Sunday, September 8, 2024

Latest Posts

ಕಮಲ ಅರಳುವುದಿಲ್ಲ, ಕೈ ಇಳಿಸುತ್ತದೆ ಹಾಗಾಗಿ “ಪೊರಕೆಯೆ ಪರಿಹಾರ”

- Advertisement -

ಹಾಸನ:

ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣ ಮಾಡಲು ಪೊರಕೆಯೇ ಪರಿಹಾರ ಎನ್ನುವ ಅಭಿಯಾನದಲ್ಲಿ ಅಗಿಲೆ ಯೋಗೀಶ್ ನೇತೃತ್ವದಲ್ಲಿ ನಗರದ ವಲ್ಲಬಾಯಿ ರಸ್ತೆ, ಸಂತೇಪೇಟೆಯಲ್ಲಿ ನಡೆದ ಪಾದಯಾತ್ರೆಯಲ್ಲಿ ನೂರಾರು ಜನರು ಪಾಲ್ಗೊಂಡಿದ್ದರು.

​ ​ ​ ​ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಎಎಪಿ ಮುಖಂಡರಾದ ಅಗಿಲೆ ಯೋಗೀಶ್ ಅವರು, ಭ್ರಷ್ಟಾಚಾರ ಮುಕ್ತ ಹಾಸನ ಮತ್ತು ಸಮಾಜಕ್ಕಾಗಿ ಪೊರಕೆಯೇ ಪರಿಹಾರ ಎನ್ನುವ ಅಭಿಯಾನದಡಿ ೮ನೇ ದಿನಕ್ಕೆ ಕಾಲಿಟ್ಟಿದ್ದು, ನಗರದ ಪ್ರತಿ ವಾರ್ಡ್ ಮತ್ತು ಬೀದಿಗಳಲ್ಲಿ ನಾವುಗಳು ಪಾದಯಾತ್ರೆ ಮಾಡುವುದರ ಮೂಲಕ ಮತದಾರರಿಗೆ ಚುನಾವಣೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ನಿಮ್ಮ ಮತಗಳ ಬೆಲೆ ಎಷ್ಟು? ಮತ ಹಾಕವುದರಿಂದ ನಿಮ್ಮ ತೆರಿಗೆ ಹಣ ನಿಮಗೆ ಬರಬೇಕಾದರೇ ನಿಮ್ಮ ಅಮುಲ್ಯವಾದ ಮತವನ್ನು ಆಮ್ ಆದ್ಮಿಗೆ ಹಾಕಬೇಕು. ಎಲ್ಲಾರಿಗೂ ಸ್ವಂತ ನಿವೇಶನ ಸಿಕ್ಕಿ ಮನೆ ಆಗಬೇಕು. ಎಲ್ಲಾರು ಸ್ವಾವಲಂಬಿಯಿಂದ ಬದುಕಬೇಕು. ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗಬೇಕು. ಎಲ್ಲಾ ರೈತರು ಗಟ್ಟಿಯಾಗಿ ನಾನೋಬ್ಬ ರೈತ ಎಂದು ಹೇಳುವ ಪರಿಸ್ಥಿತಿ ಬರಬೇಕು ಎಂಬುದು ನಮ್ಮ ಎಎಪಿ ಪಕ್ಷದ ಪ್ರಮುಖ ಉದ್ದೇಶಗಳಾಗಿವೆ ಎಂದು ಹೇಳಿದರು. ಬಿಜೆಪಿಯೇ ಭರವಸೆ ಎಂದು ಆರಂಭಿಸಿರುವುದು ಎಷ್ಟು ಒಳ್ಳೆಯದು. ಯಾವ ರೀತಿ ಈಡೇರಿಸಿದ್ದಾರೆ ಎನ್ನುವ ವಿಚಾರವನ್ನು ಕೂಡ ಜನರಿಗೆ ಹೇಳಲಾಗುವುದು. ೩೦೦ ರೂಗಳಿದ್ದ ಗ್ಯಾಸ್ ಬೆಲೆಯನ್ನು ಪ್ರಸ್ತುತ ೧೩೦೦ ರೂಗಳ ಏರಿಕೆ ಮಾಡಿರುವುದು ಒಳ್ಳೆಯ ಭರವಸೆ. ೪೦೦ ರೂಗಳಿದ್ದ ರಸಗೊಬ್ಬರವನನು ೧೪೦೦ ರೂಗಳು, ೬೦ ರೂಗಳಿದ್ದ ಪೆಟ್ರೋಲ್ ಬೆಳೆಯನ್ನು ೧೧೦ ಹಾಗೂ ಅಡುಗೆ ಎಣ್ಣೆ ಲೀಟರ್ಗೆ ೬೦ ರೂಗಳು ಇದ್ದುದು ಇಂದು ೧೮೦ ರಿಂದ ೨೦೦ ರೂಗಳಾಗಿ ಮಾಡಿರುವುದೇ ಬಿಜೆಪಿಯ ಭರವಸೆ. ಇಂತಹ ಭರವಸೆಯನ್ನು ಪೊರಕೆ ಮೂಲಕ ಗುಡಿಸುವ ಕೆಲಸವನ್ನು ಮಾಡಲಾಗುವುದು. ಇದಕ್ಕೆಲ್ಲ ಈ ಪೊರಕೆಯೇ ಪರಿಹಾರ. ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷವನ್ನು ಗುಡಿಸುವುದಕ್ಕೆ ಪೊರಕೆಯಿಂದ ಮಾತ್ರ ಸಾಧ್ಯ ಎಂದು ತಿಳಿಸಿದರು.

​ ​ ​ ​ ​ ಇದೆ ವೇಳೆ ಎಎಪಿ ಜಿಲ್ಲಾಧ್ಯಕ್ಷ ಆನಂದ್, ಪ್ರಧಾನ ಕಾರ್ಯದರ್ಶಿ ದಸ್ತಗೀರ್, ಸಂಘಟನ ಕಾರ್ಯದರ್ಶಿ ಸುಂದರೇಶ್, ಅಬೀಬ್, ನಗರಾಧ್ಯಕ್ಷ ನಜೀರ್ ಅಹಮದ್, ಗ್ರಾಮಾ ಪಂಚಾಯಿತಿ ಸದಸ್ಯ ಮಂಜಣ್ಣ, ಮಹಿಳಾ ಜಿಲ್ಲಾ ಉಪಾಧ್ಯಕ್ಷೆ ಶಹನಾಜ್ ಇತರರು ಉಪಸ್ಥಿತರಿದ್ದರು.

ಮಗುವನ್ನು ಬಿಟ್ಟು ವಿಮಾನ ಹತ್ತಲು ಮುಂದಾದ ದಂಪತಿ..?! ಮರೆತು ಹೋಯಿತೇ ಮಮತೆ..?!

ಅದಾನಿ ಸಾಮ್ರಾಜ್ಯ ಪತನ ೩ ರಿಂದ ೧೧ ಕ್ಕೆ ಇಳಿಕೆ

ಬಡವರಿಗೆ ಭಾರವಾದ ಬಂಗಾರ

- Advertisement -

Latest Posts

Don't Miss