Sunday, April 13, 2025

Latest Posts

Abhishek Bacchan : ಅಭಿಷೇಕ್ ಬಚ್ಚನ್ ರಾಜಕೀಯಕ್ಕೆ ಎಂಟ್ರಿ..?!

- Advertisement -

Film News : ರಾಜಕೀಯಕ್ಕೆ ಎಂಟ್ರಿ ಕೊಡ್ತಾರಂತೆ ಆ ಬಿಗ್ ಸ್ಟಾರ್ . ಸದ್ಯ ಗಲ್ಲಾಪೆಟ್ಟಿಗೆ ಯಲ್ಲಿ ಹರಿದಾಡ್ತಿರೋ  ಹಾಟ್ ಸುದ್ದಿ ಇದು. ಅವರ ಕುಟುಂಬಕ್ಕೇನು ರಾಜಕೀಯ  ಹೊಸದಲ್ಲ  ಆದ್ರೂ ಬಿಗ್ ಕುಟುಂಬದ ಕುಡಿಯೊಂದು ರಾಜಕೀಯಕ್ಕೆ ಎಂಟ್ರಿ ಆಗೋ ಸುದ್ದಿ ಕೇಳಿ ಬರ್ತಿದೆ. 

ಬಾಲಿವುಡ್ ನ ಬಿಗ್  ಬೀ ಕುಟುಂಬವದು…ಈ ಕುಟುಂಬಕ್ಕೆ ರಾಜಕೀಯವೇನು  ಹೊಸದಲ್ಲಆದ್ರೂ ಈಗ ಹಂಗಾಮದ ಸುದ್ದಿ ಅಂದ್ರೆ ಬಿಗ್ ಬೀ ಕುಟುಂಬದ ಕುಡಿ ರಾಜಕೀಯಕ್ಕೆ ಎಂಟ್ರಿ… ಹೌದು ಅಭಿಷೇಕ್  ಬಚ್ಚನ್ ರಾಜಕೀಯಕ್ಕೆ ಸೇರ್ತಾರೆ ಅನ್ನೋ ಸುದ್ದಿ.ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಆ್ಯಕ್ಟೀವ್  ಆಗಿದ್ದಾರೆ ಅಭಿಷೇಕ್ ಬಚ್ಚನ್. ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಈಗ ಅಭಿಷೇಕ್ ಬಚ್ಚನ್ ಅವರು ರಾಜಕೀಯಕ್ಕೆ ಕಾಲಿಡಲಿದ್ದಾರೆ ಎನ್ನುವ ಸುದ್ದಿ ಜೋರಾಗಿದೆ. ಇದನ್ನು ಅವರ ಆಪ್ತರು ಅಲ್ಲಗಳೆದಿದ್ದಾರೆ. ಈ ವಿಚಾರದಲ್ಲಿ ಅವರ ಕಡೆಯಿಂದ ಅಧಿಕೃತ ಮಾಹಿತಿ ಸಿಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.

ಬಚ್ಚನ್ ಕುಟುಂಬಕ್ಕೆ ರಾಜಕೀಯ ಹೊಸದೇನು ಅಲ್ಲ. ಅಭಿಷೇಕ್ ತಾಯಿ ಜಯಾ ಅವರು ರಾಜಕೀಯದಲ್ಲಿ ಗುರುತಿಸಿಕೊಂಡವರು. ಸಮಾಜವಾದಿ ಪಕ್ಷದ ಸದಸ್ಯೆ. ಅಮಿತಾಭ್ ಬಚ್ಚನ್ ಕೂಡ ಒಮ್ಮೆ ರಾಜಕೀಯಕ್ಕೆ ಎಂಟ್ರಿ ಕೊಟ್ಟು ಬಂದಿದ್ದರು. ಈಗ ಅಭಿಷೇಕ್ ಬಚ್ಚನ್ ಕೂಡ ರಾಜಕೀಯಕ್ಕೆ ಎಂಟ್ರಿ ಪಡೆಯಲಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ಹಬ್ಬಿದೆ.ಈ ಸುದ್ದಿ ಹಬ್ಬಲು ಒಂದು ಕಾರಣ ಇದೆ. ಪ್ರಯಾಗ್​ರಾಜ್ ಲೋಕಸಭಾ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಕಾರ್ಯಕರ್ತರು ಅಭಿಷೇಕ್ ಬಚ್ಚನ್​ ಅವರ ಜನಪ್ರಿಯತೆ ಬಗೆ ಸಮೀಕ್ಷೆಯನ್ನು  ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಇದು ಅವರ ಪಾಲಿಟಿಕ್ಸ್ ಎಂಟ್ರಿ ಸುದ್ದಿ ಹುಟ್ಟಿಕೊಳ್ಳಲು ಮುಖ್ಯ ಕಾರಣ. ಆದರೆ, ಅಭಿಷೇಕ್ ಬಚ್ಚನ್​ಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲವಂತೆ. ರಾಜಕೀಯ ಎಂಟ್ರಿ ವಿಚಾರದ ಸುದ್ದಿ ಕೇಳಿ ಅವರಿಗೆ ಅಚ್ಚರಿ ಆಗಿದೆಯಂತೆ. ನಟನೆ ಅವರ ಪ್ಯಾಷನ್. ಈ ಬಗ್ಗೆ ಅಭಿಷೇಕ್ ಬಚ್ಚನ್ ಅವರು ಅಧಿಕೃತ ಹೇಳಿಕೆ ಬಿಡುಗಡೆ ಮಾಡಬೇಕಿದೆ.

ಇತ್ತೀಚೆಗೆ ರಿಲೀಸ್ ಆದ ಅಜಯ್ ದೇವಗನ್ ನಟನೆಯ ‘ಭೋಲಾ’ ಸಿನಿಮಾದಲ್ಲಿ ಅಭಿಷೇಕ್ ಅತಿಥಿ ಪಾತ್ರ ಮಾಡಿದ್ದಾರೆ. ಸದ್ಯ ‘ಗೂಮರ್’ ಸಿನಿಮಾ ಕೆಲಸಗಳಲ್ಲಿ ಅವರು ಬ್ಯುಸಿ ಆಗಿದ್ದಾರೆ. ವೆಬ್​ ಸೀರಿಸ್​ಗಳಲ್ಲೂ ಅಭಿಷೇಕ್ ಅವರು ನಟಿಸುತ್ತಿದ್ದಾರೆ ಎಂಬ ಮಾಹಿತಿ ಇದೆ.

Aadi Lokesh:ಪೂಜಾರಿ ಸಿನಿಮಾದ ನಟ ಆದಿಲೋಕೇಶ್ ಈಗ ಧಾರವಾಹಿಯಲ್ಲಿ

Jagapathi babu: ಸಲಾರ್ ಸಿನಿಮಾದಲ್ಲಿ ಜಗಪತಿಬಾಬು

Rashmika mandanna: ರಶ್ಮಿಕಾ ಮಂದಣ್ಣ ಒಂದು ಸಿನಿಮಾದ ಸಂಭಾವನೆ

- Advertisement -

Latest Posts

Don't Miss