Monday, September 9, 2024

Latest Posts

‘ಮೈತ್ರಿ ದೋಸ್ತಿಗಳು ಕುರ್ಚಿ ಆಸೆಗಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ಷಡ್ಯಂತ್ರ ರೂಪಿಸಿದ್ದಾರೆ’

- Advertisement -

Gadag News: ಗದಗ: ಗದಗದಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘದಿಂದ ಪತ್ರಿಕಾಗೋಷ್ಠಿ ನಡೆಸಲಾಯಿತು. ಈ ವೇಳೆ ಬಿಜೆಪಿ ವಿರುದ್ಧ ಹರಿಹಾಯ್ದ ಕುರುಬರು, ಮೈತ್ರಿ ದೋಸ್ತಿಗಳು ಕುರ್ಚಿ ಆಸೆಗಾಗಿ ಸಿಎಂ ಸಿದ್ರಾಮಯ್ಯ ವಿರುದ್ಧ ಷಡ್ಯಂತ್ರ ರೂಪಿಸಿದ್ದಾರೆ. ಜೆಡಿಎಸ್ ನಾಯಕ ಕುಮಾರಸ್ವಾಮಿ ರಾಜ್ಯ ಬಿಜೆಪಿ ನಾಯಕರು ವಿಜೇಯೇಂದ್ರ ಆರ್ ಅಶೋಕ್ ಸೇರಿ ಕೇಂದ್ರದ ಸಹಾಯದಿಂದ, ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಮುಗಿಸಲು ಹೊರಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಮೂಡಾ ಹಗರಣದಲ್ಲಿ ಷಡ್ಯಂತ್ರ ಮಾಡಿ ಸಿದ್ದರಾಮಯ್ಯ ಅವರನ್ನು ಸಿಕ್ಕಿಸಲು ಹೊರಟಿದ್ದಾರೆ. ಇನ್ನು ರಾಜ್ಯಪಾಲರು ಕೂಡ ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ಕೆಲಸಾ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರು ಯಾವದೇ ತಪ್ಪು ಮಾಡಿಲ್ಲ ಅವರು ಹೆದರೋ ಅವಶ್ಯಕತೆ ಇಲ್ಲಾ. ಮೈತ್ರಿ ದೋಸ್ತಿಗಳ ವಿರುದ್ಧ ದಿನಾಂಕ 5 ಆಗಸ್ಟ ರಂದು, ಕುರುಬ ಸಮಾಜ ಬಾಂಧವರಿಂದ ಕಪ್ಪು ಬಟ್ಟೆ ಧರಿಸಿ ಮೌನ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಕುರುಬಸಮಾಜ ಸಧಾ ಸಿದ್ದರಾಮಯ್ಯ ಅವರ ಜೊತೆ ಇರುತ್ತೆ ಎಂದು ಹೇಳಿದ್ದಾರೆ.

- Advertisement -

Latest Posts

Don't Miss