Wednesday, November 26, 2025

Latest Posts

ಪಲಾಶ್ ಮುಚ್ಚಲ್ ಮೇಲೆ ಕೇಳಿಬಂತು ಆರೋಪ..! ಸ್ಮೃತಿಗೆ ಚೀಟ್ ಮಾಡಿದ್ರಾ ಪ್ರಿಯಕರ..?

- Advertisement -

Cricket News: ನವೆಂಬರ್ 23ರಂದು ಆಟಗಾರ್ತಿ ಸ್‌ಮೃತಿ ಮಂದನ ಮತ್ತು ಸಂಗೀತ ಸಂಯೋಜಕ, ಸಂಗೀತಗಾರ ಪಲಾಶ್ ಮುಚ್ಚಲ್ ಮದುವೆ ಫಿಕ್ಸ್ ಆಗಿತ್ತು. ಸಂಗೀತ್, ಹಲ್ದಿ ಹೀಗೆ ಎಲ್ಲ ಕಾರ್ಯಕ್ರಮಗಳು ಕೂಡ ಮುಗಿದು, ಇನ್ನೇನು ಮದುವೆಯಾಗಲು ಕೆಲ ಸಮಯ ಬಾಕಿ ಎನ್ನುವಾಗಲೇ, ಸ್ಮೃತಿ ತಂದೆಗೆ ಹೃದಯಾಘಾತವಾಗಿ, ಅವರು ಆಸ್ಪತ್ರೆಗೆ ದಾಖಲಾದರು. ಮತ್ತು ಈ ಕಾರಣಕ್ಕೆ ಸ್ಮೃತಿ ಮದುವೆ ನಿಂತು ಹೋಯ್ತು ಅಂತಾ ಸುದ್ದಿಯಾಗಿತ್ತು.

ಆದರೆ ಇದೀಗ ಈ ವಿಷಯ ಬೇರೆಯದ್ದೇ ತಿರುವು ಪಡೆಯುತಿದ್ದೆ. ಸ್ಮೃತಿ ಪತಿಯಾಗಬೇಕಿದ್ದ ಪಲಾಶ್ ಮುಚ್ಚಲ್ ಸ್ಮೃತಿಗೆ ಮೋಸ ಮಾಡಿ, ಬೇರೆ ಯುವತಿ ಜತೆ ಫ್ಲರ್ಟ್ ಮಾಡುತ್ತಿದ್ದಾನೆ ಅಂತಾ ಸೋಶಿಯಲ್ ಮೀಡಿಯಾದಲ್ಲಿ ಆರೋಪಿಸಲಾಗುತ್ತಿದೆ. ಏಕೆಂದರೆ ಪಲಾಶ್ ಮೇರಿ ಡಿ ಕೋಸ್ತಾ ಎಂಬಾಕೆಯ ಜತೆ ಚಾಟ್ ಮಾಡಿರುವ ಸ್ಕ್ರೀನ್‌ಶಾಟ್ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಚರ್ಚೆಗೆ ಗ್ರಾಸವಾಗಿದೆ.

ಇದು ಎಷ್ಟು ಸತ್ಯವೋ, ಸುಳ್ಳೋ ಅನ್ನೋದು ಇನ್ನೂ ತಿಳಿದು ಬಂದಿಲ್ಲ. ಜನರ ಹೆಸರು ಹಾಳು ಮಾಡಲು ಕೆಲವು ಕಿಡಿಗೇಡಿಗಳು ಇಂಥ ಆಟಗಳನ್ನು ಆಡ್ತಾರೆ. ಆದರೆ ಸ್ಮೃತಿ ಫ್ಯಾನ್ಸ್ ಇದು ನಿಜವೇ ಅಂತಾ ಅಂದಾಜಿಸುತ್ತಿದ್ದಾರೆ. ಇದಕ್ಕೆ ಕಾರಣವೂ ಇದೆ. ಸ್ಮೃತಿ ಮದುವೆ ದಿನಕ್ಕೂ ಮುಂಚೆ ಮದುವೆಗೆ ಸಂಬಂಧಿಸಿದ ಫೋಟೋ, ವೀಡಿಯೋ, ಹಲ್ದಿ ಸೆರೆಮನಿ ಫೋಟೋ, ಸಂಗೀತ್ ಫೋಟೋ, ಪಲಾಶ್ ಪ್ರಪೋಸ್ ಮಾಡುವ ವೀಡಿಯೋ ಇದೆಲ್ಲವನ್ನೂ ತಮ್ಮ ಇನ್‌ಸ್ಟಾ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು.

ಆದರೆ ಮದುವೆ ಮುಂದೂಡಲಾಗಿದೆ ಅನ್ನೋ ಸುದ್ದಿ ಹರಿದಾಡಿದ ಕೆಲ ಸಮಯದಲ್ಲೇ ಸ್ಮೃತಿ ಎಲ್ಲ ಫೋಟೋ, ವೀಡಿಯೋಗಳನ್ನು ಡಿಲೀಟ್ ಮಾಡಿದ್ದಾರೆ. ಹೀಗಾಗಿ ಸ್ಮೃತಿ ಫ್ಯಾನ್ಸ್‌ಗೆ ಇಲ್ಲಿ ಏನೋ ಸಮಸ್ಯೆ ಇದೆ ಅಂತಲೇ ಅನ್ನಿಸುತ್ತಿದೆ.

ಇನ್ನು ಪಲಾಶ್ ಮೇರಿ ಜತೆ ಚಾಟ್ ಮಾಡಿದ್ದೇನು ಎಂದರೆ, ಮೇರಿಗೆ ಈಜಲು ಸ್ವಿಮ್ಮಿಂಗ್ ಪೂಲ್‌ಗೆ ಕರೆದಿದ್ದಾನೆ. ಜತಗೆ ಸ್ಪಾ, ಬೀಚ್‌ಗೆ ಹೋಗೋಣವೆಂದು ಕರೆದಿದ್ದಾರೆ. ಆದರೆ ಇದು ಪಲಾಶ್ ಬರೆದ ಮೆಸೇಜೋ ಅಥವಾ ಕಿಡಿಗೇಡಿಗಳು ಹರಿಬಿಟ್ಟಿರುವ ಸುಳ್ಳು ಸುದ್ದಿಯೋ ಅಂತಾ ಕನ್ಪರ್ಮ್ ಆಗಬೇಕಷ್ಟೇ.

ಇನ್ನು ಪಲಾಶ್ ಸಹೋದರಿ, ಪ್ರಖ್ಯಾತ ಗಾಯಕಿ ಆಗಿರು ಪಲಕ್ ಮುಚ್ಚಲ್ ಅವರು ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದಿದ್ದು, ನಾವೀಗ ಸಂದಿಗ್ಧ ಪರಿಸ್ಥಿತಿಯಲ್ಲಿದ್ದೇವೆ. ನಮ್ಮ ಗೌಪ್ಯತೆಯನ್ನು ಗೌರವಿಸಿ. ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಸುದ್ದಿ ನಂಬಬೇಡಿ ಎಂದಿದ್ದಾರೆ.

- Advertisement -

Latest Posts

Don't Miss