚಳವಳಿ, ಹೋರಾಟ, ರಾಜಕೀಯ ಪಕ್ಷಗಳು, ನಾಯಕರಿಗೆ ದಾವಣಗೆರೆ ಅದೃಷ್ಟದ ನೆಲ. ಈ ಕಾರಣಕ್ಕೆ ನಮ್ಮ ಮನವಿ ಮೇರೆಗೆ ಕೇಜ್ರಿವಾಲ್‌ ಇಲ್ಲಿಂದನೇ ನಮ್ಮ ಪಕ್ಷದ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡುವರು ಎಂದು ಎಎಪಿ ನಾಯಕರು ತಿಳಿಸಿದರು.

 

ದಾವಣಗೆರೆ ಶಾಸಕನಿಗೆ ಪುತ್ರನಿಂದ ಕಂಟಕ. ಲೋಕಾಯುಕ್ತ ಬಲೆಗೆ ಶಾಸಕನ ಪುತ್ರ. ಲಂಚ ತೆಗೆದುಕೊಳ್ಳುವಾಗ ಸೆರೆ

- Advertisement -

Latest Posts

Don't Miss