Friday, July 11, 2025

Latest Posts

ಬೆಳಗಾವಿ ಪಾಲಿಕೆ ಆಯುಕ್ತರ ಮನೆ ಮುಂದೆ ಕಸ ಡಂಪ್ ಮಾಡಿದ ಶಾಸಕ ಅಭಯ್ ಪಾಟೀಲ್

- Advertisement -

www.karnatakatv.net : ಬೆಳಗಾವಿ:  ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಕಸವನ್ನು ಸ್ವಚ್ಚತೆ ಮಾಡದ ಮಹಾನಗರ ಪಾಲಿಕೆ ಅಧಿಕಾರಿ ಜಗದೀಶ ಕೆ.ಎಚ್. ಅವರ ಸರಕಾರಿ ಮನೆ ಮುಂದೆ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಓರ್ವರು ಟ್ರ್ಯಾಕ್ಟರ್ ಚಲಾಯಿಸಿಕೊಂಡು ಹೋಗಿ ಮಹಾನಗರ ಪಾಲಿಕೆ ಆಯುಕ್ತರ ಮನೆ ಮುಂದೆ ಕಸವನ್ನು ಸುರಿದಿರುವ ಘಟನೆ ಬೆಳಗಾವಿ ನಗರದಲ್ಲಿ ನಡೆದಿದೆ.

 ಹೌದು ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ್ ತಮ್ಮ ಕ್ಷೇತ್ರದಲ್ಲಿ ಸರಿಯಾಗಿ ಕಸವಿಲೇವಾರಿ ಆಗದೇ ಇರುವುದರಿಂದ ಆಕ್ರೋಶಗೊಂಡು ವಿಶ್ವೇಶ್ವರಯ್ಯ ನಗರದಲ್ಲಿ ಇರುವ ಪಾಲಿಕೆ ಆಯುಕ್ತ ಜಗದೀಶ್ ಕೆ.ಎಚ್ ಅವರ ನಿವಾಸದ ಮುಂದೆ ಇಂದು ಬೆಳಗಿನ ಜಾವ ಕಸವನ್ನು ಬೀಸಾಕಿದ್ದಾರೆ. ತಮ್ಮ ತಂಡದೊಂದಿಗೆ ತಾವೇ ಸ್ವತಃ ಕಸ ತುಂಬಿದ್ದ ಟ್ರ್ಯಾಕ್ಟರ್ ಚಲಾಯಿಸಿಕೊಂಡು ಬಂದ ಅಭಯ್ ಪಾಟೀಲ್ ಕಸವನ್ನು ಪಾಲಿಕೆ ಆಯುಕ್ತರ ಮನೆಯ ಗೇಟ್ ಮುಂದೆ ಡಂಪ್ ಮಾಡಿದ್ದಾರೆ.ನಂತರ ಕಸವನ್ನು  

ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಅವರು ತಮ್ಮ ತಂಡದ ಸದಸ್ಯರೊಂದಿಗೆ ಮನೆ ಗೇಟ್ ತುಂಬಾ ಕಸವನ್ನು  ಹರಡಿದ್ದಾರೆ. ಒಟ್ಟಿನಲ್ಲಿ ಓರ್ವ ಜವಾಬ್ದಾರಿಯುತ ಶಾಸಕರಾಗಿ ಈ ರೀತಿ ಅಧಿಕಾರಿಗಳ ಮನೆ ಮುಂದೆ ಕಸವನ್ನು ಚೆಲ್ಲಿದ್ದು ಎಷ್ಟು ಸರಿ ಎಂಬ ಪ್ರಶ್ನೆ ಸಧ್ಯ ಉದ್ಭವವಾಗಿದೆ.

- Advertisement -

Latest Posts

Don't Miss