Chikkodi News: ಚಿಕ್ಕೋಡಿ: ಬೆಳಗಾವಿ ಭಾಗದಲ್ಲಿ ಕಳೆದ ಒಂದು ತಿಂಗಳಿನಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
ವರುಣಾರ್ಭಟಕ್ಕೆ ಅಲ್ಲಿನ ಜನ ತತ್ತರಿಸಿ ಹೋಗಿದ್ದಾರೆ. ಚಿಕ್ಕೋಡಿ ಉಪವಿಭಾಗದಲ್ಲಿ, ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ನೆರೆ ಸಂತ್ರಸ್ತರು ಪರದಾಟ ನಡೆಸಿದ್ದಾರೆ. ಜಾನುವಾರುಗಳಿಗೆ ನೀಡಲು ಮೇವಿಲ್ಲದೇ, ದನವನ್ನು ಸಾಕಲಾಗದೇ, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಝಂಜರವಾಡದಲ್ಲಿ, ಮೇವು ವಿತರಣೆ ಮಾಡುವ ಸಂದರ್ಭದಲ್ಲಿ ನೂಕುನುಗ್ಗಲು ಸಂಭವಿಸಿದ ಘಟನೆಯೂ ನಡೆಯಿತು. ಮೇವು ತೆಗೆದುಕೊಳ್ಳುವಾಗ ಜನ ಒಬ್ಬರ ಮೇಲೆ ಒಬ್ಬರು ಬಿದ್ದು ಮೇವು ತೆಗೆದುಕೊಳ್ಳಲು ಗ್ರಾಮಸ್ಥರು ಹರಸಾಹಸ ಪಟ್ಟಿದ್ದಾರೆ. ಈ ಅವಘಡಕ್ಕೆ ಕಾರಣ, ಅಲ್ಲಿನ ಅಧಿಕಾರಿಗಳು. ಅಧಿಕಾರಿಗಳು, ಆ ಸ್ಥಳದಲ್ಲಿ ಇದ್ದಿದ್ದರೆ, ಸ್ಥಳದಲ್ಲಿ ಮೇವಿಗಾಗಿ ನೂಕುನುಗ್ಗಲು ಸಂಭವಿಸುತ್ತಿರಲಿಲ್ಲ ಅನ್ನೋದು ಗ್ರಾಮಸ್ಥರ ವಾದ.