Bollywood News: ನಟ ಅಭಿಷೇಕ್ ಬಚ್ಚನ್ ಬಾಲಿವುಡ್‌ನಲ್ಲಿ ಹಲವು ಅತ್ಯುತ್ತಮ ಚಿತ್ರಗಳನ್ನು ನೀಡಿದವರು. ಆದರೆ ಇತ್ತೀಚಿನ ದಿನಗಳಲ್ಲಿ ಅಭಿಷೇಕ್ ನಟನೆಯ ಸಿನಿಮಾಗಳು ಫ್ಲಾಪ್ ಆಗುತ್ತಿದೆ. ಕೆಲ ದಿನಗಳ ಹಿಂದೆ ರಿಲೀಸ್ ಆಗಿದ್ದ 40 ಕೋಟಿ ಬಜೆಟ್ ಸಿನಿಮಾ ಗಳಿಸಿದ್ದು ಬರೀ ಒಂದೂವರೆ ಕೋಟಿ ರೂಪಾಯಿ. ಹೀಗಾಗಿ ಬಾಲಿವುಡ್‌ನಲ್ಲಿ ಅಭಿಷೇಕ್ ಬಚ್ಚನ್ ವೃತ್ತಿಜೀವನಕ್ಕೆ ಬ್ರೇಕ್ ಬೀಳತ್ತಾ ಅಂತಾ ಗುಸುಗುಸು ಶುರುವಾಗಿದೆ.
ಐ ವಾಂಟ್ ಟೂ ಟಾಕ್ ಎಂಬ ಸಿನಿಮಾದಲ್ಲಿ ಅಭಿಷೇಕ್ ನಟಿಸಿದ್ದು, ಕೋಟಿ ಕೋಟಿ ದುಡ್ಡು ಸುರಿದು ಈ ಸಿನಿಮಾ ಮಾಡಲಾಗಿತ್ತು. ಆದರೆ ಈ ಸಿನಿಮಾ ಗಳಿಸಿದ್ದು ಬರೀ ಒಂದೂವರೆ ಕೋಟಿ ರೂಪಾಯಿ. ಯಾಕಂದ್ರೆ ಈ ಸಿನಿಮಾಗೆ ಅಷ್ಟು ಪ್ರಚಾರ ನೀಡಿರಲಿಲ್ಲ. ತಂದೆ ಮಗಳ ಬಾಂಧವ್ಯದ ಬಗ್ಗೆ ಈ ಸಿನಿಮಾ ಇದ್ದು, ಅಹಲ್ಯಾ ಬಮ್ರೂ ನಟಿಸಿದ್ದಾರೆ.
ಈ ಸಿನಿಮಾ ಗಳಿಗೆ ಕಡಿಮೆಯಾಗಿದ್ದು, ಇದು ಅಭಿಷೇಕ್ ಬಚ್ಚನ್ ವೃತ್ತಿ ಜೀವನದ ಅತೀ ಕಡಿಮೆ ಗಳಿಕೆಯ ಸಿನಿಮಾ ಎನ್ನಲಾಗಿದೆ. ಹಾಗಾಗಿ ಅಭಿಷೇಕ್ ಬಚ್ಚನ್ ಸಿನಿಮಾ ಕೇರಿಯರ್ ಮುಗಿಯುತ್ತ ಬಂತಾ ಅನ್ನೋ ಪ್ರಶ್ನೆ ಬಾಲಿವುಡ್‌ನಲ್ಲಿ ಉದ್ಭವಿಸಿದೆ.