Political news
ಆಡಳಿತ ಸರ್ಕಾರದಿಂದ ಜನರಿಗೆ ಹಲವಾರು ರೀತಿಯಲ್ಲಿ ಅನ್ಯಾಯ ಆಗುತ್ತಿದೆ . ಪ್ರತಿಯೊಂದು ಯೋಜನೆಯನ್ನು ಕಮಿಷನ್ ಕೊಟ್ಟು ಪಡೆದುಕೊಳ್ಳುವ ಪರಿಸ್ಥಿತಿ ಎದುರಾಗಿದೆ .ಇಂತದರೊಳಗೆ ಯಾವುದಾದರೂ ಕಾಮಗಾರಿಯನ್ನು ಗುತ್ತಿಗೆ ಪಡೆದುಕೊಳ್ಳಭೇಕಾದರೆ ,ಶೇಕಡಾ 40 ರಷ್ಟು ಹಣವನ್ನು ಸಂಬಂಧ ಪಟ್ಟ ಸಚಿವರಿಗೆ ಮತ್ತು ಅಧಿಕಾರಿಗಳಿಗೆ ಕಮಿಷನ್ ಕೊಡಲೇಬೇಕು. ಗುತ್ತಿಗೆದಾರರ ಸಂಘದ ಕೆಂಪಣ್ಣ ಬಿಜೆಪಿ ಶಾಸಕರ ಮೇಲೆ ಕಮೀಷನ್ ಆರೋಪವನ್ನ ಹೊರಿಸಿದ್ದಾರೆ . ೯೦ಲಕ್ಷ ಕಮೀಷನ್ ಆರೋಪ ತಿಪ್ಪಾರೆಡ್ಡಿ ಅವರ ಮೇಲಿದೆ .
ಆಮ್ ಆದ್ಮಿಪಕ್ಷದ ಬ್ರಿಜೇಶ್ ಕಾಳಪ್ಪ್ ಸುದ್ದಿಗೋಷ್ಠಿ
ಲಂಚ ಕೊಟ್ಟು ಕಾಮಗಾರಿ ಪಡೆದುಕೊಂಡು ಕೆಲಸ ಪೂರ್ಣಗೊಳಿಸಿದ್ದರೂ ಕಂತುಗಳು ಸರಿಯಾಗಿ ಪಾವತಿ ಮಾಡುವುದಿಲ್ಲ. ಇದಕ್ಕೆ ಸಂಬಂಧಿಸಿದಂತೆ ಕಾಮಗಾರಿ ಕುರಿತು ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಹಲವು ಸಲ ಪ್ರಧಾನ ಮಂತ್ರಿಗಳಿಗೆ ಪತ್ರದ ಮೂಲಕ ಮನವಿ ಮಾಡಿಕೊಂಡರೂ, ಅವರು ಯೂವುದೆ ರೀತಿಯಾಗಿ ಕ್ರಮ ಕೈಗೊಳ್ಳದೆ ಬೇಜವಾಬ್ದಾರಿತನದಿಂದ ವರ್ತಿಸುತಿದ್ದಾರೆ. ಮೌನಿ ಬಾಬನ ರೀತಿ ಮೌನ ತಳೆದಿದ್ದಾರೆ ಎಂದು ಆಫ್ ಪಕ್ಷ ಬ್ರಿಜೇಶ್ ಕಾಳಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಚುನಾವಣಾ ಪ್ರಚಾರದಲ್ಲಿ ದೇಹದಲ್ಲಿ ಮಾಡೆಲ್ ಅನುಸರಿಸುತ್ತಿರುವ ನಮ್ಮ ರಾಜ್ಯದಲ್ಲಿ ಪಕ್ಷಗಳು
ಈಗಾಗಲೇ ವಿಧಾನಸಭೆ ಚುನಾವಣೆಗೆ ಭರದಿಂದ ಪ್ರಚಾರ ಕಾರ್ಯದಲ್ಲಿ ತೊಡಗಿರುವ ಎಲ್ಲಾ ಪಕ್ಷಗಳು ವಿವಿಧ ಯೋಜನೆಗಳನ್ನು ಪ್ರಣಾಳಿಕೆಯಲ್ಲಿ ನಮೂದಿಸಿ ಜನರಿಗೆ ಭರವಸೆ ನೀಡುವ ಮೂಲಕ ಅವರಿಗೆ ಹತ್ತಿರವಾಗುತ್ತಿದ್ದಾರೆ. ಆದರೆ ಆಫ್ ಪಕ್ಷ ದೆಹಲಿಯಲ್ಲಿ ಮಾಡಿರುವ ಯೋಜನೆಗಳನ್ನು ಕಾಪಿ ಮಾಡುತ್ತಿವೆ ಎಲ್ಲಾ ಪಕ್ಷಗಳು . ನಮ್ಮ ಸರ್ಕಾರ ದೆಹಲಿಯಲ್ಲಿ ಉಚಿತ ವಿದ್ಯುತ್ ನೀಡುತ್ತಿದ್ದಾರೆ. ಅದೇ ಮಾದರಿಯಲ್ಲಿ ಕರ್ನಾಟಕದಲ್ಲಿ 200ಯುನೀಟ್ ವರೆಗೂ ಉಚಿತವಾಗಿ ಪ್ರತಿ ತಿಂಗಳು ಪ್ರತಿ ಮನೆಗೂ ನೀಡುವ ಭರವಸೆ ನೀಡುತ್ತಿದೆ ಕಾಂಗ್ರೇಸ್ ಪಕ್ಷ. ಇನ್ನೂ ಹಲವು ಮಾಡೆಲ್ ಗೋಳನ್ನು ಕಾಪಿ ಮಾಡಿದ್ದಾರೆ . ಅದರ ಬಗ್ಗೆ ನಮಗೆ ಖುಷಿ ಇದೆ.ಮಾಡಿದರೆ ಮಾಡಲಿ ಆದರೆ ಭ್ರಷ್ಟಾಚಾರ ರಹಿತವಾಗಿ ಮಾಡಲಿ ಎಂದು ಹೇಳಿದರು
ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ತಿರುಗೇಟು ಕೊಟ್ಟ ಹೆಚ್.ಡಿ.ಕುಮಾರಸ್ವಾಮಿ..
ಪಾಕ್ ಉಗ್ರ ಅಬ್ದುಲ್ ರೆಹಮಾನ್ ಮಕ್ಕಿಯನ್ನು ಜಾಗತಿಕ ಭಯೋತ್ಪಾದಕರ ಪಟ್ಟಿಗೆ ಸೇರಿಸಿದ ಭದ್ರತಾ ಮಂಡಳಿ
ಇಂದು ಬೆಂಗಳೂರಿಗೆ ಆಗಮಿಸಲಿರುವ ಪ್ರಿಯಾಂಕಾ ಗಾಂಧಿ : ರಾಜ್ಯ ಮಹಿಳಾ ಕಾಂಗ್ರೆಸ್ ಭರ್ಜರಿ ತಯಾರಿ