Friday, November 8, 2024

Latest Posts

ಸುಳ್ಳು ಸುದ್ದಿ ಹರಡಿದ್ದಾರೆಂದು ಆರೋಪ: ಸಂಸದ ತೇಜಸ್ವಿ ಸೂರ್ಯ ವಿರುದ್ಧ ಎಫ್‌ಐಆರ್ ದಾಖಲು

- Advertisement -

Political News: ರೈತರ ಆತ್ಮಹತ್ಯೆ ವಿಚಾರವಾಗಿ, ತೇಜಸ್ವಿ ಸೂರ್ಯ ಸುಳ್ಳು ಮಾಹಿತಿ ಹರಡಿರುವ ಆರೋಪದ ಮೇಲೆ, ಸಂಸದರ ವಿರುದ್ಧ ಹಾವೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಹಾವೇರಿಯಲ್ಲಿ ವ್ಯಕ್ತಿಯೊಬ್ಬರು ನೀಡಿದ ದೂರಿನ ಮೇರೆಗೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಹಾವೇರಿಯಲ್ಲಿ ಓರ್ವ ರೈತ ಆತ್ಮಹತ್ಯೆಗೆ ಶರಣಾಗಿದ್ದ. ಈ ಸಮಯದಲ್ಲಿ ವಕ್ಫ್ ಬೋರ್ಡ್ ನೊಟೀಸ್ ಕೇಸ್ ನಡೆಯುತ್ತಿದ್ದು, ವಕ್ಫ್ ನೋಟೀಸ್ ಕೊಟ್ಟ ಕಾರಣಕ್ಕಾಗಿಯೇ, ರೈತ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಸಂಸದ ತೇಜಸ್ವಿ ಸೂರ್ಯ ಟ್ವೀಟ್ ಮಾಡಿದ್ದರು.

ರುದ್ರಪ್ಪ ಎಂಬಾತ ಆತ್ಮಹತ್ಯೆಗೆ ಶರಣಾಗಿದ್ದು, ಈ ರೈತ ವಕ್ಫ್ ನೊಟೀಸ್‌ಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಟ್ವೀಟ್ ಮಾಡಿದ್ದರು. ಆದರೆ ಅವರು ಸಾಲಬಾಧೆಯಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ. ಈ ಕಾರಣಕ್ಕೆ ವ್ಯಕ್ತಿಯೊಬ್ಬರು ಕೊಟ್ಟ ದೂರಿನ ಮೇರೆಗೆ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಈ ಮಧ್ಯೆ ಮೃತರೈತ ರುದ್‌ರಪ್ಪ ಕುಟುಂಬಸ್ಥರು ವಕ್ಫ್ ಸಮಿತಿಗೂ ದೂರು ನೀಡಿದ್ದು, ವಕ್ಫನಿಂದ ಅನ್ಯಾಯವಾಗಿದೆ ಎಂದು ದೂರು ನೀಡಿದ್ದರು.

- Advertisement -

Latest Posts

Don't Miss