Thursday, August 7, 2025

Latest Posts

ಶಿವಣ್ಣನ ಕಾಲಿಗೆ ನಮಸ್ಕರಿಸಿದ ಆರಾಧ್ಯಾ: ಅಮ್ಮ ಕಲಿಸಿದ ಸಂಸ್ಕಾರಕ್ಕೆ ಎಲ್ಲರಿಂದ ಹೊಗಳಿಕೆ

- Advertisement -

Movie News: ಪ್ರತೀ ವರ್ಷದಂತೆ ಈ ವರ್ಷವೂ ದುಬೈನಲ್ಲಿ ಸೈಮಾ ಅವಾರ್ಡ್ ಫಂಕ್ಷನ್ ನಡೆದಿದೆ. ಭಾರತದ ಎಲ್ಲಾ ಭಾಷೆಯ ನಟ ನಟಿಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಈ ಕಾರ್ಯಕ್ರಮ ನಡೆದು ಸುಮಾರು ದಿನಗಳಾಗಿದ್ದರೂ, ಇದರ ಫೋಟೋ, ವೀಡಿಯೋ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅದೇ ರೀತಿ ನಟಿ ಐಶ್ವರ್ಯಾ ರೈ ತಮ್ಮ ಮಗಳು ಆರಾಧ್ಯಾ ಜೊತೆ ಈ ಕಾರ್ಯಕ್ರಮಕ್ಕೆ ಹೋಗಿದ್ದರು. ಅಮ್ಮ ಅವಾರ್ಡ್ ತೆಗೆದುಕೊಳ್ಳುವ ಸಿಹಿ ಕ್ಷಣವನ್ನು ಆರಾದ್ಯ ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದ ಫೋಟೋ ಸಖತ್ ವೈರಲ್ ಆಗುತ್ತಿದೆ.

ಇದರೊಂದಿಗೆ ಆರಾಧ್ಯ, ಅವಾರ್ಡ್ ಫಂಕ್ಷನ್‌ಗೆ ಆಗಮಿಸಿದ್ದ ನಮ್ಮ ಶಿವಣ್ಣನನ್ನು ಕಂಡ ತಕ್ಷಣ, ಎರಡೂ ಕೈ ಜೋಡಿಸಿ, ನಮಸ್ಕಾರ ಮಾಡಿದ್ದಲ್ಲದೇ, ಅವರ ಕಾಲಿಗೆರಗಿ ನಮಸ್ಕಾರ ಮಾಡಿ, ಗೌರವ ನೀಡಿದ್ದಾಳೆ. ಈಕೆಯ ಈ ಸಂಸ್ಕಾರಕ್ಕೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇವಳಮ್ಮ ಇವಳಿಗೆ ಅದೆಷ್ಟು ಒಳ್ಳೆಯ ಸಂಸ್ಕಾರ ನೀಡಿದ್ದಾರೆ. ಇದೇ ಕಾರಣಕ್ಕೆ ಐಶ್ವರ್ಯಾ ನಮಗೆ ಹೆಚ್ಚು ಹೆಚ್ಚು ಇಷ್ಟಾವಾಗುತ್ತಿರುವುದು ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

ಇಷ್ಟೇ ಅಲ್ಲದೇ, ಇಷ್ಟೊಳ್ಳೆ ಗುಣ ಹೊಂದಿರುವ ಹೆಣ್ಣನ್ನು ಮನೆಯವರೇ ಶತ್ರುವಂತೆ ನೋಡುತ್ತಿದ್ದಾರೆ ಎಂದು ಕೆಲ ನೆಟ್ಟಿಗರು ಬಚ್ಚನ್ ಕುಟುಂಬದ ವಿರುದ್ಧ ಕಿಡಿಕಾರಿದ್ದಾರೆ. ಏಕೆಂದರೆ, ಅಂಬಾನಿ ಫಂಕ್ಷನ್, ಬೇರೆ ಬೇರೆ ಅವಾರ್ಡ್ ಫಂಕ್ಷನ್‌ಗಳಲ್ಲಿ ಐಶ್ವರ್ಯಾ, ಮಗಳು ಆರಾಧ್ಯಾ ಜೊತೆ ಹೆಚ್ಚು ಕಾಣಿಸಿಕೊಳ್ಳುತ್ತಿದ್ದು, ಅಭಿಷೇಕ್ ಮಾತ್ರ, ಅಪ್ಪ ಅಮ್ಮ, ತಂಗಿಯೊಂದಿಗೆ ಕಾಣಿಸಿಕೊಂಡಿದ್ದರು.

- Advertisement -

Latest Posts

Don't Miss